ಬೆಟ್ಟದ ನೆರಳಲ್ಲಿ ಗಿಣಿರಾಮ ಬೆಡಗಿ ನಯನಾ ಹನಿಮೂನ್‌, ಫೋಟೋ ಹಂಚಿಕೊಂಡ ಹೊಸ ಜೋಡಿ!

First Published | Jun 21, 2024, 4:39 PM IST


ಪಾಪ ಪಾಂಡು, ಗಿಣಿರಾಮ ಸೀರಿಯಲ್‌ಗಳ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾಗಿರುವ ನಟಿ ನಯನಾ ನಾಗರಾಜ್‌ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಟಿ ನಯನಾ ನಾಗರಾಜ್‌ ಜಾಲಿ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಅವರು ವಿವಾಹವಾಗಿದ್ದಾರೆ. ವಯ್ನಾಡ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ಜೀವನದ ಹನಿಮೂನ್‌ ಕ್ಷಣವನ್ನು ಅವರು ಆನಂದಿಸುತ್ತಿದ್ದಾರೆ.

ಈ ಕುರಿತಾದ ವಿಡಿಯೋವನ್ನು ಅವರು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಳೆಗಾಲದಲ್ಲಿ ವಯ್ನಾಡ್‌ ರಮಣೀಯವಾಗಿ ಕಾಣುತ್ತದೆ. 

Tap to resize

ವಯ್ನಾಡ್‌ನ ಮೌಂಟೇನ್‌ ಶ್ಯಾಡೋಸ್‌ ರೆಸಾರ್ಟ್‌ನಲ್ಲಿ ಹನಿಮೂನ್‌ ಆನಂದಿಸುತ್ತಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಸ್ಟೋರಿಸ್‌ಗಳಲ್ಲಿ ಇದನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ವಯ್ನಾಡ್‌ನ ಅತ್ಯಾಕರ್ಷಕ ಪ್ಲೇಸ್‌ನಲ್ಲಿರುವ ಈ ರೆಸಾರ್ಟ್‌ನಲ್ಲಿ ಒಂದು ದಿನದ ವಾಸವೇ ಅಂದಾಜು 40 ಸಾವಿರ ರೂಪಾಯಿ ಆಗುತ್ತದೆ. ಇನ್ನು ಹನಿಮೂನ್‌ಗಾಗಿ ಈ ರೆಸಾರ್ಟ್‌ ಆಯ್ಕೆ ಮಾಡಿಕೊಳ್ಳುವವರಿಗೆ ಇನ್ನೂ ಹಲವು ಆಯ್ಕೆಗಳಿವೆ.

ಕೆಲ ದಿನಗಳ ಹಿಂದೆಯಷ್ಟೇ ದೀರ್ಘಕಾಲದ ಗೆಳೆಯ ಸುಹಾಸ್‌ ಶಿವಣ್ಣ ಅವರನ್ನು ನಯನಾ ನಾಗರಾಜ್‌ ಮದುವೆಯಾಗಿದ್ದರು. ತೀರಾ ಸರಳವಾಗಿ ಮದುವೆ ಸಮಾರಂಭ ನಡೆದಿತ್ತು.

ಆಪ್ತರು ಹಾಗೂ ವೃತ್ತಿ ಸ್ನೇಹಿತರು ಮಾತ್ರವೇ ಈ ಕಾರ್ಯಕ್ರಮದಲ್ಲಿದ್ದರು. ನಟಿ ಚಂದನಾ ಅನಂತಕೃಷ್ಣ, ಗಿಣಿರಾಮ ಸೀರಿಯಲ್‌ನ ಹೀರೋ ರಿತ್ವಿಕ್‌ ಕೂಡ ಮದುವೆಗೆ ಬಂದು ನವ ಜೋಡಿಗೆ ಶುಭಹಾರೈಸಿದ್ದರು.

ಕಳೆದ ಮಾರ್ಚ್‌ನಲ್ಲಿ ನಯನಾ ನಾಗರಾಜ್‌ ಹಾಗೂ ಸುಹಾಸ್‌ ಶಿವಣ್ಣ ನಿಶ್ಚಿತಾರ್ಥ ನಡೆದಿತ್ತು. ಈ ವೇಳೆ ಅವರು, ನಮ್ಮ ಸಂಬಂಧವನ್ನು ಅಪ್‌ಗ್ರೇಡ್‌ ಮಾಡುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದರು.

ಮದುವೆ ಹಾಗೂ ನಿಶ್ಚಿತಾರ್ಥ ಎರಡೂ ಸಮಾರಂಭದ ಚಿತ್ರಗಳನ್ನು ನಯನಾ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯ ಮೂಲಕವೇ ಹಂಚಿಕೊಂಡಿದ್ದರು. 

ಗಿಣಿರಾಮ ಸೀರಿಯಲ್‌ನಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ನಯನಾ ನಾಗರಾಜ್‌ ಕಿರುತೆರೆಯಲ್ಲಿ ಪ್ರಸಿದ್ಧರಾಗಿದ್ದರು. ಇತ್ತೀಚಿಗಷ್ಟೇ ಈ ಸೀರಿಯಲ್‌ ಮುಕ್ತಾಯ ಕಂಡಿದೆ.

ಅದಕ್ಕೂ ಮುನ್ನ ನಯನಾ ನಾಗರಾಜ್‌, ಪಾಪ ಪಾಂಡು ಸೀರಿಯಲ್‌ನಲ್ಲಿ ನಟಿಸಿದ್ದರು. ಆ ಮೂಲಕವೇ ಅವರು ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.

ಸುಹಾಸ್‌ ಶಿವಣ್ಣ ಮೂಲತಃ ರಂಗಭೂಮಿ ಕಲಾವಿದ. ವೇದಿಕೆಗಳಲ್ಲಿ ತಮ್ಮ ನಾಟಕಗಳ ಕಾರಣಕ್ಕಾಗಿಯೇ ಕಲಾವಿದರ ನಡುವೆ ಅವರು ಹೆಸರು ಸಂಪಾದನೆ ಮಾಡಿದ್ದಾರೆ.

ಉತ್ತಮ ಗಾಯಕಿಯೂ ಆಗಿರುವ ನಯನಾ ನಾಗರಾಜ್ ಸಾಕಷ್ಟು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ವೇಳೆಯಲ್ಲಿಯೇ ಅವರಿಗೆ ಸುಹಾಸ್‌ ಶಿವಣ್ಣ ಪರಿಚಯವಾಗಿದ್ದರು ಎನ್ನಲಾಗಿದೆ.

ಸುಹಾಸ್‌ ಶಿವಣ್ಣ ಹಾಗೂ ನಯನಾ ನಾಗರಾಜ್‌ ಹಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಕ್ಕೂ ಮುನ್ನವೇ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.

ನಯನಾ ನಾಗರಾಜ್ ಮದುವೆಯಲ್ಲಿ ಸಿಹಿ ಕಹಿ ಚಂದ್ರು ಅವರ ಕುಟುಂಬ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದೆ. ಸಿಹಿ ಕಹಿ ಚಂದ್ರ ಅವರ ಪಾಪಾ ಪಾಂಡು ಧಾರವಾಹಿಯೇ ನಯನಾ ನಾಗರಾಜ್‌ಗೆ ಬ್ರೇಕ್‌ ನೀಡಿತ್ತು.

Latest Videos

click me!