ಯಡವಟ್ಟು ರಾಣಿ ಶ್ರಾವಣಿಯಾಗಿ ಜನಮನ ಗೆದ್ದ ಕನ್ಯಾಕುಮಾರಿಯ ಆಸಿಯಾ ಫಿರ್ದೋಸ್!

First Published | Mar 21, 2024, 5:56 PM IST

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ಆಗಿ ಶ್ರೀಮಂತ ಮನೆತನದ ದೈವಭಕ್ತ ಹುಡುಗಿ ಮತ್ತು ದೇವಿಯಾಗಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಇದೀಗ ಶ್ರಾವಣಿಯಾಗಿ ಜನಮನ ಗೆದ್ದಿದ್ದಾರೆ. 
 

Asiya Firdose again won viewers heart through her acting in Shravani Subramanya pav

ಝೀಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್ ಗಳು ಸಾಲು ಸಾಲಾಗಿ ಪ್ರಸಾರವಾಗುತ್ತಿವೆ. ಹಳೆ ಸೀರಿಯಲ್ ಗಳ ಟೈಟಲ್ ಇಟ್ಟುಕೊಂಡು ಬರುತ್ತಿರುವ ಸೀರಿಯಲ್ ಗಳೇ ಹೆಚ್ಚಿವೆ. ಅವುಗಳಲ್ಲಿ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಕೂಡ ಒಂದು. 
 

ಸದ್ಯ ಝೀ ಕನ್ನಡದಲ್ಲಿ ರೀಮೇಕ್ ಸೀರಿಯಲ್ ಗಳದ್ದೆ ಹವಾ ಹೆಚ್ಚಾಗಿದೆ. ರಿಮೇಕ್ ಧಾರಾವಾಹಿಗಳಾದರೂ ಸ್ವಂತಿಕೆ ಕಾಪಾಡುವಲ್ಲಿ ಜೊತೆಗೆ ಹೆಚ್ಚಿನ ಟಿಆರ್ ಪಿ ನೀಡುವಲ್ಲಿ ಯಾವ ಸೀರಿಯಲ್ ಗಳು ಹಿಂದೆ ಉಳಿದಿಲ್ಲ, ಅದಕ್ಕೆ ಹೊಸ ಸೇರ್ಪಡೆ ಆಸಿಯಾ ಫಿರ್ದೋಸ್ (Asiya Firdose) ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್. 
 

Tap to resize

ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನ್ನಿಕಾ ಆಗಿ ಜನಮನ ಗೆದ್ದಿದ್ದ ಹುಡುಗಿ ಆಸಿಯಾ ಫಿರ್ದೋಸ್. ಆ ಸೀರಿಯಲ್ ನಲ್ಲಿ ಭಕ್ತಿ, ಮುಗ್ದತೆ, ದೈವೀಕತೆಯ ಪ್ರತೀಕವಾಗಿದ್ದ ಕನ್ನಿಕಾ ಪಾತ್ರದಲ್ಲಿ ಆಸಿಯಾ ಮಿಂಚಿದ್ದರು. ಕಾರಣಾಂತರಗಳಿಂದ ಧಾರಾವಾಹಿ ಬೇಗನೆ ಮುಗಿದು ಹೋಯಿತು. 
 

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಆಸಿಯಾಗೆ ಜೋಡಿಯಾಗಿ ನಟಿಸಿದ್ದ ಯಶ್ವಂತ್ ಗೌಡ (Yashwanth Gowda) ಅವರು ತೆಲುಗು ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿ ನಾಯಕಿ ಅಮೂಲ್ಯ ಜೊತೆಗೆ ನಟಿಸಿದ್ದ ಅಮ್ಮಾಯಿಗಾರು ಧಾರಾವಾಹಿಯ ರಿಮೇಕ್ ಆಗಿರುವ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಇದೀಗ ಶ್ರಾವಣಿಯಾಗಿ ಆಸಿಯಾ ನಟಿಸುತ್ತಿದ್ದಾರೆ. 
 

ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗಿ ಕೆಲ ದಿನಗಳು ಕಳೆದಿದ್ದು, ವೀಕ್ಷಕರಿಗೆ ಕಥೆ ಹಾಗೂ ಶ್ರಾವಣಿಯಾಗಿ ಆಸಿಯಾ ನಟನೆ ಎರಡೂ ಸಿಕ್ಕಾಪಟ್ಟೆ ಹಿಡಿಸಿದೆ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. 
 

ಅಪ್ಪನ ಪ್ರೀತಿಯನ್ನು ಹೇಗಾದರೂ ಪಡೆಯಬೇಕು ಎಂದು ಹಂಬಲಿಸುವ ಶ್ರಾವಣಿ ಒಂಥರಾ ಎಡವಟ್ಟು ರಾಣಿ, ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ಅಪ್ಪನಿಂದ ಬೈಸಿಕೊಳ್ಳುತ್ತಲೇ ಇರುತ್ತಾಳೆ. ಆದರೂ ಛಲ ಬಿಡದೆ ಒಂದಲ್ಲ ಒಂದು ಸಾಹಸ ಮಾಡುತ್ತಿರುತ್ತಾಳೆ ಶ್ರಾವಣಿ. 
 

ಶಿಕ್ಷಣ ಮಂತ್ರಿಯವರ ಮಗಳಾಗಿದ್ದರು ಓದಿನಲ್ಲಿ ಹಿಂದೆ ಬಿದ್ದಿರುವ ಶ್ರಾವಣಿ, ಪಾಸ್ ಆಗೋದಕ್ಕೆ ಹರಕೆ ಹೊತ್ತು, ಯಾವುದೋ ಸ್ವಾಮಿಗಳ ಮಾತು ಕೇಳಿ ದೇವರ ಮುಂದೆ ನಿಂತು ಪೂಜೆ ಮಾಡುವ ಪೆದ್ದು ಹುಡುಗಿ. ಫಿಸಿಕ್ಸ್ ಪರೀಕ್ಷೆಗೆ ಕೆಮೆಸ್ಟ್ರಿ ಓದಿ ಮತ್ತೆ ಫೈಲ್ ಆಗುವ ಶ್ರಾವಣಿಯ ಮುದ್ದು ಪೆದ್ದು ತನ ವೀಕ್ಷಕರಿಗೆ ಇಷ್ಟವಾಗಿದೆ. 
 

ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ಅದ್ಭುತವಾಗಿ ನಟಿಸುತ್ತಿದ್ದು, ವೀಕ್ಷಕರೂ ಕೂಡ, ಈ ಪಾತ್ರಕ್ಕೆ ನಿಮ್ಮ ಆಯ್ಕೆ ಸರಿಯಾಗಿಯೇ ಇದೆ ಎಂದಿದ್ದಾರೆ. ಕನ್ಯಾಕುಮಾರಿ ಬಳಿಕ ದ್ವಂಧ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ ಆಸಿಯಾ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಆಸಿಯಾ. 
 

Latest Videos

click me!