ಅಮೃತಧಾರೆ ಗೌತಮ್ - ಭೂಮಿ ಜೋಡಿ ಮದುವೆ ಫೋಟೋ ವೈರಲ್… ಮೆಚ್ಚಿದ ಪ್ರೇಕ್ಷಕರು

Published : Aug 31, 2023, 11:37 AM IST

ಅಮೃತಧಾರೆ ಸೀರಿಯಲ್ ಮೂಲಕ ಮನೆಮಾತಾಗಿರುವ ಗೌತಮ್ ಮತ್ತು ಭೂಮಿಕಾ ಮದುವೆ ಫೋಟೋ ಸದ್ಯ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇಬ್ಬರನ್ನ ನೋಡಿ ಖುಷಿ ಪಡ್ತಿದ್ದಾರೆ. ಹಲವು ಕಾರಣಗಳಿಂದ ಮದುವೆಯಾಗದೇ ಉಳಿದ ಹಿರಿ ಜೀವಗಳು ಮದುವೆಯಾಗುವ ಕಥೆಯುಳ್ಳ ಈ ಸೀರಿಯಲ್ ನಾಯಕ ನಟ, ನಟಿಯ ಅದ್ಭುತ ಅಭಿನಯನದಿಂದ ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  

PREV
17
ಅಮೃತಧಾರೆ ಗೌತಮ್ - ಭೂಮಿ ಜೋಡಿ ಮದುವೆ ಫೋಟೋ ವೈರಲ್… ಮೆಚ್ಚಿದ ಪ್ರೇಕ್ಷಕರು

ವಿಭಿನ್ನ ಕತೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಅಮೃತಧಾರೆ ಸೀರಿಯಲ್ (Amruthadhaare) ನಲ್ಲಿ ಸದ್ಯ ಮದುವೆಯ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಜೀವಾ ಮತ್ತು ಮಹಿಮಾ ಮದುವೆಯ ಫೋಟೋಗಳು ಹರಿದಾಡುತ್ತಿವೆ. 
 

27

ಜೀವಾ ಮಹಿಮೆ ಮದುವೆ ಸಂಭ್ರಮ ಇನ್ನೂ ಸಹ ಮುಗಿದಿಲ್ಲ, ಇದೀಗ ಇದರ ನಡುವೆ ಗೌತಮ್ ಮತ್ತು ಭೂಮಿಕಾ ಮದುವೆ ಫೋಟೋ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದೆ. ಈ ಜೋಡಿಯ ಮದುವೆಗಾಗಿ ಕಾಯುತ್ತಿರುವ ಪ್ರೇಕ್ಷಕರು ಮಾತ್ರ ಇಬ್ಬರ ಮದುವೆ ಫೋಟೊ ನೋಡಿ ಸಂಭ್ರಮಿಸಿದ್ದಾರೆ. 
 

37

ಈ ಜೋಡಿಯ ಫೋಟೋ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಜೋಡಿ ಅದ್ಭುತವಾಗಿ ಕಾಣುತ್ತಿದೆ ಎಂದರೆ, ಮತ್ತೊಬ್ಬರು ಇಬ್ಬರ ಮದುವೆಗಾಗಿ ಕಾಯ್ತಾ ಇದ್ದೀವಿ ಎಂದು ಕಾಮೆಂಟ್ ಮಾಡಿದ್ದಾರೆ. 
 

47

ಮತ್ತೊಬ್ಬರು ಯಾವುದೇ ಡ್ರಾಮಾ, ಸಮಯ ವ್ಯರ್ಥ ಮಾಡದಂತಹ ಅದ್ಭುತ ಕಥೆ ಹೊಂದಿದ ಸೀರಿಯಲ್ ಇದಾಗಿದೆ, ಈ ಜೋಡಿಯೂ ಸೂಪರ್ ಆಗಿದೆ ಎಂದಿದ್ದಾರೆ. ಇನ್ನು ಕೆಲವರಂತೂ ಹಾರ್ಟ್ ಇಮೋಜಿಗಳ ಸುರಿಮಳೆ ಸುರಿಸುವ ಮೂಲಕ ತಮ್ಮ ನೆಚ್ಚಿನ ಜೋಡಿಗೆ ಪ್ರೀತಿ ಹರಿಸಿದ್ದಾರೆ.
 

57

ಅಮೃತಧಾರೆ (Amruthadhare) ಸೀರಿಯಲ್ ಶುರುವಾಗಿ ಸ್ವಲ್ಪ ಸಮಯದಲ್ಲಿ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಜೊತೆಗೆ ಟಿಆರ್‌ಪಿಯಲ್ಲೂ ಸೀರಿಯಲ್ ಟಾಪ್ 5ರ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದೆ. ವಿಭಿನ್ನ ಕಥೆಯ ಮೂಲಕ ಜನಮನ ಸೆಳೆದಿದೆ.

 

67

ವಯಸ್ಸಾದರೂ ಮದುವೆಯಾಗದ ಜೋಡಿಗಳ ಕತೆ ಇದು. ಜಗಳದ ಮೂಲಕವೇ ಒಬ್ಬರಿಗೊಬ್ಬರು ಪರಿಚಯವಾಗುವ ಭೂಮಿ ಮತ್ತು ಗೌತಮ್, ಕೊನೆಗೆ ತಮ್ಮ ಸಹೋದರ ಮತ್ತು ಸಹೋದರಿಗಾಗಿ ಮಾತುಕತೆ ಆರಂಭಿಸಿ, ಜೊತೆಗೆ ಇಬ್ಬರ ಮದುವೆ ಮಾಡಲು ಸಹ ನಿರ್ಧಾರ ಮಾಡಲಾಗುತ್ತದೆ. 
 

77

ಇಬ್ಬರಿಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಪ್ರೀತಿ ಇಲ್ಲದಿದ್ದರೂ ತಮ್ಮ ಕುಟುಂಬಕ್ಕಾಗಿ ಮದುವೆಗೆ ಒಪ್ಪಿಕೊಂಡಿರುವ ಜೋಡಿಗಳ ನಡುವೆ ಪ್ರೀತಿ ಹುಟ್ಟುತ್ತಾ? ಮಹಿಮಾ ಅಹಂಕಾರದಿಂದ ಮತ್ತೆ ಮದುವೆಯ ನಂತರದ ಜೀವನ ಹೇಗಿರುತ್ತೆ? ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು. 

Read more Photos on
click me!

Recommended Stories