ಮಗಳ ಮೊದಲ ಫೋಟೋ, ಹೆಸರು ರಿವೀಲ್ ಮಾಡಿದ ಕಿರುತೆರೆ ಸೆಲೆಬ್ರಿಟಿ ಕಪಲ್!

First Published | Mar 4, 2022, 5:24 PM IST

 ಸೆಲೆಬ್ರಿಟಿ ಕಪಲ್ ಅಮೃತಾ ಮತ್ತು ರಘು ತಮ್ಮ ಪುತ್ರಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೊಲದ ಬಾರಿ ಅಪ್ಲೋಡ್ ಮಾಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. 
 

ಕನ್ನಡ ಕಿರುತೆರೆ ಲೋಕದಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ರಂಗೇಗೌಡ ಎಂದೇ ಖ್ಯಾತಿ ಪಡೆದುಕೊಂಡಿರುವ ರಘು ಮತ್ತು ಅಮೃತಾ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. 

ಅಕ್ಟೋಬರ್ 21, 2021ರಲ್ಲಿ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ಈ ಜೋಡಿ ಕೆಲವು ದಿನಗಳ ಹಿಂದೆ ನಾಮಕರಣ ಮಾಡಿದ್ದಾರೆ. ಆಕೆಗೆ ಧೃತಿ ಎಂದು ಹೆಸರಿಟ್ಟಿದ್ದಾರೆ. 

Tap to resize

ನಾಮಕರಣದಲ್ಲಿ ಸೆರೆ ಹಿಡಿದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ರಘು ಮಗಳಿಗೆ ಮುತ್ತು ಕೊಡುತ್ತಿದ್ದಾರೆ. ಧ್ರುತಿ ಕ್ಯಾಮೆರಾವನ್ನು ದಿಟ್ಟಿಸಿ ನೋಡುತ್ತಿದ್ದಾಳೆ.

ಈ ಫೋಟೋ ಹಿಂದಿರುವ ಇವರ ತಮಾಷೆಯ ಸಂದರ್ಭವನ್ನೂ ಬರೆದಿದ್ದಾರೆ. ಧೃತಿ  ಹೇಳುತ್ತಾಳೆ ನನಗೆ ಅಪ್ಪ ಅಮ್ಮ ಇಬ್ಬರು ತುಂಬಾನೇ ಫೆವರೆಟ್ ಎಂದು.

ಆಗ ಅಮ್ಮ ಅಮೃತಾ ಹೇಳುತ್ತಾರೆ. ನಿಮಗೆ ನನ್ನ ಮಗಳನ್ನು ತೋರಿಸಲು ಕಾಯುತ್ತಿರುವೆನೆಂದು. ಆಗ ತಂದೆ ರಘು ಸ್ವಲ್ಪ ಫೋಟೋ ಕ್ರಾಪ್ ಮಾಡಿ ಹಾಕು ಎಂದ ಹೇಳುತ್ತಾರಂತೆ.

 ಹಳದಿ ಮತ್ತು ಗೋಲ್ಡ್‌ ಕಾಂಬಿನೇಷನ್‌ ಇರುವ ರೇಶ್ಮೆ ಲಂಗಾ ಬ್ಲೌಸ್‌ನಲ್ಲಿ ಧೃತಿ ಕಂದಮ್ಮ ಮಿಂಚುತ್ತಿದ್ದಾರೆ. ರೇಶ್ಮೆ ಪಂಚೆ ಶಲ್ಯದಲ್ಲಿ ರಘು ಆಕೆಯನ್ನು ಮಡಿಲ ಮೇಲೆ ಕೂರಿಸಿಕೊಂಡಿದ್ದಾರೆ.

Latest Videos

click me!