ಕನ್ನಡ ನಮ್ಮೆಲ್ಲರ ತಾಯ್ನುಡಿ ಹಾಗೂ ಕರ್ನಾಟಕದಾಂತ್ಯ ಕನ್ನಡ ಭಾಷೆಯಲ್ಲಿ ವಿವಿಧತೆ ಮತ್ತು ವಿಭಿನ್ನ ಸೊಗಡುಗಳಿವೆ.

ಅವುಗಳಲ್ಲಿ ಒಂದು ಕುಂದಾಪ್ರ ಕನ್ನಡ, ಟಿವಿ ಮಾಧ್ಯಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕುಂದಾಪ್ರ ಕನ್ನಡವನ್ನು ಬಳಸಿರುವ ಸತ್ಯಘಟನೆ ಆಧಾರಿತ ಕಡಲೂರ ಕನಸುಗಳು ವಿಶೇಷ ಸಂಚಿಕೆ ಫೆಬ್ರವರಿ 22ರಂದು ವೀಕ್ಷಕರ ಮುಂದೆ ಬರಲಿದೆ.

ಸಾಗರ,ಕಡಲು,ವಾರಿಧಿ ಎಂದೆಲ್ಲ ಕರೆಯುವ ಭೂಮಿಯನ್ನ ಆವರಿಸಿಕೊಂಡಿರುವ ಅಗಾಧ ಜೀವರಾಶಿಗೆ ಆಶ್ರಯ ನೀಡಿ ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರುವ, ಈ ಸಮುದ್ರದ ಜೊತೆ ಮನುಷ್ಯನ ಸಂಬಂಧ ಅತ್ಯಂತ ವಿಶಿಷ್ಟವಾದದ್ದು,ವಿಚಿತ್ರವಾದದ್ದು,ವಿಶೇಷವಾದದ್ದು.

ಕಡಲಿನ ಆಕರ್ಷಣೆ ಯಾವತ್ತಿಗೂ ಮನುಷ್ಯನನ್ನು ಬಿಟ್ಟಿಲ್ಲ, ಮನುಷ್ಯನನ್ನ ಹಲವಾರು ಸಾಹಸಗಳಿಗೆ ಪ್ರಚೋದಿಸಿದ್ದೆ ಈ ಸಮುದ್ರ ಈ ಸಾಗರ ಅನ್ನೋ ಮಹಾಜಲ, ಇನ್ನೂ ಈ ಕಡಲಿನ ಮಕ್ಕಳೇ ಆದ ಮೀನುಗಾರರಿಗೂ ಕಡಲಿಗೂ ಇರೋ ಸಂಬಂಧವೇ ವಿಶಿಷ್ಟ.

ಈ ಕಡಲು ಇವರಿಗಾಗಿ ಇದೆಯೋ, ಇವರು ಕಡಲಿಗಾಗಿ ಇದ್ದಾರೋ ಹೇಳುವುದು ಕಷ್ಟ, ಇವರಿಬ್ಬರ ಸಂಬಂಧ ಒಂದು ರೀತಿ ಪ್ರೀತಿ ಸಂಘರ್ಷದ ಕಥೆ ಎನ್ನಬಹುದು, ಕಡಲು ಇವರಿಗೆ ಜೀವನವೂ ಹೌದು,ಕೆಲವೊಮ್ಮೆ ಮೈಮರೆತರೆ ಕಡಲು ಇವರ ಪಾಲಿಗೆ ಮೃತ್ಯುವೂ ಹೌದು.

ನಾಲ್ಕು ಮಕ್ಕಳ ತಂದೆ ನಾರಾಯಣ ಕಡಲನ್ನೇ ನಂಬಿ ಜೀವನ ನೆಡೆಸುತ್ತಿದ್ದವನು,ಆದರೆ ಅದೇ ಕಡಲು ಅವನನ್ನ ತನ್ನ ಒಡಲೊಳಗೆ ಸೆಳೆದುಕೊಂಡು ಅವನ ನಾಲ್ಕು ಮಕ್ಕಳನ್ನ ಅನಾಥರನ್ನಾಗಿ ಮಾಡಿದೆ.

ಆದರೆ ಮನುಷ್ಯನ ಬದುಕಿಗಾಗಿನ ಹೋರಾಟ ಇದೆಯಲ್ಲ ಅದು ಕಡಲಿಗಿಂತ ದೊಡ್ಡದು, ನಾರಾಯಣನ ಮಗಳು ರುಕ್ಕೂ, ತನ್ನ ತಮ್ಮ ತಂಗಿಯರಿಗೆ ಆಸರೆಯಾಗಿ ನಿಂತು ಅವರನ್ನು ದಡ ಸೇರಿಸಲು ಹೋರಾಡುತ್ತಾಳೆ.

ಈ ಹೋರಾಟದಲ್ಲಿ ಈ ನಾಲ್ವರು ಮಕ್ಕಳ ಏಳು ಬೀಳಿನ ಕಥೆಯೇ ಕಡಲೂರ ಕನಸುಗಳು.

ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದಲ್ಲಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ,ಸಂಘರ್ಷ,ಹೋರಾಟ ಹಾಗೂ ಬದುಕಿನ ಕಥೆಯನ್ನು ಹೇಳುತ್ತದೆ.

ಕಡಲನೀರು ಉಪ್ಪಾಗಿರುವುದು ಕಡಲತೀರದ ಬದುಕಿನ ಕಣ್ಣೀರು ಸೇರಿರುವುದರಿಂದಲೇ ಅಲ್ಲವೇ ,ಅಲ್ಲಿ ನೂರಾರು ಹೋರಾಟ ಹಾಗೂ ಸಂಘರ್ಷದ ಕಥೆಗಳಿವೆ,ಅಂತಹ ಅಪರೂಪದ ಕಥೆಯನ್ನು ಹೆಕ್ಕಿ ಕಲರ್ಸ್ ಕನ್ನಡ ತಂಡ ವೀಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.

ಈ ಸಂಚಿಕೆಯ ನಿರ್ದೇಶಕರು ನವೀನ್ ಸೋಮನಹಳ್ಳಿ, ಕಥೆ ಡಾವೆಂಕಿ,ಜಗದೀಶ್ ಭಾವೆ ಚಿತ್ರಕಥೆ ಸಂಭಾಷಣೆ ಅನಂತ್ ಶಾಂದ್ರೇಯ, ಛಾಯಾಗ್ರಹಣ ರವಿ ಕನಕಪುರ ,ನಿರ್ಮಾಣ ರವೀಣ್ ಕುಮಾರ್, ಪಾತ್ರವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.

ವಿಶ್ವ ತಾಯ್ನುಡಿ ದಿನ ಪ್ರಯುಕ್ತ, ಕುಂದಾಪ್ರ ಕನ್ನಡದಲ್ಲಿ ಶಾಂತಂ ಪಾಪಂ

ಈ ವಾರದ ಶಾಂತಂ ಪಾಪಂ ಮಿಸ್ ಮಾಡಿಕೊಳ್ಳೇಬೇಡಿ
ಈ ವಾರದ ಶಾಂತಂ ಪಾಪಂ ಮಿಸ್ ಮಾಡಿಕೊಳ್ಳೇಬೇಡಿ