ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ದೀಪಿಕಾ ದಾಸ್ (Deepika Das) ಒಬ್ಬರು. ನಾಗಿಣಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ದೀಪಿಕಾ, ಬಳಿಕ ಬಿಗ್ ಬಾಸ್ ಮೂಲಕ ಸದ್ದು ಮಾಡಿದ್ದರು. ಬಿಗ್ ಬಾಸ್ ನ ಎರಡು ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಅತ್ಯುತ್ತಮ ರೀತಿಯಲ್ಲಿ ಸ್ಪರ್ಧಿಸಿದ್ದರು.
ನಾಗಿಣಿ ಬಳಿಕ ಸೀರಿಯಲ್ ನಿಂದ ದೂರವೇ ಇದ್ದ ದೀಪಿಕಾ ದಾಸ್ ಸದಾ ಟ್ರಾವೆಲ್ ಮಾಡುತ್ತಾ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡುತ್ತಾ, ಜನರಿಗೆ ಕನೆಕ್ಟ್ ಆಗುತ್ತಿದ್ದರು. ಇದೀಗ ಹೊಸ ಫೋಟೊ ಹಂಚಿಕೊಂಡಿದ್ದು, ಅದರ ಜೊತೆಗೆ ಹೊಸ ಸುದ್ದಿಯನ್ನು ನೀಡಿದ್ದಾರೆ.
ದೀಪಿಕಾ ದಾಸ್ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಬಯಸಿದ್ದ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಅದೇನೆಂದರೆ ಹೊಸ ಧಾರವಾಹಿಯೊಂದರಲ್ಲಿ(serial) ದೀಪಿಕಾ ನಟಿಸುತ್ತಿದ್ದು, ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಆಗಿರೋದಾಗಿ ತಿಳಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.
ಇನ್ನು ದೀಪಿಕಾ ದಾಸ್ ನಟಿಸುತ್ತಿರುವುದು ಎಪ್ರಿಲ್ 24 ರಂದು ಪ್ರಸಾರ ಆರಂಭಿಸಿದ ಹೊಸ ಸೀರಿಯಲ್ ‘ಅಂತರಪಟ’ದಲ್ಲಿ. ಈ ಸೀರಿಯಲ್ ನಲ್ಲಿ ದೀಪಿಕಾ ದಾಸ್ ಸಮೀರಾ ಪಾತ್ರದ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ಸ್ವತಃ ನಟಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.
ಕಿರುತೆರೆಯಲ್ಲಿ , ಅದರಲ್ಲೂ ಸೀರಿಯಲ್‌ನಲ್ಲಿ ನಟಿಸದೇ ತುಂಬಾ ಸಮಯ ಆಯ್ತು. ಇದೀಗ ನಾನು ಸಮೀರ ಆಗಿ ‘ಅಂತರಪಟ’ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ತಪ್ಪದೇ ಸೀರಿಯಲ್ ನ ಎಲ್ಲಾ ಎಪಿಸೋಡ್ ನೋಡಿ ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.
ಅಂತರಪಟ ಸೀರಿಯಲ್ ಪ್ರೊಮೋ, ಆಗಲಿ, ಸೀರಿಯಲ್ ನಲ್ಲಿ ಆಗಲಿ ಇದುವರೆಗೆ ದೀಪಿಕಾ ಪಾತ್ರ ರೀವೀಲ್ ಆಗಿಲ್ಲ. ಹಾಗಾಗಿ ಅಭಿಮಾನಿಗಳ ಕಾತುರವೂ ಹೆಚ್ಚಾಗಿದೆ. ನೀವಿದ್ದಿರಿ ಅಂದಮೇಲೆ ನಾವು ಇಲ್ದೆ ಇರ್ತಿವ? ... ಖಂಡಿತ ಅಂತರಪಟ ನೋಡೋಕೆ ನಾವು ರೆಡಿ ಎಂದು ಜನ ಹೇಳುತ್ತಿದ್ದಾರೆ.
ಆದರೆ ಇನ್ನು ಕೆಲವರಂತೂ ನೀವು ಲೀಡ್ ರೋಲ್ ಮಾಡಿದ್ರೆ ಮಾತ್ರ ನೋಡೋಕೆ ಖುಷಿ ಆಗೋದು, ಸೈಡ್ ರೋಲ್, ವಿಲನ್ ರೋಲ್ ಮಾಡಿದ್ರೆ ಇಷ್ಟ ಆಗಲ್ಲ, ಪ್ಲೀಸ್ ಅದನ್ನ ಮಾಡ್ಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.