ವಧುವಿನಂತೆ ರೆಡಿಯಾದ ಹಿಟ್ಲರ್ ಕಲ್ಯಾಣ ನಟಿ... ಗುಡ್ ನ್ಯೂಸ್ ಕೊಡ್ತಿದ್ದಾರ?

Published : Feb 21, 2025, 12:24 PM ISTUpdated : Feb 21, 2025, 01:38 PM IST

ಹಿಟ್ಲರ್ ಕಲ್ಯಾಣದ ವಿಲನ್ ರಜಿನಿ, ಇದೀಗ ಗೋಲ್ಡನ್ ಸೀರೆಯುಟ್ಟು ವಧುವಿನಂತೆ ಸಿಂಗರಿಸಿಕೊಂಡು ಪೋಸ್ ಕೊಟ್ಟಿದ್ದು, ನೋಡಿದ್ರೆ ಮದುವೆಗೆ ತಯಾರಾಗಿ ನಿಂತಂತಿದೆ.   

PREV
16
ವಧುವಿನಂತೆ ರೆಡಿಯಾದ ಹಿಟ್ಲರ್ ಕಲ್ಯಾಣ ನಟಿ... ಗುಡ್ ನ್ಯೂಸ್ ಕೊಡ್ತಿದ್ದಾರ?

ಕನ್ನಡ ಕಿರುತೆರೆಯಲ್ಲಿ ನಾಯಕ ನಟಿಯಾಗಿ, ವಿಲನ್ ಆಗಿ ಗುರುತಿಸಿಕೊಂಡ ನಟಿ ರಜಿನಿ (Rajini). ಹಿಟ್ಲರ್ ಕಲ್ಯಾಣ ಸೀರಿಯಲ್ ನಟಿ ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಇವರು ಹೊಸ ಹೊಸ ಫೋಟೊ ಶೂಟ್ ಮೂಲಕವೇ ಸುದ್ದಿಯಲ್ಲಿರುತ್ತಾರೆ. 
 

26

ಇದೀಗ ನಟಿ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಸಾಂಪ್ರದಾಯಿಕ ಉಡುಗೆಯುಟ್ಟು ಪೋಸ್ ಕೊಟ್ಟಿರುವ ಫೋಟೊಗಳನ್ನು ಶೇರ್ ಮಾಡಿದ್ದು, ರಜಿನಿಯನ್ನು ನೋಡಿದ್ರೆ, ಥೇಟ್ ಮದುಮಗಳಂತೆ ಕಾಣಿಸ್ತಿದ್ದಾರೆ. ತುಂಬಾನೆ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. 
 

36

ಗೋಲ್ಡನ್ ಬಣ್ಣದ ಸೀರೆಯುಟ್ಟಿರುವ ರಜಿನಿ, ಉದ್ದವಾದ ಜಡೆ ಕಟ್ಟಿ, ಅದರ ಮೇಲೆ ಉದ್ದಕ್ಕೆ ಜ್ಯುವೆಲ್ಲರಿ ಹಾಕಿದ್ದಾರೆ. ಜೊತೆಗೆ ಮೈತುಂಬಾ ಒಡವೆಗಳನ್ನು ಹಾಕಿ, ಹಣೆಯಲ್ಲಿ ಮುಂದಾಲೆ, ಮೂಗಿನಲ್ಲಿ ದೊಡ್ಡದಾದ ನತ್ತು, ಕಿವಿಯಲ್ಲಿ ಜುಮುಕಿ ಧರಿಸಿ ವಧುವಿನಂತೆ ಸಿಂಗರಿಸಿಕೊಂಡಿದ್ದಾರೆ. 
 

46

ರಜಿನಿ ತಮ್ಮ ಫೋಟೊಗಳ ಜೊತೆಗೆ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಮನಸ್ಸೇ ಸರ್ವಸ್ವ. ನೀವು ಏನನ್ನು ಆಲೋಚಿಸುತ್ತೀರೋ ಅದಾಗುತ್ತೀರಿ. ಮನಸ್ಸಿಗಿರುವ ಅದ್ಭುತ ಮತ್ತು ಪವಾಡ ಶಕ್ತಿಯೇ ಅದು.. ‘ಗೌತಮ ಬುದ್ಧ ‘ ಶುಭ ದಿನ ಎಂದು ಬರೆದುಕೊಳ್ಳುವ ಮೂಲಕ ಈ ದಿನಕ್ಕೊಂದು ಶುಭಾಷಿತವನ್ನು ಸಹ ನೀಡಿದ್ದಾರೆ. 
 

56

ರಜಿನಿಯ ಈ ಸುಂದರವಾದ ಬ್ರೈಡಲ್ ಲುಕ್ (bridal look) ನೋಡಿ ಅಭಿಮಾನಿಗಳು ಮನಸೋತಿದ್ದಾರೆ, ಅಮೋಘ, ನೀವು ಮೈಸೂರು ಮಹಾರಾಣಿ ಥರ ಕಾಣಿಸ್ತೀರಿ, ಧರೆಗಿಳಿದ ದೇವತೆ, ಮತ್ತೆ ಅಮೃತಾಳನ್ನು ನೋಡಿದ ಹಾಗಾಯ್ತು ಎಂದು ಕಾಮೆಂಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ ರಜಿನಿ. 
 

66

ಈ ಫೋಟೊ ನೋಡಿದ್ರೆ ರಜಿನಿ ಮದುವೆಯಾಗುತ್ತಿದ್ದಾರ ಎನ್ನುವ ಪ್ರಶ್ನೆ ಮೂಡದೇ ಇರದು. ಆದರೆ ರಜನಿ ಮಾತ್ರ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಸದ್ಯಕ್ಕೆ ಮದುವೆಯಾಗೋದಿಲ್ಲ. ಮದುವೆಯಾಗೋದಾದರೆ ಜನರಿಗೆ ಹೇಳಿಯೇ ಆಗುತ್ತೇನೆ ಎಂದಿದ್ದರು. ಅಲ್ಲದೇ ತಾವು ಜೊತೆಯಾಗಿ ರೀಲ್ಸ್ ಮಾಡುವ ಅರುಣ್ ಗೌಡ, ನನ್ನ ಸ್ನೇಹಿತ ಅಷ್ಟೇ ಅಂತಾನೂ ಹೇಳಿದ್ದರು. 
 

click me!

Recommended Stories