ಅನುಬಂಧ ಅವಾರ್ಡ್ಸ್‌ ಕಳೆ ಹೆಚ್ಚಿಸಿದ ಬಿಬಿಕೆ 10 ಸ್ಪರ್ಧಿಗಳು… ಸಂಗೀತಾ ಅವತಾರ ಕಂಡು ಫ್ಯಾನ್ಸ್ ಶಾಕ್

First Published | Sep 19, 2024, 12:01 AM IST

ಕಲರ್ಸ್ ಕನ್ನಡದ ವಾರ್ಷಿಕ ಜಾತ್ರೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು, ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಗಳು ಸಹ ಮಿಂಚಿದ್ದರು. 
 

ಕಲರ್ಸ್ ಕನ್ನಡದ  (Colors Kannada) ದೊಡ್ಡ ಹಬ್ಬವಾಗಿರುವ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳು ಭಾಗವಹಿಸಿ ಸಂಭ್ರಮಿಸಿದ್ದಾರೆ. 
 

ಡ್ರೋನ್ ಪ್ರತಾಪ್ (Drone Prathap) ಸಿಂಪಲ್ ಆಗಿ ಬ್ಲ್ಯಾಕ್ ಬಣ್ಣದ ಟಿಶರ್ಟ್, ಜೀನ್ಸ್ ಧರಿಸಿ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇವರನ್ನ ನೋಡಿ ಬಿಗ್ ಬಾಸ್ ನಿಜವಾದ ವಿನ್ನರ್ ಇವರೇ ಅಂತಿದ್ದಾರೆ ಅಷ್ಟೇ ಅಲ್ಲ ಚಿನ್ನದಂತಹ ಹೃದಯವಿರುವ  ಒಬ್ಬ ಸಾಮಾನ್ಯ ಮನುಷ್ಯ ನಮ್ ದ್ರೋಣ್ ಪ್ರತಾಪ್ ಎಂದು ಕೂಡ ಹೇಳಿದ್ದಾರೆ ಜನ. 
 

Tap to resize

ಬಿಗ್ ಬಾಸ್ ಸೀಸನ್ 10ರ ಸಿಂಹಿಣಿ ಅಂತಾನೆ ಫೇಮಸ್ ಆಗಿರುವ ನಟಿ ಸಂಗೀತಾ ಶೃಂಗೇರಿ (Sangeetha Sringeri) ಬ್ಲ್ಯಾಕ್ ಬಣ್ಣದ ಗೌನ್ ಧರಿಸಿ ಸಖತ್ತಾಗಿ ಮಿಂಚಿದ್ದಾರೆ. ವಿಚಿತ್ರ ಹೇರ್ ಸ್ಟೈಲ್ ಮಾಡಿ, ತಲೆ ಮೇಲೆ ನಾಲ್ಕೈದು ರೋಸ್ ಗಳನ್ನು ಸಾಲು ಸಾಲಾಗಿ ಇಟ್ಟಿಕೊಂಡಿರುವ ಸಂಗೀತಾ ನೋಡಿ ಜನ ಶಾಕ್ ಆಗಿದ್ದಾರೆ. ಇದೆಂಥಾ ವೇಷ ಅಂತ ಕೇಳ್ತಿದ್ದಾರೆ. 
 

ಬಿಗ್ ಬಾಸ್ ಸೀಸನ್ 10ರ ಫೇವರಿಟ್ ಆಗಿರುವ ಸಿರಿಜಾ ಸಿಂಪಲ್ ಆಗಿ ಸೀರೆಯುಟ್ಟು ಬಂದಿದ್ರೆ, ರ್ಯಾಪರ್ ಇಶಾನಿ (Ishani) ಕಪ್ಪು ಬಣ್ಣದ ಗೌನ್ ಧರಿಸಿದ್ರು, ತುಕಾಲಿ ಇವರಿಗೆ ಸಾತ್ ನೀಡಿದ್ರು. ಇವ್ರನ್ನ ನೋಡಿ ಜನ ಬಕೆಟ್ ಅಂತ ಕಾಮೆಂಟ್ ಕೂಡ ಮಾಡಿದ್ದಾರೆ. 
 

ಬ್ಲ್ಯಾಕ್ ಶರ್ಟ್ , ಕಪ್ಪು ಬ್ಲೇಸರ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಸಂತೋಷ್ ವರ್ತೂರ್ (Varthur Santhosh) ನೋಡಿ, ಜನ ಖುಷಿ ಪಟ್ಟಿದ್ದು, ಸಖತ್ತಾಗಿ ಕಾಣಿಸ್ತಿದ್ದೀರಿ ಎಂದಿರುವ ಜನರು ಜೊತೆಗೆ ತನಿಷಾ ಮೇಡಂ ಎಲ್ಲಿ ಅಂತ ಕೇಳಿದ್ದಾರೆ. 
 

ಬಿಗ್ ಬಾಸ್ ಸೀಸನ್ 10ರ ಮೂಲಕ ಜನಪ್ರಿಯತೆ ಗಳಿಸಿದ ನೀತು ವನಜಾಕ್ಷಿ ಸಹ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ. ಇವರು ಗ್ರೀನ್ ಬಣ್ಣದ ಸ್ಲೀವ್ ಲೆಸ್ ಗೌನ್ ನಲ್ಲಿ ಮಿಂಚಿದ್ದಾರೆ. 
 

ಬಿಗ್ ಬಾಸ್ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ (Karthik Mahesh) ಬಿಳಿ ಶರ್ಟ್ ಮೇಲೆ ಗ್ರೀನ್ ಬಣ್ಣದ ಜಾಕೆಟ್ ಧರಿಸಿದ್ದು, ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗೀತಾ ಮತ್ತು ಕಾರ್ತಿಕ್ ಜೊತೆಯಾಗಿ ಡ್ಯಾನ್ಸ್ ಮಾಡಬೇಕೆಂದು ಜನರು ಹಾರೈಸಿದ್ದಾರೆ. 
 

ಇನ್ನು ಭಾಗ್ಯಶ್ರೀ ಮತ್ತು ಸ್ನೇಹಿತ್ ಗೌಡ (Snehith Gowda) ಸಹ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ. ಈ ಬಾರಿಯ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಯೂತ್ ಐಕಾನ್ ಪ್ರಶಸ್ತಿಯನ್ನು ಸಂಗೀತಾ ಶೃಂಗೇರಿ ಮತ್ತು ಬೆಸ್ಟ್ ಎಂಟರ್ ಟೇನರ್ ಪ್ರಶಸ್ತಿಯನ್ನು  ಕಾರ್ತಿಕ್ ಮಹೇಶ್ ಪಡೆಯಲಿದ್ದಾರೆ ಎನ್ನುವ ಗುಸು ಗುಸು ಸಹ ಹೆಚ್ಚಾಗಿದೆ. 
 

Latest Videos

click me!