ಮಾಲ್ಡೀವ್ಸ್‌ ಹೋಗಿದ್ದಕ್ಕೂ ಸಾರ್ಥಕ ಆಯ್ತು; ಪತ್ನಿ ಸೀಮಂತಾ ಫೋಟೋ ಹಾಕಿದ ಧನ್‌ರಾಜ್‌, ಕಾಲೆಳೆದ ನೆಟ್ಟಿಗರು!

First Published | Jun 21, 2024, 5:04 PM IST

ಅಬ್ಬಾ! ಶಾರದಾಂಬೆ ರೀತಿ ಕಾಣಿಸುತ್ತಿದ್ದಾರೆ ನಿಮ್ಮ ಪತ್ನಿ....ಧನ್‌ರಾಜ್‌ ಪತ್ನಿ ಪ್ರಜ್ಞಾಗೆ ಹರಿದು ಬಂತು ಶುಭಾಶಯಗಳ ವಿಶ್.....

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಸಖತ್ ಟ್ರೆಂಡ್‌ ಕ್ರಿಯೇಟ್ ಮಾಡಿದ ಜೋಡಿ ಧನ್‌ರಾಜ್‌ ಮತ್ತು ಪ್ರಜ್ಞಾ ಆಚಾರ್.

 ಸೋಷಿಯಲ್‌ ಮೀಡಿಯಾದಲ್ಲಿ ಹೆಸರು ಕ್ರಿಯೇಟ್ ಆಗುತ್ತಿದ್ದಂತೆ ಈ ಧನ್‌ರಾಜ್‌ ಗಿಚ್ಚಿ ಗಿಲಿಗಿಲಿ ರಿಯಾಲಿ ಶೋ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸಿದ್ದರು.

Tap to resize

ಸದ್ಯ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಧನ್‌ರಾಜ್‌ ಫ್ಯಾಮಿಲಿ ಕಡೆಯಿಂದ ಸಿಹಿ ಸುದ್ದಿ ನೀಡಿದ್ದರೂ. ಏನಾದರೂ ವಿಶೇಷಾ ಉಂಟಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರಿಸಿದ್ದರು.

ಕೆಲವು ತಿಂಗಳುಗಳ ಹಿಂದೆ ನಮ್ಮ ಫ್ಯಾಮಿಲಿಯಲ್ಲಿ ವಿಶೇಷ ಉಂಟು ಎಂದು ಪತ್ನಿ ಪ್ರೆಗ್ನೆಂಟ್‌ ಅನ್ನೋ ವಿಚಾರವನ್ನು ಅನೌನ್ಸ್‌ ಮಾಡಿದ್ದರು. 

 ಈಗ ತಮ್ಮ ಹುಟ್ಟೂರಿನಲ್ಲಿ ಪ್ರಜ್ಞಾ ಸೀಮಂತವನ್ನು ಅದ್ಧೂರಿಯಾಗಿ ನಡೆದಿದೆ. ತಲೆಗೆ ಮೊಗ್ಗಿನ ಜಡೆ ಕಟ್ಟಿದ್ದಾರೆ. ಮಹಾಲಕ್ಷ್ಮಿ ರೀತಿ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಜೋಡಿ ಮಾಲ್ಡೀವ್ಸ್‌ ಟ್ರಿಪ್‌ ಫೋಟೋ ಹಾಕಿದ್ದರು. ಹೀಗಾಗಿ ಸೀಮಂತ ಫೋಟೋಗೆ ಮಾಲ್ಡೀವ್ಸ್‌ ಟ್ರಿಪ್‌ ಹೋಗಿದ್ದು ಸಾರ್ಥಕವಾಗಿತ್ತುಎಂದು ಕಾಲೆಳೆದಿದ್ದಾರೆ. 

Latest Videos

click me!