Lakshmi Nivasa ಸೀರಿಯಲ್ ಗೆ ಹೊಸ ಎಂಟ್ರಿ… ಸಿಂಚನಾ ಪಾತ್ರಕ್ಕೆ ದಿವ್ಯಶ್ರೀ ಗುಡ್‌ ಬೈ ಹೇಳಲು ಕಾರಣ ಕಲರ್ಸ್ ಕನ್ನಡ!

Published : Mar 22, 2024, 12:08 PM ISTUpdated : Mar 22, 2024, 02:37 PM IST

ಆರಂಭವಾಗಿ ಸ್ವಲ್ಪ ಸಮಯದಲ್ಲಿ ತನ್ನ ವಿಭಿನ್ನ ಕಥೆ ಟ್ವಿಸ್ಟ್ ಮೂಲಕ ಮನೋರಂಜನೆ ನೀಡುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಸಿಂಚನಾ ಪಾತ್ರ ಇದೀಗ ಬದಲಾಗಿದ್ದು, ದಿವ್ಯಶ್ರೀ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ.   

PREV
18
Lakshmi Nivasa ಸೀರಿಯಲ್ ಗೆ ಹೊಸ ಎಂಟ್ರಿ… ಸಿಂಚನಾ ಪಾತ್ರಕ್ಕೆ ದಿವ್ಯಶ್ರೀ ಗುಡ್‌ ಬೈ ಹೇಳಲು ಕಾರಣ ಕಲರ್ಸ್ ಕನ್ನಡ!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಪ್ರಸಾರವಾದ ಕೆಲವೇ ದಿನಗಳಲ್ಲಿ ತನ್ನ ವಿಭಿನ್ನ ಕಥೆ ಮತ್ತು ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವ ಮೂಲಕ ಜನರ ಕುತೂಹಲವನ್ನು ಕೆರಳಿಸಿ, ಭರ್ಜರಿ ಮನರಂಜನೆ ನೀಡುತ್ತಿದೆ. 
 

28

ಈ ಧಾರಾವಾಹಿಯು ಕೂಡು ಕುಟುಂಬದ ಕಥೆಯಾಗಿದ್ದು, ಪ್ರತಿಯೊಂದೂ ಪಾತ್ರವೂ ತನ್ನದೇ ಪ್ರಾಮುಖ್ಯತೆಯನ್ನು ಪಡೆದಿದೆ. ಅದರಲ್ಲಿ ಒಂದು ಪಾತ್ರ ಲಕ್ಷ್ಮೀ ಸೊಸೆ ಸಿಂಚನಾ. ಊರಿನ ಗೌಡರ ಮಗಳಾಗಿ, ಪ್ರೀತಿಸಿ ಮದುವೆಯಾಗಿ ಗಂಡನ ಮನೆ ಸೇರಿರುವ ಸಿಂಚನಾ ಆಗಿ ದಿವ್ಯಶ್ರೀ (Divyashree) ನಟಿಸುತ್ತಿದ್ದರು. 
 

38

ಯಾವಾಗಲೂ ಸ್ಟೈಲ್ ಮಾಡುತ್ತಾ, ತನಗೆ ಬೇಕಾದುದ್ದನ್ನೆಲ್ಲಾ ಗಂಡನ ಬಳಿ ಮಾಡಿಸುತ್ತಾ, ಗಂಡ ಸದಾ ತನ್ನ ಬೆನ್ನ ಹಿಂದೆಯೇ ತಿರುಗಾಡುವಂತೆ ಮಾಡುವ, ಬೇರೆ ಮನೆ ಮಾಡುವಂತೆ ಗಂಡನನ್ನು ಪೀಡಿಸುವ, ಗಂಡನ ಪ್ರೀತಿಯ ಬೇಬಿ ಪಾತ್ರದಲ್ಲಿ ದಿವ್ಯಶ್ರೀ ಇಲ್ಲಿವರೆಗೆ ನಟಿಸಿದ್ದರು. 
 

48

ಪಾತ್ರಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸಿದ್ದ ದಿವ್ಯಶ್ರೀ ಪಾತ್ರ ಜನರಿಗೂ ಇಷ್ಟವಾಗಿತ್ತು, ಇದೀಗ ದಿವ್ಯಶ್ರೀ ಈ ಸೀರಿಯಲ್ ತೊರೆದಿದ್ದು, ಆ ಪಾತ್ರಕ್ಕೆ ಬೇರೊಬ್ಬ ನಟಿಯ ಎಂಟ್ರಿಯೂ ಆಗಿದೆ. ಅಷ್ಟಕ್ಕೂ ದಿವ್ಯಶ್ರೀ ಈ ಸೀರಿಯಲ್ ಬಿಡಲು ಕಾರಣ ಏನಿರಬಹುದು ಗೊತ್ತಾ? 
 

58

ದಿವ್ಯಶ್ರೀ ಸೀರಿಯಲ್ ಅರ್ಧದಲ್ಲೇ ಬಿಡೋಕೆ ಕಾರಣ ಕಲರ್ಸ್ ಕನ್ನಡದ (Colors Kannada) ಚುಕ್ಕಿ ತಾರೆ ಸೀರಿಯಲ್. ಹೌದು, ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭವಾಗಿರುವ ಚುಕ್ಕಿ ತಾರೆ ಧಾರಾವಾಹಿಯಲ್ಲಿ ದಿವ್ಯಶ್ರೀ ಲೀಡ್ ರೋಲ್‌ನಲ್ಲಿ ನವೀನ್ ಸಜ್ಜು ಜೊತೆ ನಟಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಅವರು ಲಕ್ಷ್ಮೀ ನಿವಾಸ ತೊರೆದಿದ್ದಾರೆ. 
 

68

ಇನ್ನು ದಿವ್ಯಶ್ರೀ ನಟಿಸುತ್ತಿದ್ದ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ, ಇವರು ಬೇರಾರು ಅಲ್ಲ, ಕನ್ನಡ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ರೂಪಿಕಾ (Roopika) ಇನ್ನು ಮುಂದೆ ಸಿಂಚನಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು ನಟಿಸಿದ ದೃಶ್ಯಗಳು ಪ್ರಸಾರ ಕೂಡ ಆಗಿದೆ. 
 

78

ಕನ್ನಡದಲ್ಲಿ ಬಾಲ ನಟಿಯಾಗಿ ನಟನೆ ಆರಂಭಿಸಿದ ರೂಪಿಕಾ ಬಳಿಕ ಚೆಲುವಿನ ಚಿಲಿಪಿಲಿ, ಕಾಲ್ಗೆಜ್ಜೆ, ರುದ್ರಾಕ್ಷಿಪುರ, ಮಜ್ಜಿಗೆ ಹುಳಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ದೊರೆ ಸಾನಿ ಎನ್ನುವ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ರೂಪಿಕಾ ನಟಿಸಿದ್ದರು. 

88

ಇದೀಗ ರೂಪಿಕಾ ಸಿಂಚನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನರು ಇವರನ್ನು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು. ಇನ್ನು ಸೀರಿಯಲ್ ಬಗ್ಗೆ ಹೇಳೋದಾದರೆ ಸದ್ಯ ಜಾಹ್ನವಿ ಮತ್ತು ಜಯಂತ್ ಮದುವೆಯ ಸಂಭ್ರಮ ನಡೆಯುತ್ತಿದೆ. ಇಷ್ಟೆಲ್ಲಾ ಒಳ್ಳೆಯದ್ದೆ ಆಗುವ ನಡುವೆ ಇನ್ನೆನೋ ಕೆಟ್ಟದಾಗುವ, ಟ್ವಿಸ್ಟ್ ಬರುವ ಸೂಚನೆ ಇದೆ ಎನ್ನುತ್ತಿದ್ದಾರೆ ವೀಕ್ಷಕರು. ಯಾವುದಕ್ಕೂ ಕಾದು ನೋಡಬೇಕು. 

click me!

Recommended Stories