BBK 12: ಗಿಲ್ಲಿ ನಟನ ಕಣ್ಣಿಗೆ ಬಿತ್ತು ಕಾಕ್ರೋಚ್‌ ಸುಧಿ, ಅಶ್ವಿನಿ ಗೌಡ ಕಣ್ಸನ್ನೆ ಕಳ್ಳಾಟ; ವಿಡಿಯೋ ವೈರಲ್

Published : Oct 30, 2025, 04:33 PM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಬಿಗ್‌ ಬಾಸ್‌ ಕಾಲೇಜ್‌ ಎಂದು ಟಾಸ್ಕ್ ನಡೆಯುತ್ತಿದೆ. ಫಿಸಿಕಲ್‌ ಟಾಸ್ಕ್‌ನಲ್ಲಿ ರಾಶಿಕಾ ಚೆನ್ನಾಗಿ ಟಾಸ್ಕ್‌ ಆಡಿದ್ದರು. ಅಶ್ವಿನಿ ಗೌಡ ಇದ್ದ ಟೀಂನವರು ರಾಶಿಕಾಗೆ ಸ್ಟುಡೆಂಟ್‌ ಆಫ್‌ ದಿ ವೀಕ್‌ ಪಟ್ಟ ಕೊಡಬೇಕು ಎಂದುಕೊಂಡಿದ್ದರು. ಅದಕ್ಕೆ ಗಿಲ್ಲಿ ನಟ ಒಪ್ಪಲಿಲ್ಲ.

PREV
15
ಸ್ಟುಡೆಂಟ್ ಆಫ್‌ ದಿ ವೀಕ್‌ ಕಥೆ ಏನು?

‌ಕಬಡ್ಡಿ ಕಬಡ್ಡಿ ಟಾಸ್ಕ್‌ನಲ್ಲಿ Blue ಹಾಗೂ Red Team ಟೀಂ ಇತ್ತು. ಗಿಲ್ಲಿ ನಟ ಇದ್ದ ಗುಂಪಿನಲ್ಲಿ ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ, ಕಾಕ್ರೋಚ್‌ ಸುಧಿ, ರಿಷಾ ಗೌಡ, ಮಾಳು ನಿಪನಾಳ, ಅಶ್ವಿನಿ ಗೌಡ, ದನುಷ್‌ ಗೌಡ ಇದ್ದರು. ಹೀಗಾಗಿ ಸ್ಟುಡೆಂಟ್ ಆಫ್‌ ದಿ ವೀಕ್‌ ಯಾರು ಎನ್ನೋದು ದೊಡ್ಡ ಚರ್ಚೆ ಆಗಿದೆ.

25
ಕಣ್ಸನ್ನೆ ವೈರಲ್‌ ಆಗ್ತಿದೆ

ಗಿಲ್ಲಿ ನಟ ಟೀಂನಲ್ಲಿದ್ದರು ರಾಶಿಕಾ ಶೆಟ್ಟಿಯೇ ಸ್ಟುಡೆಂಟ್‌ ಆಫ್‌ ದಿ ವೀಕ್‌ ಆಗಬೇಕು ಎಂದು ಮತ ಹಾಕಿದ್ದರು. ಯಾವಾಗ ಬಿಗ್‌ ಬಾಸ್‌ ಹೆಸರನ್ನು ಸೂಚಿಸಿ ಎಂದು ಹೇಳಿದರೋ ಆಗ ಅಶ್ವಿನಿ ಗೌಡಗೆ ಕಾಕ್ರೋಚ್‌ ಸುಧಿ ಅವರು ಕಣ್ಸನ್ನೆಯಿಂದಲೇ ರಾಶಿಕಾ ಹೆಸರು ತಗೊಳೋಣ ಅಂತ ಮೊದಲೇ ಹೇಳಿದ್ದರು. ಈ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅಶ್ವಿನಿ ಗೌಡ, ಕಾಕ್ರೋಚ್‌ ಸುಧಿ ಅವರು ಕಣ್ಸನ್ನೆ ಮಾಡಿಕೊಂಡು ಮೊದಲೇ ನಿರ್ಧಾರಕ್ಕೆ ಬಂದಿರೋದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

35
ಗಿಲ್ಲಿ ನಟ ಯಾರ ಮಾತನ್ನು ಕೇಳಲಿಲ್ಲ

ಆನಂತರ ಟೀಂನಲ್ಲಿ ಯಾರು,ಯಾರಿಗೆ ಮತ ಹಾಕಬೇಕು ಎಂದು ಚರ್ಚೆ ಮಾಡಲಾಗಿದೆ. ಆ ವೇಳೆ ಸ್ಪಂದನಾ ಹಾಗೂ ಗಿಲ್ಲಿ ನಟ ಅವರು ನಮಗೆ ನಾವೇ ಮತ ಹಾಕಿಕೊಳ್ತೀವಿ ಎಂದಿದ್ದಾರೆ. ಉಳಿದಂತೆ ಎಲ್ಲರೂ ರಾಶಿಕಾಗೆ ಮತ ಹಾಕಿದರು. ಕೊನೆಗೂ ಗಿಲ್ಲಿ ನಟ ಯಾರ ಮಾತನ್ನು ಕೇಳಲಿಲ್ಲ.

45
ಕ್ಯಾನ್ಸಲ್‌ ಮಾಡಿದ ಬಿಗ್‌ ಬಾಸ್‌

ಬಹುಮತದಲ್ಲಿ ನಿರ್ಧಾರಕ್ಕೆ ಬಂದರೂ ಪ್ರಯೋಜನ ಇರಲಿಲ್ಲ, ಸಹಮತ ಇರಬೇಕಿತ್ತು. ಕೊನೆಗೂ ಗಿಲ್ಲಿ ನಟ ಒಪ್ಪದ ಕಾರಣ, ಸಹಮತ ಇರದ ಕಾರಣ ಬಿಗ್‌ ಬಾಸ್‌ ಈ ಪಟ್ಟವನ್ನು ಹಿಂಪಡೆದರು. ರಾಶಿಕಾ ಶೆಟ್ಟಿ ಕಣ್ಣೀರು ಹಾಕಿದರೆ, ಅಶ್ವಿನಿ ಗೌಡ ಸೇರಿದಂತೆ ಇಡೀ ತಂಡ ಬೇಸರ ಮಾಡಿಕೊಳ್ತು.

55
ಗಿಲ್ಲಿ ಮಾಡಿದ್ದು ಸರಿನಾ?

ವೀಕ್ಷಕರು ಗಿಲ್ಲಿ ನಟ ಮಾಡಿರೋದು ಸರಿಯಾಗಿಯೇ ಇದೆ ಎಂದಿದ್ದಾರೆ. ಸೂರಜ್‌ ಜೊತೆ ಸಮಯ ಕಳೆಯೋದು, ರಕ್ಷಿತಾಗೆ ಬಾಯಿಗೆ ಬಂದ ಹಾಗೆ ಬೈದಿದ್ದಕ್ಕೆ ರಕ್ಷಿತಾಗೆ ಸರಿಯಾಗಿಯೇ ಆಗ್ತಿದೆ ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories