ಕಪ್ಪು ಇರುವುದಕ್ಕೆ ಅವಕಾಶ ಸಿಗುತ್ತಿಲ್ಲ; ಟ್ರೋಲಿಗರ ಕೆಲಸದಿಂದ ಭಾವುಕಳಾದ 'ಲಕ್ಷಣ' ನಟಿ

First Published | Aug 31, 2023, 4:28 PM IST

ವೈರಲ್ ಅಯ್ತು ನಟಿ ಲಕ್ಷಣ ಹಳೆ ವಿಡಿಯೋ. ಕಪ್ಪು ಬಣ್ಣದ ಬಗ್ಗೆ ಕಾಮೆಂಟ್ ಬೇಡ ಎಂದ ಜನರು....
 

ಈ ಹಿಂದೆ ಲರ್ಸ್‌ ಕನ್ನಡ ವಾಹಿನಿಯಲ್ಲಿ ಮಹಾಸಂಗಮ ನಡೆಯುತ್ತಿದೆ. ಆಗ ಲಕ್ಷಣ ತಂಡದಿಂದ ಭೂಪತಿ ಉರ್ಫ್‌ ಜಗನ್, ಲಕ್ಷಣ ಉರ್ಫ್‌ ವಿಜಯಲಕ್ಷ್ಮಿ ಭಾಗಿಯಾಗಿದ್ದರು. 

ಕಪ್ಪು ಬಣ್ಣ ಎನ್ನುವ ಕಾರಣ ವಿಜಯಲಕ್ಷ್ಮಿ ಎದುರಿಸಿದ ಅವಮಾನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ತಾಯಿ ದೊಡ್ಡ ಪಾತ್ರ ವಹಿಸುತ್ತಾರೆ. ತಾಯಿ ಸಪೋರ್ಟ್‌ ಇಲ್ಲಿದೆ ಏನೋ ಮಾಡಲಾಗದು ಎಂದಿದ್ದಾರೆ.

Tap to resize

 'ಇದು ಬಣ್ಣದ ಜಗತ್ತು. ನಾವು ಹೇಗೆ ಕಾಣಿಸಿಕೊಳ್ಳುತ್ತೀವಿ ಅದರ ಮೇಲೆ ನಮ್ಮನ್ನು ಆಯ್ಕೆ ಮಾಡುತ್ತಾರೆ. ಒಂದು ತಪ್ಪು ಹುಡುಗಿ ಆಡಿಷನ್ ಮಾಡಿ ರಿಜೆಕ್ಟ್‌ ಆಗಿರುವ ಆ ನೋವನ್ನು ನಾನು ಅನುಭವಿಸಿರುವೆ.'

'ನನ್ನ ತಾಯಿ ಮಧ್ಯೆರಾತ್ರಿ ಎದ್ದು ಅಳುತ್ತಿದ್ದರು. ಅಮ್ಮ ನಿನ್ನ ಮೇಲೆ ಆ ತಪ್ಪನ್ನು ದಯವಿಟ್ಟು ಹಾಕಿಕೊಳ್ಳಬೇಡ. ಏನೋ ಕೆಟ್ಟ ಗಳಿಗೆ ಹಾಗೆ ನಡೆಯಿತು,' ಎಂದಿದ್ದಾರೆ. 

'ಟ್ರೋಲಿಗರು ಆರಂಭದಲ್ಲಿ ನಾನು ಫೇರ್‌ ಆಗಿರುವ ಅಂದುಕೊಂಡಿದ್ದರು ಆದರೆ ನಾನು ಡಸ್ಕಿ ಕಾಂಪ್ಲೆಕ್ಷನ್‌ ಎಂದು ಗೊತ್ತಾದ ಮೇಲೆ ಸುಮ್ಮನಾದರು. ಟ್ರೋಗಳನ್ನು ಅಷ್ಟಾಗಿ ಎದುರಿಸಿಲ್ಲ. ನನ್ನಲ್ಲೂ inferiority complex ಇತ್ತು'

ಎದುರಿಸಿಕೊಂಡು ಬಂದಿರುವೆ. ಆಡಿಷನ್‌ಗಳಲ್ಲಿ ಭಾಗಿಯಾಗುತ್ತಿದ್ದೆ ತುಂಬಾ ಹೆದರಿಕೊಳ್ಳುತ್ತಿದ್ದೆ, ಕಪ್ಪಿರುವೆ ಸೆಲೆಕ್ಟ್‌ ಆಗ್ತೀನೋ ಇಲ್ವೋ ಅನ್ನೋ ಭಯ ಚಳಿಯಿಂದ ಹೊರ ಬಂದ್ರೆ ಸಾಧನೆ ಮಾಡುತ್ತೀವಿ'

 'ಕಪ್ಪಾಗಿದ್ದೀವಿ ಅನ್ನೋ ಕಾರಣ ಅಲ್ಲಿ ಕೀಳರಿಮೆ ಇರುವುದಿಲ್ಲ. ಯಾವುದೋ ಒಂದು ರೂಪದಲ್ಲಿ ಅದು ನಮಗೆ ಸಹಾಯ ಮಾಡುತ್ತದೆ' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ವಿಜಯ ಲಕ್ಷ್ಮಿ ಹೇಳಿದ್ದಾರೆ. 

Latest Videos

click me!