ಕಿರುತೆರೆ ನಟ ಹರೀಶ್ ಸಾವಿಗೆ ಕಾರಣವಾದ್ರು ಎಂಬ ಸುಖಾಸುಮ್ಮನೆ ಆರೋಪ ಹೊತ್ತ ನಟಿ ಮೇಘನಾ ಈಗೆಲ್ಲಿ?

Published : May 03, 2024, 04:47 PM IST

ಅರಗಿಣಿ ಸೀರಿಯಲ್ ನೆನಪಿದ್ಯಾ? ಆ ಸೀರಿಯಲ್ ನೆನಪಿದ್ರೆ ಖುಷಿ ನೆನಪಿರಲೇಬೇಕು ಅಲ್ವಾ? ತಮ್ಮ ಮುದ್ದು ಪೆದ್ದು ಮಾತಿನಿಂದಲೇ ಕರ್ನಾಟಕದ ಮನೆ ಮಂದಿಯ ಮನಸು ಕದ್ದಿದ್ದ ಬೆಡಗಿ ಇವಾಗ ಏನ್ ಮಾಡ್ತಿದ್ದಾರೆ.   

PREV
18
ಕಿರುತೆರೆ ನಟ ಹರೀಶ್ ಸಾವಿಗೆ ಕಾರಣವಾದ್ರು ಎಂಬ ಸುಖಾಸುಮ್ಮನೆ ಆರೋಪ ಹೊತ್ತ ನಟಿ ಮೇಘನಾ ಈಗೆಲ್ಲಿ?

ಸುಮಾರು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅರಗಿಣಿ (Aragini) ಎನ್ನುವ ಸೀರಿಯಲ್ ಪ್ರಸಾರವಾಗುತ್ತಿತ್ತು. ಈ ಸೀರಿಯಲ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು. ಮುದ್ದು ಪೆದ್ದು ಮಾತನಾಡೋ ಅರಗಿಣಿ ಎನ್ನುವ ಸಬ್ ಟೈಟಲ್ ಜೊತೆ ಈ ಸೀರಿಯಲ್ ಪ್ರಸಾರವಾಗುತ್ತಿತ್ತು. 
 

28

ಈ ಸೀರಿಯಲ್ ಅಷ್ಟೊಂದು ಹಿಟ್ ಆಗೋದಕ್ಕೆ ಮತ್ತೊಂದು ಕಾರಣ. ಸೀರಿಯಲ್ ನಾಯಕ ಮತ್ತು ನಾಯಕಿ. ಹರೀಶ್ ಮತ್ತು ಮೇಘನಾ (Harish and Meghana) ಸೀರಿಯಲ್ ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮೇಘನಾ ನಾಯಕಿ ಖುಷಿಯಾಗಿ ಪಟ ಪಟ ಎಂದು ಮಾತನಾಡುತ್ತಾ, ತನ್ನ ಪೆದ್ದು, ಮುದ್ದುತನ ಪ್ರದರ್ಶಿಸುತ್ತಲೇ ಕನ್ನಡಿಗರ ಮನೆಮಗಳಾಗಿದ್ದರು. 
 

38

ಆ ಪಾತ್ರದಿಂದ ಫೇಮಸ್ ಆಗಿರುವ ಮೇಘನಾ ತಮ್ಮ ಹೆಸರಿನ ಜೊತೆ ಖುಷಿ ಅನ್ನೋ ಹೆಸರನ್ನು ಖಾಯಂ ಮಾಡಿಕೊಂಡು, ಈಗ ಮೇಘನಾ ಖುಷಿ  (Meghana Khushi) ಆಗಿದ್ದಾರೆ. ಕನ್ನಡದಲ್ಲಿ ಒಂದು ಕಾಲದಲ್ಲಿ ಮಿಂಚಿದಂತಹ ನಟಿ ಇವಾಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ? 
 

48

ನಿರೂಪಕಿಯಾಗಿದ್ದ ಮೇಘನಾ, ಮಾಡೆಲಿಂಗ್ (Modeling)ಕೂಡ ಮಾಡುತ್ತಿದ್ದರು. ಓದಿದ್ದು ಪತ್ರಿಕೋದ್ಯಮ, ಕೆಲಸ ಮಾಡಿದ್ದು, ಐಟಿಯಲ್ಲಿ, ಆದರೆ ಮುಂದೆ ಆದದ್ದು ಮಾತ್ರ ನಟಿ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗಿನಲ್ಲೂ ಮಿಂಚುತ್ತಿದ್ದಾರೆ ಮೇಘನಾ. 
 

58

ಅರಗಿಣಿ ಸೀರಿಯಲ್ ಮೇಘನಾ ಅವರಿಗೆ ಸಿಕ್ಕಾಪಟ್ಟೆ ಫೇಮ್ ತಂದು ಕೊಟ್ಟಿತ್ತು, ಈ ಧಾರಾವಾಹಿ ಬಳಿಕ ಕನ್ನಡದಲ್ಲಿ ಗುಡುಗು ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲದೇ ಆರೇಂಜ್, ಸೀತಾಯಣ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯಕ್ಕಂತೂ ತೆಲುಗು ಸೀರಿಯಲ್ಸ್‌ನಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. 
 

68

ಕನ್ನಡದಲ್ಲಿ ಕೇವಲ ಅರಗಿಣಿ ಮಾತ್ರ ಅಲ್ಲ, ಸತ್ಯಂ ಶಿವಂ ಸುಂದರಂ ಧಾರಾವಾಹಿ, ಅವಳು, ಸೇವಂತಿ ಸೀರಿಯಲ್ ನಲ್ಲೂ ಕೆಲದಿನಗಳ ಕಾಲ ನಟಿಸಿದ್ದರು. ಅಲ್ಲದೇ ತೆಲುಗಿನಲ್ಲಿ ಅಮೆ ಕಥಾ, ದೇವತಾ ಸೀರಿಯಲ್ ನಲ್ಲಿ ನಟಿಸಿದ್ದರು. ಜೊತೆಗೆ ತೆಲುಗು ಸಿನಿಮಾದಲ್ಲೂ ನಟಿಸಿದ್ದರು. 
 

78

ಇನ್ನು ಒಂದು ಕಾಲದಲ್ಲಿ ಅರಗಿಣಿ ಸೀರಿಯಲ್ ಸಹ ನಟ ಹರೀಶ್ ಜೊತೆ ಮದುವೆಯಾಗೋದಾಗಿ ಭಾರಿ ಸುದ್ದಿಯಾಗಿತ್ತು. ಆದರೆ ಹರೀಶ್ ಬಹು ಅಂಗಾಂಗ ವೈಫಲ್ಯದಿಂದ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಆದರೆ ಇಂದಿಗೂ ಸಹ ಮೇಘನಾ ಮತ್ತು ಹರೀಶ್ ಎಂಬ ಮುದ್ದಾದ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. 
 

88

ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಮೇಘನಾ ಖುಷಿ ತಮ್ಮ ಫೋಟೋಗಳನ್ನು,ಡ್ಯಾನ್ಸ್  ರೀಲ್ಸ್ ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ. ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕ ಮೇಘನಾ ಗಮನ ಸೆಳೆಯುತ್ತಿರುತ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories