ರೀಲ್‌ನಲ್ಲೂ, ರಿಯಲ್‌ನಲ್ಲೂ ಗಂಡನ ಮನೆಗೆ ಹೋಗ್ತಿರೋ ʼನಿನ್ನ ಕಥೆ ನನ್ನ ಜೊತೆʼ ಧಾರಾವಾಹಿ ನಟಿ ಮೇಘಶ್ರೀ!

Published : Feb 21, 2025, 12:15 PM ISTUpdated : Feb 21, 2025, 12:47 PM IST

: ʼನಿನ್ನ ಕಥೆ ನನ್ನ ಜೊತೆʼ ಧಾರಾವಾಹಿ ನಟಿ ಮೇಘಶ್ರೀ ಅವರು ರಿಯಲ್‌ ಆಗಿಯೂ ಮದುವೆ ಆಗುತ್ತಿದ್ದಾರೆ. ಇವರ ಹುಡುಗ ಯಾರು? ಯಾವಾಗ ಮದುವೆ ನಡೆಯಲಿದೆ? ಎಂಬ ಕುತೂಹಲ ಇದೆ. ಇವರ ಮೆಹೆಂದಿ ಫೋಟೋಗಳು ಇಲ್ಲಿವೆ.

PREV
14
ರೀಲ್‌ನಲ್ಲೂ, ರಿಯಲ್‌ನಲ್ಲೂ ಗಂಡನ ಮನೆಗೆ ಹೋಗ್ತಿರೋ ʼನಿನ್ನ ಕಥೆ ನನ್ನ ಜೊತೆʼ ಧಾರಾವಾಹಿ ನಟಿ ಮೇಘಶ್ರೀ!

‘ನಿನ್ನ ಕಥೆ ನನ್ನ ಜೊತೆ’ ಧಾರಾವಾಹಿಯಲ್ಲಿ ನಾಯಕನ ಅಕ್ಕ ಗಂಡನ ಮನೆಗೆ ಹೋಗುವ ದೃಶ್ಯ ಇದೆ. ಮದುವೆಯಾದಮೇಲೂ ಅವಳು ತಾಯಿ ಮನೆಯಲ್ಲಿಯೇ ಇರುತ್ತಾಳೆ. ಹೀಗಾಗಿ ಅವಳನ್ನು ಗಂಡನ ಮನೆಗೆ ಕಳಿಸುವ ದೃಶ್ಯವನ್ನು ತುಂಬ ಭಾವನಾತ್ಮಕವಾಗಿ ತೋರಿಸಲಾಗಿದೆ. 

24

ಮನೆಯ ಮಗಳು ಹೊರಗಡೆ ಹೋಗುತ್ತಾಳೆ ಎಂದು ಎಲ್ಲರೂ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಈಗ ಈ ಪಾತ್ರದಲ್ಲಿ ನಟಿಸಿರುವ ನಟಿ ಮೇಘಶ್ರೀ ಕೂಡ ಗಂಡನ ಮನೆಗೆ ಹೋಗುವ ಸಮಯ ಬಂದಿದೆ. 

34


ಹೌದು, ಮೇಘಶ್ರೀ ಅವರು ರಿಯಲ್‌ ಲೈಫ್‌ನಲ್ಲಿ ಮದುವೆ ಆಗ್ತಿದ್ದಾರೆ. ಪವನ್‌ ಎನ್ನುವವರ ಜೊತೆ ಮೇಘಶ್ರೀ ಮದುವೆ ನಡೆಯುತ್ತಿದೆ. ಮೇಘಶ್ರೀ ಮದುವೆಯ ಕಾರ್ಯಗಳು ಆರಂಭ ಆಗಿವೆ. ಮೆಹೆಂದಿ ನಡೆದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 


 

44

ಮೇಘಶ್ರೀ ಅವರು ಕುಂದಾಪುರದ ಸೊಸೆ ಆಗಲಿದ್ದಾರಂತೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದರು. ಇನ್ನೆರಡು ದಿನಕ್ಕೆ ಇವರ ಮದುವೆ ನಡೆಯಲಿದೆ ಎನ್ನಲಾಗಿದೆ. 

click me!

Recommended Stories