ನಮ್ಗೂ ಇಂತ ಹುಡ್ಗಿ ಬೇಕು ಗುರು; ಚಿಕ್ಕಮಗಳೂರು ಮಠದಲ್ಲಿ ಕಾಣಿಸಿಕೊಂಡ ರಾಮಚಾರಿ 'ಚಾರು'

Published : Feb 10, 2023, 01:13 PM ISTUpdated : Feb 10, 2023, 01:48 PM IST

ಕೆಮಿಕಲ್ ಬಿದ್ದು ಶಾಶ್ವತವಾಗಿ ಕಣ್ಣು ಕಳೆದುಕೊಂಡು ರಾಮಚಾರಿ ಚಾರು. ಚಿಕಿತ್ಸೆ ಕೊಡಿಸಲಯ ಚಿಕ್ಕಮಗಳೂರಿನ ಮಠಕ್ಕೆ ಕರೆದುಕೊಂಡು ಹೋದ ರಾಮಾಚಾರಿ...  

PREV
16
ನಮ್ಗೂ ಇಂತ ಹುಡ್ಗಿ ಬೇಕು ಗುರು; ಚಿಕ್ಕಮಗಳೂರು ಮಠದಲ್ಲಿ ಕಾಣಿಸಿಕೊಂಡ ರಾಮಚಾರಿ 'ಚಾರು'

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ. ಕಣ್ಣು ಕಳೆದುಕೊಂಡಿರುವ ಚಾರು ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. 

26

ಲವ್ ಮಾಡು ಲವ್ ಮಾಡು ಎಂದು ರಾಮಚಾರಿ ಹಿಂದಿದ್ದ ಚಾರು ಕೆಮಿಲ್‌ ಮೇಲೆ ಬಿದ್ದು ಕಣ್ಣನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಹೀಗಾಗಿ ಚಾರುಗೆ ಮತ್ತೆ ಕಣ್ಣು ಬರಬೇಕು ಎಂದು ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ.

36

ಚಿಕ್ಕಮಗಳೂರಿನಲ್ಲಿ ಅವಧೂತರೊಬ್ಬರನ್ನು ಭೇಟಿ ಮಾಡಿ ಚಾರು ಚಿಕಿತ್ಸೆ ಆರಂಭಿಸುತ್ತಾರೆ. ಕಣ್ಣಿಗೆ ಯಾವ ರೀತಿ ಔ‍ಷಧಿ ಬೇಕು ಹೇಗೆ ಎಂದು ತಿಳಿದುಕೊಂಡು ಚಾರು ಕಷ್ಟವಾದರೂ ಪರ್ವಾಗಿಲ್ಲ ಎಂದು ಧೈರ್ಯ ಮಾಡುತ್ತಾರೆ.

46

ಈ ವೇಳೆ ಪೀಚ್ ಆಂಡ್ ಪಿಂಕ್ ಬಣ್ಣದ ಪಿಂಕ್ ಸೀರೆಯಲ್ಲಿ ಚಾರು ಉರ್ಫ್‌ ಮೌನಾ ಕಾಣಿಸಿಕೊಂಡಿದ್ದಾರೆ. ಸುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ ಹಾಗೂ ಕೈಯಲ್ಲಿ ಬಿಂದಿಗೆ  ಹಿಡಿದುಕೊಂಡಿದ್ದಾರೆ. 

56

 ಮಠ ಸೇರ್ಕೊಂಡ್ರಾ? ನಮ್ಗು ಇಂತ ಹುಡುಗಿ ಬೇಕು, ಹಳ್ಳಿ ಬೊಂಬೆ ತರ ಇದ್ದೀರಾ, ತುಂಟು ಬಟ್ಟೆ ಬೇಡ ಈ ರೀತಿ ಸೀರಿಯಲ್ಲಿ ಇದ್ದರೆ ಚೆಂದಾ ಎಂದು ನೆಟ್ಟಿಗರು ಮೌನ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 

66

ಚಾರು ಕಣ್ಣು ಕಳೆದುಕೊಂಡ ಮೇಲೆ ನಟನೆ ಚೆನ್ನಾಗಿ ಮಾಡುತ್ತಿದ್ದಾರೆ ಎನ್ನುವ ಮೆಚ್ಚುಗೆ ಕೇಳಿ ಬರುತ್ತಿದೆ. ರಾಮಾಚಾರಿ ಬೇಡ ಎನ್ನುವ ನಿರ್ಧಾರ ಮಾಡಿರುವ ಚಾರು ಸಿಂಗಲ್ ಅಗಿರಲು ನಿರ್ಧಾರ ಮಾಡಿದ್ದಾರೆ.

Read more Photos on
click me!

Recommended Stories