ಸಲ್ಮಾನ್ ಖಾನ್ ವರ್ಷಗಳಿಂದ ಬಿಗ್ ಬಾಸ್ ಅನ್ನು ಆಯೋಜಿಸುತ್ತಿದ್ದಾರೆ, ಮತ್ತು ಈಗ ಕಾರ್ಯಕ್ರಮದ ನಿರ್ಮಾಪಕರು ಮೊದಲ ಬಾರಿಗೆ ಸಲ್ಮಾನ್ ಖಾನ್ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿಜವಾಗಿಯೂ ಸಲ್ಮಾನ್ ಖಾನ್ 150 ಕೋಟಿ ಸಂಭಾವನೆ ಪಡೆಯೋದು ನಿಜಾನ?
ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಆಯೋಜಿಸಲು ಸಲ್ಮಾನ್ ಖಾನ್ ತೆಗೆದುಕೊಳ್ಳುವ ಸಂಭಾವನೆ ಪ್ರತಿ ಸೀಸನ್‌ನಲ್ಲೂ ಚರ್ಚೆಯಾಗುತ್ತಲೇ ಇರುತ್ತೆ. ಈ ವರ್ಷವೂ, ಸೀಸನ್ 19 ಅನ್ನು ಆಯೋಜಿಸಲು ನಟ ₹120-150 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ಬಿಗ್ ಬಾಸ್ 19 ನಿರ್ಮಾಪಕ ರಿಷಿ ನೇಗಿ (ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್‌ಶೈನ್ ಇಂಡಿಯಾ) ಸೂಪರ್‌ಸ್ಟಾರ್ ಅವರ ಸಂಭಾವನೆಯ ಬಗ್ಗೆ ಮಾತನಾಡಿದರು ಮತ್ತು ವೀಕೆಂಡ್ ಕಾ ವಾರ್ ಸಂಚಿಕೆಗಳಲ್ಲಿ ಸಲ್ಮಾನ್ ಕೆಲವು ಸ್ಪರ್ಧಿಗಳ ಬಗ್ಗೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ದೀರ್ಘಕಾಲದ ಆರೋಪಗಳನ್ನು ಸಹ ಪರಿಹರಿಸಿದರು.
25
ಸಲ್ಮಾನ್ ಖಾನ್ ಪ್ರತಿ ಸಂಚಿಕೆ ವೀಕ್ಷಿಸುತ್ತಾರೆ
ವೀಕೆಂಡ್ ಕಾ ವಾರ್ ನ ಹೋಸ್ಟ್ ಮಾಡುವ ಮೊದಲು ಸಲ್ಮಾನ್ ಖಾನ್ ಪ್ರತಿ ಸಂಚಿಕೆಯನ್ನು ವೀಕ್ಷಿಸುತ್ತಾರೆ, ಅವರಿಗೆ ಸಾಧ್ಯವಾಗದಿದ್ದರೆ, ವಾರಾಂತ್ಯದಲ್ಲಿ ಮನೆಯಲ್ಲಿ ನಡೆದ ಎಲ್ಲಾ ಪ್ರಮುಖ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಅವರು ನಮ್ಮೊಂದಿಗೆ ಒಂದು ಅಥವಾ ಎರಡು ಗಂಟೆಗಳ ಕಾಲ ಸೀನ್ ಗಳನ್ನು ವೀಕ್ಷಿಸುತ್ತಾರೆ. ಈ ರೀತಿಯಾಗಿ, ಅವರು ಎಲ್ಲಾ ಸ್ಪರ್ಧಿಗಳ ಆಟ, ಚಲನವಲನವನ್ನು ಗಮನಿಸುತ್ತಾರೆ ಎಂದು ಹೇಳಿದ್ದಾರೆ.
35
ವೀಕೆಂಡ್ ಗೆ ಹೀಗೆ ರೆಡಿಯಾಗುತ್ತಾರೆ
ಸಲ್ಮಾನ್ ಎಲ್ಲಾ ಎಪಿಸೋಡ್ ಗಳನ್ನು ನೋಡುವುದರಿಂದ ಮನೆಯಲ್ಲಿ ಏನು ನಡೆಯುತ್ತಿದೆ, ಸ್ಪರ್ಧಿಗಳೊಂದಿಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಕಾರ್ಯಕ್ರಮದ ನಿರ್ಮಾಪಕರಾಗಿ, ನಾವು ಅದನ್ನು ಹೇಗೆ ನೋಡುತ್ತೇವೆ ಎಂಬುದರ ಬಗ್ಗೆಯೂ ನಮಗೆ ಒಂದು ದೃಷ್ಟಿಕೋನವಿದೆ. ಪ್ರೇಕ್ಷಕರಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಆದ್ದರಿಂದ, ಅದನ್ನೆಲ್ಲಾ ಒಟ್ಟುಗೂಡಿಸಿ ವೀಕೆಂಡ್ ಎಪಿಸೋಡ್ ಸಿದ್ದಪಡಿಸುತ್ತೇವೆ ಎಂದರು.
ಸಲ್ಮಾನ್ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಿದ ರಿಷಿ, "ಸಲ್ಮಾನ್ ಖಾನ್ ಅವರನ್ನು ತಿಳಿದಿರುವ ಯಾರಿಗಾದರೂ ಸಲ್ಮಾನ್ ಎಂದಿಗೂ ಸುಳ್ಳು ವಿಚಾರವನ್ನು ನಂಬೋದಿಲ್ಲ ಅನ್ನೋದು ಗೊತ್ತಿದೆ. ಏನಾದರೂ ಸರಿಯೋ ತಪ್ಪೋ ಎಂಬುದರ ಬಗ್ಗೆ ಅವರಿಗೆ ತಮ್ಮದೇ ಆದ ದೃಷ್ಟಿಕೋನವಿದೆ. ನಾವು ಚರ್ಚಿಸುತ್ತೇವೆ, ತುಂಬಾ ಚರ್ಚೆ ಮಾಡಿದ ಬಳಿಕ ಅವರು ವೇದಿಕೆಗೆ ಹೋಗುತ್ತಾರೆ" ಎಂದು ಒತ್ತಿ ಹೇಳಿದರು.
55
ಪ್ರತಿ ಸೀಸನ್‌ಗೆ ₹150-200 ಕೋಟಿ ಪಡೆಯುತ್ತಾರೆಯೇ?
ಸಲ್ಮಾನ್ ಖಾನ್ ಬಿಗ್ ಬಾಸ್ ಹೋಸ್ಟ್ ಮಾಡಲು ಪ್ರತಿ ಸೀಸನ್‌ಗೆ ₹150-200 ಕೋಟಿ ಪಡೆಯುತ್ತಾರೆಯೇ ಎಂದು ರಿಷಿ ಅವರನ್ನು ಕೇಳಿದಾಗ, ಅವರು "ಇದು ಸಲ್ಮಾನ್ ಮತ್ತು ಜಿಯೋ ಹಾಟ್‌ಸ್ಟಾರ್ ನಡುವಿನ ಒಪ್ಪಂದ, ಆದ್ದರಿಂದ ನನಗೆ ಅದರ ಬಗ್ಗೆ ತಿಳಿದಿಲ್ಲ ಎಂದರು. ವದಂತಿಗಳು ಏನೇ ಇರಲಿ, ಅವರು ಪ್ರತಿ ಪೈಸೆಗೂ ಯೋಗ್ಯರು. ಅವರು ಈ ಶೋನಲ್ಲೂ ಇರುವಷ್ಟು ದಿನ ನನ್ನಷ್ಟು ಖುಷಿ ಪಡೋರು ಬೇರೆ ಯಾರೂ ಇಲ್ಲ ಎಂದಿದ್ದಾರೆ.