ದಯವಿಟ್ಟು ಡವ್ ಮಾಡ್ಬೇಡಿ; ಸೀರಿಯಲ್ ಆದ್ಮೇಲೂ ಗೀತಾ-ವಿಜಿ ಸುತ್ತಾಟ, ಫೋಟೋ ವೈರಲ್

First Published | Sep 8, 2023, 3:17 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಗೀತಾ- ವಿಜಯ್ ಸುತ್ತಾಟದ ಫೋಟೋ. ನೆಟ್ಟಿಗರ ಪ್ರಶ್ನೆಗೆ ಉತ್ತರ ಇಲ್ವಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದು  ಭವ್ಯಾ ಗೌಡ ಮತ್ತು ಧನುಷ್ ಗೌಡ ಫೋಟೋ ವೈರಲ್ ಆಗಿದೆ. 

ಗೀತಾ ಪಾತ್ರದಲ್ಲಿ ಭವ್ಯಾ ಗೌಡ ಮಿಂಚಿದ್ದರೆ, ವಿಜಯ್ ಪಾತ್ರದಲ್ಲಿ ಧನುಷ್ ಗೌಡ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. 

Tap to resize

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಭವ್ಯಾ ಮತ್ತು ಧನುಷ್ ಚಿತ್ರೀಕರಣದ ನಂತರ ಹೊರಗಡೆ ಸುತ್ತಾಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷ ಧನುಷ್ ಬರ್ತಡೇನ ಭವ್ಯಾ ಅದ್ಧೂರಿಯಾಗಿ ಆಚರಿಸುತ್ತಾರೆ ಹಾಗೂ ಭವ್ಯಾ ಬರ್ತಡೇನ ಧನುಷ್ ಆಚರಿಸುತ್ತಾರೆ. ಭವ್ಯಾ ಸಹೋದರಿಯರ ಜೊತೆಗೂ ವಿಜಯ್ ಕ್ಲೋಸ್ ಆಗಿದ್ದಾರೆ.

ಅಲ್ಲದೆ ಈ ಜೋಡಿ ಆಗಾಗ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಆಫ್‌ ಸ್ಕ್ರೀನ್‌ನಲ್ಲೂ ಈ ಜೋಡಿ ನಡುವೆ ಕುಚ್ ಕುಚ್ ಇದೆ ಎನ್ನುತ್ತಾರೆ ನೆಟ್ಟಿಗರು. 

ಇಷ್ಟೊಂದು ಡವ್ ಮಾಡಬೇಡಿ ಎಲ್ಲರ ಎದುರು ನಾವು ಸಿಂಗಲ್ ಎಂದು ಸುಳ್ಳು ಹೇಳುವುದು ಯಾಕೆ? ಪ್ರೀತಿ ಇದ್ದರೆ ಒಪ್ಪಿಕೊಳ್ಳಿ ಎಂದು ಆಗಾಗ ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.

ಕಾಮೆಂಟ್ಸ್‌ ನೋಡಿದರೆ ಕೆಲವರು ಧನುಷ್ ಮತ್ತು ಭವ್ಯಾ ಸಹೋದರಿ ಇಷ್ಟ ಪಡುತ್ತಿದ್ದಾರೆ ಎನ್ನುತ್ತಾರೆ ಇನ್ನೂ ಕೆಲವರು ಇಲ್ಲ ಇಲ್ಲ ಈ ಜೋಡಿನೇ ಸೂಪರ್ ಎನ್ನುತ್ತಾರೆ.

Latest Videos

click me!