ನಟನೆಗಾಗಿ ವಿದೇಶದಲ್ಲಿದ್ದ ಕೆಲಸ ಬಿಟ್ಟ ನೀನಾದೆ ನಾ ನಟ, ಬುರ್ಜ್ ಖಲೀಫಾ ಖ್ಯಾತಿಯ ದಿಲೀಪ್ ಶೆಟ್ಟಿ

Published : Aug 31, 2023, 11:16 AM IST

ಕನ್ನಡ ಕಿರುತೆರೆಯ ಬುರ್ಜ್ ಖಲೀಫಾ ಎಂದೇ ಖ್ಯಾತರಾಗಿರೋ, ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನೀನಾದೆನಾ ಸೀರಿಯಲ್ ನಲ್ಲಿ ನಟಿಸುತ್ತಿರುವ ನಟ ದಿಲೀಪ್ ಶೆಟ್ಟಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.   

PREV
18
ನಟನೆಗಾಗಿ ವಿದೇಶದಲ್ಲಿದ್ದ ಕೆಲಸ ಬಿಟ್ಟ ನೀನಾದೆ ನಾ ನಟ,  ಬುರ್ಜ್ ಖಲೀಫಾ ಖ್ಯಾತಿಯ ದಿಲೀಪ್ ಶೆಟ್ಟಿ

ನೋಡಲು ಹ್ಯಾಂಡ್ಸಮ್, ಕನ್ನಡ ಕಿರುತೆರೆಯ ಫೆವರಿಟ್, ಸದ್ಯಕ್ಕಂತೂ ಸೀರಿಯಲ್‌ನಲ್ಲಿ ತನ್ನ ಠಪೋರಿ ಲುಕ್‌ನಿಂದ ಹುಡುಗಿಯರ ಹೃದಯ ಗೆದ್ದ ನಟ ಅಂದ್ರೆ ಅದು ದಿಲೀಪ್ ಶೆಟ್ಟಿ ಎಂದರೆ ತಪ್ಪಾಗಲ್ಲ. 
 

28

ಸುಮಾರು 6 ಅಡಿ 1 ಇಂಚು ಎತ್ತರ ಹೊಂದಿರೋ ಇವರನ್ನು ಕನ್ನಡ ಕಿರುತೆರೆಯ ಬುರ್ಜ್ ಖಲೀಫಾ (Burj Khalifa) ಅಂತಾನೆ ಕರಿಯೋದು. ಈ ಮಂಗಳೂರು ಹುಡುಗ ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನೀನಾದೆನಾ ಸೀರಿಯಲ್ ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 
 

38

ದಿಲೀಪ್ (Dileep Shetty) ಕೇವಲ ಸೀರಿಯಲ್ ಮಾತ್ರ ಅಲ್ಲ, ಸಿನಿಮಾದಲ್ಲೂ ಮಿಂಚಿದ್ದರು. ವಿದ್ಯಾವಿನಾಯಕ ಸೀರಿಯಲ್ ಮೂಲಕ ಮನೆಮಾತಾದ ಈ ಕುಡ್ಲದ ಹುಡಗನ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಬೇಕು ಅಂದ್ರೆ ನೀವು ಇದನ್ನ ಓದಲೇ ಬೇಕು. 
 

48

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ದಿಲೀಪ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಮಂಗಳೂರಿನ ಸ್ಥಳೀಯ ಖಾಸಗಿ ಶಾಲೆಯಲ್ಲಿ ಮಾಡಿದರು. ಬಳಿಕ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಪಡೆದರು. ಇದಾದ ಬಳಿಕ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡರು. 
 

58

ಆರಂಭದ ದಿನಗಳಲ್ಲಿ ಮಾಡೆಲಿಂಗ್‌ನಲ್ಲಿ (Modeling) ಗುರುತಿಸಿಕೊಂಡಿದ್ದ ನಟ ದಿಲೀಪ್ ದುಬೈನಲ್ಲಿ ಫ್ಯಾಷನ್ ಈವೆಂಟ್‌ನಲ್ಲಿ ಭಾಗವಹಿಸಿ, ಮಿಸ್ಟರ್ ದುಬೈ ಎನ್ನುವ ಟೈಟಲ್ ಸಹ ಗೆದ್ದಿದ್ದರು. ಅನೇಕ ಫ್ಯಾಷನ್ ಶೋಗಳಲ್ಲಿ ಸಹ ಇವರು ಭಾಗವಹಿಸಿದ್ದರು. 
 

68

ಈ ಆರಡಿ ಕಟೌಟ್ ದಿಲೀಪ್ ಅವರ ಹಲವಾರು ವಿಡಿಯೋಗಳನ್ನು ನೋಡಿದ್ದ ದಿಲೀಪ್ ರಾಜ್ ಅವರು ವಿದ್ಯಾ ವಿನಾಯಕ ಸೀರಿಯಲ್‌ನಲ್ಲಿ ನಟಿಸಲು ದಿಲೀಪ್ ಶೆಟ್ಟಿ ಅವರನ್ನು ಕೇಳಿದ್ರಂತೆ. ನಟನೆಯಲ್ಲಿ ಲಕ್ ಹೇಗಿದೆ ಎಂದು ಪರೀಕ್ಷಿಸುವ ಸಲುವಾಗಿ ದಿಲೀಪ್ ದುಬೈನ ಕೆಲಸ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟರು. 
 

78

ವಿದ್ಯಾ ವಿನಾಯಕ ಬಳಿಕ ದಿಲೀಪ್ ಶೆಟ್ಟಿ, ಥಕದಿಮಿಥಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ (reality show) ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ರಾಬರ್ಟ್‌ ಹಾಗೂ ಹಿರಣ್ಯ ಸಿನಿಮಾಗಳಲ್ಲಿ ದಿಲೀಪ್‌ ನಟಿಸಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. 
 

88

ತೆಲುಗು ಕಿರುತೆರೆಯಲ್ಲೂ ಸಹ ಸಖತ್ ಫೇಮಸ್ ಆಗಿರುವ ದಿಲೀಪ್ ಕೃಷ್ಣ ತುಳಸಿ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದರು. ಈ ಸೀರಿಯಲ್ ಕನ್ನಡದಲ್ಲಿ ಕೂಡ ಡಬ್ ಆಗಿತ್ತು. ಸದ್ಯ ನೀನಾದೆ ನಾ ಸೀರಿಯಲ್‌ನಲ್ಲಿ ರೌಡಿ ವಿಕ್ರಮ್ ಆಗಿ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories