ಹೀರೋ ಆಗ್ತಿದ್ದಂಗೆ ಬದಲಾಯ್ತು ಡ್ರೋನ್ ಪ್ರತಾಪ್ ಗೆಟಪ್…. ಸಖತ್ತಾಗಿದೆ ಹೊಸ ಫೋಟೊ ಶೂಟ್!

Published : Dec 10, 2024, 12:51 PM ISTUpdated : Dec 10, 2024, 01:00 PM IST

ತಮ್ಮ ಮಾತುಗಳಿಂದಲೇ ಸದ್ದು ಮಾಡಿ, ಬಳಿಕ ಬಿಗ್ ಬಾಸ್ ಮೂಲಕ ಮನೆಮಾತಾದ ಡ್ರೋನ್ ಪ್ರತಾಪ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಹೀರೋ ಆಗ್ತಿದ್ದಂಗೆ ಗೆಟಪ್ ಚೇಂಜ್ ಆಗೋಯ್ತಾ ಕೇಳ್ತಿದ್ದಾರೆ ಜನ.   

PREV
17
ಹೀರೋ ಆಗ್ತಿದ್ದಂಗೆ ಬದಲಾಯ್ತು ಡ್ರೋನ್ ಪ್ರತಾಪ್ ಗೆಟಪ್…. ಸಖತ್ತಾಗಿದೆ ಹೊಸ ಫೋಟೊ ಶೂಟ್!

ಡ್ರೋನ್ ಪ್ರತಾಪ್ (Drone Prathap) ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದು, ನಂತರ ಟ್ರೋಲ್ ಗೆ ಒಳಗಾಗಿ, ಭಾರಿ ವಿವಾದಕ್ಕೆ ಗುರಿಯಾದ ವ್ಯಕ್ತಿ. ಆದರೆ ಬಿಗ್ ಬಾಸ್ ಸೀಸನ್ 10 ರಲ್ಲಿ ಭಾಗವಹಿಸುವ ಮೂಲಕ ಪ್ರತಾಪ್ ಇಮೇಜ್ ಬದಲಾಯ್ತು. ಹೇಟ್ ಮಾಡುತ್ತಿದವರೆಲ್ಲಾ, ಇಷ್ಟ ಪಡೋಕೆ ಆರಂಭಿಸಿದ್ರು ಇವರನ್ನು. 
 

27

ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ತಮ್ಮ ಮಾತು, ಆಟಗಳ ಮೂಲಕ ಕನ್ನಡಿಗರ ಮನಸ್ಸನ್ನ ಎಷ್ಟರ ಮಟ್ಟಿಗೆ ಆವರಿಸಿದ್ದರು ಅಂದ್ರೆ, ಅವರ ಕುರಿತಾದ ಎಲ್ಲಾ ನೆಗೆಟಿವ್ ಗಳು ಪಾಸಿಟಿವ್ ಆಗಿ ಬದಲಾಯಿತು. ಕೊನೆಗೆ ಬಿಗ್ ಬಾಸ್ ಸೀಸನ್ 10ರ ರನ್ನರ್ ಕೂಡ ಆಗಿದ್ದರು ಪ್ರತಾಪ್. 
 

37

ಇದೀಗ ಮತ್ತೆ ಡ್ರೋನ್ ಪ್ರತಾಪ್ ತಮ್ಮ ತಂಡದ ಕೆಲ ಸದಸ್ಯರ ಜೊತೆ ಬಿಗ್ ಬಾಸ್ 11 ಗೆ ಎಂಟ್ರಿ ಕೊಟ್ಟಿದ್ದಾರೆ, ತಮ್ಮ ಜೊತೆಗೆ ನಾಮಿನೇಶನ್ ಪಾಸ್ (nomination pass) ಟಾಸ್ಕ್ ಹೊತ್ತುಕೊಂಡು ಬಂದಿದ್ದು, ಇದೀಗ ಯಾರಿಗೆ ಸಿಗಲಿದೆ ನಾಮಿನೇಶನ್ ಪಾಸ್ ಎನ್ನುವ ಕುತೂಹಲ ಹೆಚ್ಚಾಗಿದೆ. 
 

47

ಇದೆಲ್ಲದರ ಮಧ್ಯೆ ಡ್ರೋನ್ ಪ್ರತಾಪ್ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಸೂಟ್ ಬೂಟು ಧರಿಸಿ ಡ್ರೋನ್ ಪ್ರತಾಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

57

ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ತೆಗೆದಂತಹ ರಾಂಡಮ್ ಫೋಟೊಗ್ರಫಿ ಇದಾಗಿದ್ದು, ಪ್ರತಾಪ್ ಸಾಮಾನ್ಯವಾಗಿ ಯಾವತ್ತೂ ಕಾಣಿಸಿಕೊಳ್ಳದ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೊಗಳನ್ನು ನೋಡಿ ಇದು ನಾನೇನಾ ಅಂತ ಕೇಳಿದ್ದಾರೆ ಪ್ರತಾಪ್. 
 

67

ರಿಯಾಲಿಟಿ ಶೋ (reality show)ಮೂಲಕ ಜನಮನ ಗೆದ್ದ ಪ್ರತಾಪ್ ಇದೀಗ ಸಿನಿಮಾದಲ್ಲಿ ಹೀರೋ ಆಗೋಕೆ ರೆಡಿಯಾಗಿದ್ದಾರೆ. ಇನ್ನು ಹೆಸರಿಡದ ಸಿನಿಮಾದಲ್ಲಿ ನಾಯಕನಾಗಿ ನಟಿಸೋಕೆ ಎಲ್ಲಾ ತಯಾರಿಗಳು ನಡೆದಿವೆ. ಈಗಾಗಲೇ ಮುಹೂರ್ತ ಕೂಡ ನಡೆದಿದೆ. 
 

77

ಇನ್ನು ಫೋಟೊ ಶೂಟ್ ನೋಡಿದ್ರೆ ಹೀರೋ ಆಗ್ತಿದ್ದಂತೆ ಪ್ರತಾಪ್ ಗೆಟಪ್ ಪೂರ್ತಿ ಬದಲಾದಂತೆ ಕಾಣಿಸ್ತಿದೆ. ಆ ಲುಕ್, ಆ ಸ್ಟೈಲ್ ಎಲ್ಲವೂ ಬದಲಾಗಿದೆ. ಆದ್ರೂ ಜನ ಪ್ರತಾಪ್ ನ ಈ ಲುಕ್ ಅನ್ನು ಇಷ್ಟಪಟ್ಟಿದ್ದಾರೆ, ಮೆಚ್ಚುಗೆ ಸೂಚಿಸಿದ್ದಾರೆ. 
 

Read more Photos on
click me!

Recommended Stories