ಕನ್ನಡ ಕಿರುತೆರೆ ನಟಿ ದಿವ್ಯಾ ಉರುಡುಗ (Divya Uruduga), ತಮ್ಮ ಮುದ್ದಾದ ಮುಖ, ನಿಷ್ಕಲ್ಮಶವಾದ ನಗುವಿನಿಂದಲೇ ಲಕ್ಷಾಂತರ ಅಭಿಮಾನಿಗಳ ಮನಸು ಗೆದ್ದಿದ್ದಾರೆ. ಇವರ ನಗುವಿಗೆ ಸೋಲದವರು ಯಾರೂ ಇಲ್ಲ ಅನಿಸತ್ತೆ.
28
ಕನ್ನಡ, ತೆಲುಗು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರೂ ಈ ನಟಿ ಸದ್ದು ಮಾಡಿದ್ದು ಬಿಗ್ ಬಾಸ್ ಸೀಸನ್ 8ರ (Bigg Boss Season 8) ಮೂಲಕ, ಅಲ್ಲಿ ಟಾಸ್ಕ್, ತಮ್ಮ ಮುದ್ದು ಮಾತುಗಳು, ಅರವಿಂದ್ ಜೊತೆಗಿನ ಒಡನಾಟದಿಂದ ಸುದ್ದಿಯಲ್ಲಿದ್ದರು.
38
ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ದಿವ್ಯಾ ಉರುಡುಗ ಮತ್ತೊಮ್ಮೆ ಸೀಸನ್ 9 ರಲ್ಲೂ ಭಾಗವಹಿಸಿದ್ದರು. ಅಲ್ಲಿಂದ ಹೊರಬಂದ ಮೇಲೆ ನಟಿಗೆ ತಮ್ಮ ಗೆಳೆಯನಾದ ಅರವಿಂದ್ ಕೆಪಿ ಜೊತೆ ಅರ್ಧಂಬರ್ಧ ಪ್ರೇಮಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು.
48
ಸದ್ಯ ದಿವ್ಯಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ನಾಯಕಿ ರಚನಾ ಆಗಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಸದ್ಯ ಜನ ಮೆಚ್ಚುಗೆಗೂ ಪಾತ್ರವಾಗಿದೆ.
58
ನಿನಗಾಗಿ ಧಾರಾವಾಹಿಯಲ್ಲಿ ರಚನಾ ಹಾಗೂ ಮುದ್ದು ಕೃಷ್ಣಾಳ ಅಮ್ಮ ಮಗಳ ಜೋಡಿ ಜನರಿಗೆ ತುಂಬಾನೆ ಇಷ್ಟ. ಇವರಿಬ್ಬರ ಇಮೋಷನಲ್ ಸೀನ್ ಗಳನ್ನು ನೋಡಿ ಜನ ಕೂಡ ಕಣ್ಣೀರಿಟ್ಟಿದ್ದು ಇದೆ.
68
ಇದೀಗ ಸೀರಿಯಲ್ ನಲ್ಲಿ ವ್ಯಾಲೆಂಟೈನ್ಸ್ ಡೇ ಎಪಿಸೋಡ್ ಗಳು ನಡೆಯುತ್ತಿವೆ, ಈ ಎಪಿಸೋಡ್ ಗಾಗಿ ದಿವ್ಯಾ ಉರುಡುಗ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಇದೀಗ ಮತ್ತೆ ಅದೇ ಕೆಂಪು ಬಣ್ಣದಲ್ಲಿ ಮಿಂಚಿದ್ದಾರೆ.
78
ರಚನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಂಪು ಸೀರೆಯುಟ್ಟು, ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟು ಫೋಟೊ ಶೂಟ್ ಮಾಡಿಸಿದ್ದು, ನಟಿಯ ನಗುವಿಗೆ, ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
88
ಕೆಂಪು ಸೀರೆಯಲ್ಲಿ ನೀವು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದೀರಿ, ಗುಲಾಬಿ ಹೂವು ಅರಳಿದಂತಹ ಅಂದ ನಿಮ್ಮದು, ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು.., ಎಂದು ಜನ ಹಾಡಿ ಹೊಗಳುತ್ತಿದ್ದಾರೆ.