ನೀನಾದೆ ನಾ: ಸೀರಿಯಲ್‌ನಲ್ಲಿ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ, ನಿಜ ಜೀವನದಲ್ಲಿ ವೇದಾ, ಶೈಲೂ ಬೆಸ್ಟ್ ಫ್ರೆಂಡ್ಸ್!

Published : Sep 07, 2023, 03:43 PM IST

ನೀನಾದೆ ನಾ ಸೀರಿಯಲ್‌ನಲ್ಲಿ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಶೈಲೂ ಗೊತ್ತಿರಬೇಕಲ್ಲ. ಇವರು ಯಾವತ್ತೂ ನಾಯಕಿ ವೇದಾಗೆ ಒಳ್ಳೆದಾಗೋದನ್ನು ಸಹಿಸೋದಿಲ್ಲ. ವೇದಾಳನ್ನು ಕಂಡ್ರೆನೆ ಉರಿದು ಬೀಳುವ ಶೈಲೂ ನಿಜ ಜೀವನದಲ್ಲಿ ವೇದಾಳ ಬೆಸ್ಟ್ ಫ್ರೆಂಡ್.   

PREV
19
ನೀನಾದೆ ನಾ: ಸೀರಿಯಲ್‌ನಲ್ಲಿ  ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ, ನಿಜ ಜೀವನದಲ್ಲಿ ವೇದಾ, ಶೈಲೂ ಬೆಸ್ಟ್ ಫ್ರೆಂಡ್ಸ್!

ಸ್ಟಾರ್ ಸುವರ್ಣದಲ್ಲಿ  (Star Suvarna) ಪ್ರಸಾರವಾಗುತ್ತಿರುವ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಧಾರಾವಾಹಿ ಅಂದ್ರೆ ಅದು ನೀನಾದೆ ನಾ ಸೀರಿಯಲ್. ಈ ಸೀರಿಯಲ್‌ನಲ್ಲಿ ಯಾವಾಗಲೂ ತನ್ನ ಬಗ್ಗೆ ಮತ್ತು ತನ್ನ ಗಂಡನ ಬಗ್ಗೆ ಚಿಂತೆ ಮಾಡುವ ಸ್ವಾರ್ಥಿ ಶೈಲೂ ಎಲ್ಲರಿಗೂ ಚಿರಪರಿಚಿತ. 
 

29

ನೀನಾದೆ ನಾ ಸೀರಿಯಲ್ ನಲ್ಲಿ (Neenade Naa serial) ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಇವರು. ಮನೆಯ ಬಗ್ಗೆ ಕೇರ್ ಇಲ್ಲದೇ, ತನ್ನ ಬಗ್ಗೆ ಮಾತ್ರ ಚಿಂತಿಸೋ ಈ ಸ್ವಾರ್ಥಿ, ವೇದಾಳ ಪಾಲಿಗಂತೂ ವಿಲನ್ ಅಂದ್ರೆ ಸುಳ್ಳಲ್ಲ. ಒಂದಲ್ಲ ಒಂದು ರೀತಿಯಲ್ಲಿ ವೇದಾಳಿಗೆ ಕಷ್ಟ ಕೊಡಲು ರೆಡಿಯಾಗಿರುವ ಶೈಲೂ ಪಾತ್ರಧಾರಿಯ ನಿಜ ಹೆಸರು ಭವ್ಯಾ ಪೂಜಾರಿ. 
 

39

ಮೂಲತಃ ಪುತ್ತೂರಿನ ಬೆಳ್ಳಾರೆಯವರಾದ ಭವ್ಯಾ ಪೂಜಾರಿ, ನಟನಾ ಲೋಕದ ಕನಸು ಕಾಣುತ್ತಲೇ ಬೆಂಗಳೂರಿಗೆ ಕಾಲಿಟ್ಟು ತೆಲುಗು, ಕನ್ನಡ ಸೇರಿ ಹಲವು ಸೀರಿಯಲ್‌ಗಳಲ್ಲಿ ನಟಿಸುತ್ತಾ, ಇದೀಗ ನೀನಾದೆ ನಾ ಸೀರಿಯಲ್‌ನಲ್ಲಿ ತನಗಾಗಿ ಮಾತ್ರ ಚಿಂತಿಸುವ ಹೊಟ್ಟೆಕಿಚ್ಚಿನ ಸೊಸೆಯಾಗಿ ನಟಿಸುತ್ತಿದ್ದಾರೆ.
 

49

ಸೀರಿಯಲ್ ನೋಡಿದ್ರೆ, ಶೈಲೂಗೆ ನಾಯಕಿ ವೇದಾಳನ್ನು ಕಂಡ್ರೆನೆ ಆಗಲ್ಲ, ಅವಕಾಶ ಸಿಕ್ಕಿದ್ರೆ ಸಾಕು, ಏನಾದರೊಂದು ವೇದಾ ವಿರುದ್ಧ ಪಿತೂರಿ ಮಾಡುವ ಈಕೆ ನಿಜ ಜೀವನದಲ್ಲಿ ಮಾತ್ರ ವೇದಾ ಅಂದ್ರೆ ಖುಷಿಯ (Khushi Shivu) ಬೆಸ್ಟ್ ಫ್ರೆಂಡ್. ಖುಷಿ ಮತ್ತು ಭವ್ಯಾ ಫ್ರೀ ಟೈಮ್ ಸಿಕ್ಕಾಗ ಸಿಕ್ಕಾಪಟ್ಟೆ ಸುತ್ತಾಡುತ್ತಾರೆ. 
 

59

ಭವ್ಯಾ ಮತ್ತು ಖುಷಿ ಜೊತೆಯಾಗಿ ಮಡಿಕೇರಿ, ಮತ್ತಿತರೆಡೆ ಪ್ರವಾಸ ಮಾಡಿದ್ದಾರೆ. ಅಲ್ಲದೇ ಜೊತೆಯಾಗಿ ಮಾಲ್ ಸುತ್ತಾಡಿ, ಗೇಮ್ಸ್ ಕೂಡ ಆಡಿದ್ದಾರೆ. ಅಷ್ಟೇ ಅಲ್ಲ, ಒಂದೇ ರೀತಿಯ ಟ್ಯಾಟೂ ಕೂಡ ಹಾಕಿಸಿದ್ದಾರೆ. ಇನ್ನು ಇವರ ಇನ್ಸ್ಟಾಗ್ರಾಂ ಪೇಜ್ ನೋಡಿದ್ರೆ ಇಬ್ಬರು ಜೊತೆಯಾಗಿ ಮಾಡಿರೋ ರೀಲ್ಸ್ ಸಾಲುಗಳನ್ನೆ ಕಾಣಬಹುದು. 
 

69

ಇನ್ನು ಭವ್ಯಾ ಕರಿಯರ್ ವಿಷ್ಯಕ್ಕೆ ಬಂದ್ರೆ ನೀನಾದೆ ನಾ ಇವರ ಮೊದಲ ಸೀರಿಯಲ್ ಅಲ್ಲ, ಈಗಾಗಲೇ ಇಂತಿ ನಿನ್ನ ಪ್ರೀತಿಯ, ಪತ್ತೆಧಾರಿ ಪ್ರತಿಭಾ, ಕಮಲಿ, ಸುಂದರಿ, ಮಂಗಳ ಗೌರಿ ಮದುವೆ, ನಾಗಿಣಿ 2 ಮೊದಲಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗಿನ ಅನು ಆನೆ ನೇನು ಎನ್ನುವ ಸೀರಿಯಲ್‌ನಲ್ಲೂ ನಟಿಸಿದ್ದಾರೆ. 

79

ಸಿನಿಮಾದಲ್ಲೂ ನಟಿಸಿರುವ ಭವ್ಯಾ ಪೂಜಾರಿ, ಜಗ್ಗೇಶ್ ಅಭಿನಯದ ತೋತಾಪುರಿ (Totapuri) ಚಿತ್ರದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸಿನಿಮಾ, ಸೀರಿಯಲ್ ಎಲ್ಲಾದರೂ ಸರಿ ಉತ್ತಮ ಅವಕಾಶ ಸಿಕ್ಕರೆ ನಟಿಸುವ ಹಂಬಲ ಇದೆ ಭವ್ಯಾ ಅವರಿಗೆ. 
 

89

ಭವ್ಯಾ ಪೂಜಾರಿ (Bhavya Poojary) ಭರತ ನಾಟ್ಯ ಮತ್ತು ಯಕ್ಷಗಾನ ಕಲಾವಿದೆ. ಇವರು ಬಾಲ್ಯದಿಂದಲೇ ಇವುಗಳನ್ನು ಕಲಿತುಕೊಂಡು ಬಂದಿದ್ದಾರೆ. ಅಲ್ಲದೇ ಹಲವಾರು ಸ್ಥಳಗಳಲ್ಲಿ ಭರತನಾಟ್ಯ ಪ್ರದರ್ಶನ ಕೂಡ ನೀಡಿದ್ದಾರೆ. ಪ್ರದರ್ಶನ ಕಲೆಯನ್ನು ಸಹ 2 ವರ್ಷ ಕಲಿತಿದ್ದಾರೆ. ಜೊತೆಗೆ ದೂರ ಶಿಕ್ಷಣದಲ್ಲಿ ಬಿಎ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದ್ದಾರೆ ಭವ್ಯ. 
 

99

ಎಲ್ಲಾ ನಟಿಯರಿಗೆ ತಾನು ಸೀರಿಯಲ್ ನಾಯಕಿಯಾಗಬೇಕೆಂಬ ಕನಸು ಇದ್ದರೆ, ಇವರಿಗೆ ತಾನು ವಿಲನ್ ಆಗಿ ಮಿಂಚಬೇಕು ಅನ್ನೋ ಆಸೆ ಮೊದಲಿಂದಲೂ ಇತ್ತಂತೆ. ಅದೇ ರೀತಿ ಇವರಿಗೆ ಸಿಕ್ಕ ಪಾತ್ರಗಳು ಸಹ ನೆಗೆಟಿವ್ ಶೇಡ್ ನಲ್ಲಿ (negative shades) ಇದ್ದೂದರಿಂದ ತುಂಬಾನೆ ಸಂತೋಷಪಡ್ತಾರೆ ನಟಿ. ಮುಂದೊಂದು ದಿನ ತಾನು ಬೆಸ್ಟ್ ವಿಲನ್ ಎನಿಸಿಕೊಳ್ಳುತ್ತೇನೆ ಎನ್ನುವ ಹಂಬಲ ಇವರದ್ದು. 
 

Read more Photos on
click me!

Recommended Stories