Amruthadhaare ದಿಯಾ ಎಸ್ಕೇಪ್​! ನಟನೆ ಮುಗಿಸಿ, ಎಲ್ಲಾ ಬಿಟ್ಟು ರಾತ್ರೋರಾತ್ರಿ ಮನೆ ತೊರೆದ ಜೈದೇವನ ಬೇಬಿ

Published : Apr 29, 2026, 12:11 PM IST

ಅಮೃತಧಾರೆ ಧಾರಾವಾಹಿಯು ಮುಕ್ತಾಯದ ಹಂತದಲ್ಲಿದ್ದು, ಶಕುಂತಲಾ ತನ್ನ ತಪ್ಪಿಗೆ ಕ್ಷಮೆ ಕೇಳಿ ಗೌತಮ್ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಮತ್ತೊಂದೆಡೆ, ಜೈದೇವ್‌ಗೆ ಮೋಸ ಮಾಡಿ ದಿಯಾ ಆಸ್ತಿ ಮತ್ತು ವೀಸಾದೊಂದಿಗೆ ಪರಾರಿಯಾಗಿದ್ದು, ದೇಶ ಬಿಟ್ಟು ಹೋಗಲು ಯತ್ನಿಸಿದ ಜೈದೇವ್‌ನನ್ನು ಪೊಲೀಸರು ಬಂಧಿಸಲು ಬಂದಿದ್ದಾರೆ.

PREV
16
ಮುಗಿಯುವ ಹಂತದಲ್ಲಿ ಅಮೃತಧಾರೆ

ಅಮೃತಧಾರೆ (Amruthadhaare serial) ಸದ್ಯ ಮುಗಿಯುವ ಹಂತ ತಲುಪಿದಂತಿದೆ. ಏಕೆಂದರೆ ಇದಾಗಲೇ ಶಕುಂತಲಾ ಬೀದಿ ಪಾಲಾಗಿದ್ದು, ಗೌತಮ್​ನ ಮನೆಯಲ್ಲಿ ಆಸರೆ ಪಡೆದಿದ್ದಾಳೆ. ಅಮ್ಮ ತನಗೆ ಏನೆಲ್ಲಾ ಕಂಟಕ ತಂದಿದ್ದರೂ ಗೌತಮ್​ ತಾಯಿಯೆಂಬ ಮಮಕಾರದಿಂದ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಕ್ಷಮಯಾಧರಿತ್ರಿ ಭೂಮಿಕಾ ಕೂಡ ಅತ್ತೆಯನ್ನು ಕ್ಷಮಿಸಿದ್ದಾಳೆ.

26
ಗೌತಮ್​ ಕಾಲಿಗೆ ಬಿದ್ದ ಅಮ್ಮ

ತನ್ನಿಂದ ಆಗಿರೋ ತಪ್ಪನ್ನು ಕ್ಷಮಿಸುವಂತೆ ಶಕುಂತಲಾ ಗೌತಮ್​ ಕಾಲಿಗೆ ಬಿದ್ದಿದ್ದಾಳೆ. ಅಷ್ಟಕ್ಕೂ ಅವಳಿಗೆ ಈಗ ಬೇರೆ ಏನೂ ಗತಿಯನೇ ಇಲ್ಲ ಎನ್ನಿ.

36
ರೋಚಕ ಟ್ವಿಸ್ಟ್​

ಅದೇ ಇನ್ನೊಂದೆಡೆ, ಸೀರಿಯಲ್​ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಜೈದೇವ್​ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿಕೊಂಡು ಅದನ್ನು ತೀರಿಸಲು ಸಾಧ್ಯವಾಗದ ಕಾರಣ, ದೇಶ ಬಿಟ್ಟು ಹೋಗುವ ಪ್ಲ್ಯಾನ್ ಮಾಡಿದ್ದ. ಅದಕ್ಕಾಗಿ ಎರಡು ವೀಸಾ ಕೂಡ ತರಿಸಿ ಇಟ್ಟಿದ್ದ.

46
ವೀಸಾ ರೆಡಿ

ಆದರೆ ಆಗಿದ್ದೇ ಬೇರೆ. ಜೈದೇವನ ಆಸ್ತಿಯ ಮೇಲಷ್ಟೇ ಕಣ್ಣು ಹಾಕಿದ್ದ ದಿಯಾಗೆ ಈಗ ತನ್ನ ಹೆಸರಿನಲ್ಲಿ ಒಂದುಷ್ಟು ಆಸ್ತಿ ಸಿಕ್ಕಿದೆ, ಜೊತೆಗೆ ವಿದೇಶ ಹೋಗಲು ಜೈದೇವನಿಂದ ವೀಸಾನೂ ರೆಡಿಯಾಗಿದೆ.

56
ರಾತ್ರೋರಾತ್ರಿ ಮನೆ ಬಿಟ್ಟಳು

ರಾತ್ರೋರಾತ್ರಿ ಎಲ್ಲವನ್ನೂ ತೆಗೆದುಕೊಂಡು ದಿಯಾ ಮನೆಬಿಟ್ಟು ಹೋಗಿದ್ದಾಳೆ. ಇಲ್ಲಿಯವರೆಗೆ ತಾನು ಆ ಮನೆಯಲ್ಲಿ ಇದ್ದುಕೊಂಡು ಜೈದೇವನನ್ನು ಪ್ರೀತಿಸುವ ನಟನೆ ಮಾಡಿದ ದಿಯಾ, ನಟನೆ ಮುಗಿಸಿ ಗುಡ್​ಬೈ ಹೇಳಿದ್ದಾಳೆ. ಜೈದೇವನಿಗೆ ದಿಕ್ಕೇ ತೋಚದಾಗಿದೆ. ಅಷ್ಟರಲ್ಲಿಯೇ ಪೊಲೀಸರು ಬಂದು ದೇಶ ಬಿಟ್ಟು ಹೋಗುವ ಪ್ಲ್ಯಾನ್ ಮಾಡಿದ ಕಾರಣಕ್ಕಾಗಿ ಜೈದೇವನನ್ನು ಅರೆಸ್ಟ್ ಮಾಡಲು ಬಂದಿದ್ದಾರೆ.

66
ಗಂಡಸರಿಗೆ ಬುದ್ಧಿಮಾತು

ಆದ್ದರಿಂದ ಇರೋ ಹೆಂಡ್ತಿಯನ್ನು ಬಿಟ್ಟು ದಿಯಾಳಂಥವಳನ್ನು ನಂಬಿಕೊಂಡ್ರೆ ಹೀಗೇ ಆಗೋದು ಎಂದು ಕಮೆಂಟಿಗರು ಗಂಡಸರಿಗೆ ಬುದ್ಧಿ ಮಾತು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories