ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ನನ್ನರಸಿ ರಾಧೆ'
ತುಂಬಾ ಮುದ್ದು ಪೆದ್ದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಇಂಚರಾ ಪಾತ್ರಧಾರಿಯ ನಿಜವಾದ ಹೆಸರು ಕೌಸ್ತುಭಾ ಎಸ್ ಮಣಿ
ಕೌಸ್ತುಭಾ ಅವರು ಬಿಕಾಂ ಪದವೀಧರೆಯಾಗಿದ್ದಾರೆ.
ವಿದ್ಯಾಭ್ಯಾಸದ ನಂತರ ಐಟಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿವಹಿಸಿದ್ದರಿಂದ ಕೌಸ್ತುಭಾ ವೃತ್ತಿ ಜೀವನ ದೊಡ್ಡ ತಿರುವು ಪಡೆದುಕೊಂಡಿತು.
ಕೌಸ್ತುಭಾಗೆ ಅವಕಾಶ ಕೊಡೆಸಿದ್ದು ನಟಿ ಟಗರು ಪುಟ್ಟಿ ಮಾನ್ವಿತ ಹರೀಶ್.
ಕಾರ್ಯಕ್ರಮವೊಂದಕ್ಕೆ ಜಡ್ಜ್ ಆಗಿ ಆಗಮಿಸಿದ ಮಾನ್ವಿತ, ಕೌಸ್ತುಭ ಅವರ ನಂಬರ್ ಪಡೆದುಕೊಂಡು ಆನಂತರ ಧಾರಾವಾಹಿಯ ಅವಕಾಶಕೊಡಿಸಿದ್ದಾರೆ.
ಕೌಸ್ತುಭ ರಿಯಲ್ ಲೈಫ್ ನಲ್ಲಿ ತುಂಬಾನೇ ಸೈಲೆಂಟ್ ಆದರೆ ಇಂಚರಾ ಪಾತ್ರದಲ್ಲಿ ಮಾತ್ರ ತುಂಬಾ ಡಿಫರೆಂಟ್ ಆಗಿ ಅಭಿನಯಿಸಿದ್ದಾರೆ.
ಇದೀಗ ಇವರಿಗೆ ಪರಭಾಷೆಯಿಂದಲೂ ಆಫರ್‌ಗಳನ್ನು ಪಡೆಯುತ್ತಿದ್ದಾರಂತೆ.
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
Suvarna News