Playback Singer SPB, A Flashback ! : ಒಂದು ನೆನಪು ಗ್ರ್ಯಾಂಡ್ ಫಿನಾಲೆ

Published : Dec 08, 2021, 03:46 PM ISTUpdated : Dec 08, 2021, 06:19 PM IST

ಸರಣಿ ಸಂಗೀತ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಡಿ.15ಕ್ಕೆ ‘ಎಸ್‌ಪಿಬಿ ಒಂದು ನೆನಪು’ ಕಾರ್ಯಕ್ರಮ

PREV
16
Playback Singer SPB, A Flashback ! :  ಒಂದು ನೆನಪು ಗ್ರ್ಯಾಂಡ್ ಫಿನಾಲೆ

ಗತಿಸಿದ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥ ಡ್ರಮ್ಮರ್ ಅರುಣ್ ಕುಮಾರ್ ನೇತೃತ್ವದ ಬಾಬು ಸ್ಕೂಲ್ ಆಫ್ ರಿದಮ್ಸ್ ಹಾಗೂ ಶಾಂತಲಾ ಸೌಂಡ್‌ಸ್ ಆ್ಯಂಡ್ ಲೈಟ್‌ಸ್ ವತಿಯಿಂದ ವರ್ಷವಿಡೀ ನಡೆದ ಕಾರ್ಯಕ್ರಮ ‘ಎಸ್‌ಪಿಬಿ ಒಂದು ನೆನಪು’.

 

26

ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದ ಈ ಸರಣಿ ಸಂಗೀತ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಡಿ.15ಕ್ಕೆ ನಡೆಯಲಿದೆ. ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್, ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಎಂ ಡಿ ಪಲ್ಲವಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ.

 

36

‘ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಹಾಡು ಹಬ್ಬದಂತೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಳ್ಳಲು ಉಚಿತ ಪಾಸ್ ಗಾಗಿ 7358261624 ಅಥವಾ 7022737090 ನಂಬರ್‌ಗೆ ಕರೆ ಮಾಡಬಹುದು.

 

46

ಆನ್‌ಲೈನ್‌ನಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ’ ಎಂದು ಕಾರ್ಯಕ್ರಮ ಆಯೋಜಕರಾದ ಡ್ರಮ್ಮರ್ ಅರುಣ್ ತಿಳಿಸಿದ್ದಾರೆ.

 

56
=

ಬಾಬು ಸ್ಕೂಲ್ ಆಫ್ ರಿದಮ್ಸ್ ಯೂಟ್ಯೂಬ್ ಚಾನಲ್ ನಲ್ಲಿ ವರ್ಷವಿಡೀ ನಡೆದ ಕಾರ್ಯಕ್ರಮಗಳನ್ನು ನೋಡಬಹುದು. ಹಿರಿಯ ಸಂಗೀತಗಾರರಾದ ಆನೂರು ಅನಂತಕೃಷ್ಣ ಶರ್ಮಾ, ವಿಜಯ ಪ್ರಕಾಶ್, ನಂದಿತಾ, ಪಲ್ಲವಿ ಮತ್ತಿತರರು ಈ ಸರಣಿಯಲ್ಲಿ ಹಾಡಿದ್ದರು.

66

ವಿವಿಧ ಭಾಷೆಗಳಲ್ಲಿ ಎಸ್‌ಪಿಬಿ ಅವರು ಹಾಡಿ ಜನಪ್ರಿಯಗೊಳಿಸಿದ್ದ ಹಾಡುಗಳನ್ನು ಗಾಯಕರು ಹಾಡಿ ಎಸ್‌ಪಿಬಿ ಅವರನ್ನು ಸ್ಮರಿಸಿದ್ದರು. ಪ್ರತೀ ತಿಂಗಳ ಮೊದಲ ಭಾನುವಾರ ಈ ಕಾರ್ಯಕ್ರಮ ನಡೆದಿದ್ದು, ಈವರೆಗೆ 12 ಎಪಿಸೋಡ್‌ಗಳು ಪ್ರಸಾರವಾಗಿವೆ. 

click me!

Recommended Stories