ಇದ್ದಕ್ಕಿದ್ದಂತೆ ಕನ್ನಡತಿಯಲ್ಲಿ ಭುವಿ ಕಣ್ಮರೆಯಾಗಿದ್ದಕ್ಕೆ ಸಿಕ್ತು ಕಾರಣ!

First Published | Jan 21, 2022, 2:57 PM IST

ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಕಾಣೆಯಾದ ಕನ್ನಡತಿ ರಂಜನಿ. ಕೊರೋನಾ ಪಾಸಿಟಿವ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ನಟಿ.

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಿಂದ ರಂಜನಿ ಕಾಣೆಯಾಗಿದ್ದಾರೆ.

 ಅಜ್ಜಿಗೆ ಹುಷಾರಿಲ್ಲ ಎಂದು ಊರಿಗೆ ತೆರಳಿರುವದಾಗಿ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಆದರೆ ರಂಜನಿಗೆ (Ranjani Raghavan) ಕೊರೋನಾ ಸೊಂಕು ತಗುಲಿದೆ.

Tap to resize

ಹರ್ಷ ಉರ್ಫ್ ಕಿರಣ್ ರಾಜ್‌ (Kiran Raj) ಇನ್‌ಸ್ಟಾಗ್ರಾಂನಲ್ಲಿ 'Get well soon Champ' ಎಂದು ಬರೆದುಕೊಂಡು, ರಂಜನಿ ಅವರನ್ನು ಟ್ಯಾಗ್ ಮಾಡಿದ್ದಾರೆ. 

 'ಧನ್ಯವಾದಗಳು. ಗೆಳೆಯರೆ ನಾನು ನಿಮ್ಮ ಮೆಸೇಜ್ ಓದುತ್ತಿರುವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನನಗೆ ಕೊರೋನಾ ಪಾಸಿಟಿವ್ ಆಗಿದೆ. ಚೇತರಿಸಿಕೊಳ್ಳುತ್ತಿರುವೆ. ಚಿಂತೆ ಮಾಡದಿರಿ,' ಎಂದು ರಂಜನಿ ಬರೆದುಕೊಂಡಿದ್ದಾರೆ.

ರಂಜನಿ ಅವರಿಗೆ ಕೊರೋನಾ ಪಾಸಿಟಿವ್ (Covid19 Positive) ಆಗಿ ಈಗ ನೆಗೆಟಿವ್ ಆಗಿದೆ,ಎಂದು ಹೇಳಲಾಗುತ್ತಿದೆ ಆದರೆ ನಟಿ ಇದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. 

ಧಾರಾವಾಹಿ ಹೊರತು ಪಡಿಸಿ ರಂಜನಿ ಅವರು ವಿಜಯ್ ರಾಘವೇಂದ್ರ (Vijay Raghavendra), ಚಂದನ್ ಅನಂತಕೃಷ್ಣ ಮತ್ತು ಯಮುನಾ ಶ್ರೀನಿಧಿ ಜೊತೆ ವೆಬ್‌ ಸೀರಿಸ್‌ನಲ್ಲಿಯೂ ನಟಿಸುತ್ತಿದ್ದಾರೆ.

Latest Videos

click me!