ತಂದೆ ಆಟೋ ಓಡಿಸುತ್ತಿದ್ದ ವರುಣ್ ಆರಾಧ್ಯ; 'ಬೃಂದಾವನ' ಸೀರಿಯಲ್ ಸಿಗೋಕೆ ಇದೇ ಕಾರಣ?

First Published | Nov 25, 2023, 5:22 PM IST

ರೀಲ್ಸ್‌ ಮಾಡಿ ಪ್ರಮುಖ ಪಾತ್ರ ಗಿಟ್ಟಿಸಿಕೊಂಡ ವರುಣ್ ಆರಾಧ್ಯ. ಆಟೋ ಓಡಿಸುತ್ತಿದ್ದ ವ್ಯಕ್ತಿ ಈಗ ಬಿಗ್ ಸ್ಟಾರ್...

ಬೃಂದಾವನ ಧಾರಾವಾಹಿಯಲ್ಲಿ ಆಕಾಶ್ ಪಾತ್ರದಲ್ಲಿ ಮಿಂಚುತ್ತಿರುವ ಟಿಕ್ ಟಾಕ್,ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ಏನು ಓದಿದ್ದಾರೆ ಗೊತ್ತಾ?

ಓದಿನಲ್ಲಿ ಆಸಕ್ತಿಯೇನೂ ಇರಲಿಲ್ಲ ಎಂದು ವರುಣ್ ಆಗಾಗ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳುತ್ತಿದ್ದರು. ಅಲ್ಲದೆ ತಂದೆ ಕಳೆದುಕೊಂಡ ಮೇಲೆ ಮನೆ ನೋಡಿಕೊಳ್ಳಲು ಶುರು ಮಾಡಿದ್ದರು.

Tap to resize

ನಟನಾಗಬೇಕು ಎಂದು ಸಾಕಷ್ಟು ರೀಲ್ಸ್- ಯುಟ್ಯೂಬ್ ವಿಡಿಯೋಗಳ್ನು ಮಾಡುತ್ತಿದ್ದರು. ಅಲ್ಲದೆ ವರ್ಕೌಟ್ ಡಯಟ್‌ ಅಂತ ಫಿಟ್ನೆಸ್‌ ಕಾಪಾಡಿಕೊಳ್ಳುತ್ತಿದ್ದರು. 

ಕ್ಯಾಮೆರಾ ಎದುರಿಸುವಾಗಲೂ ಕೊಂಚ ನಡುಕ ಉಂಟಾಗಿತ್ತಂದೆ. ನಟನಾಗಬೇಕು ಅನ್ನೋ ಆಸೆ ಆ ನಡುಕ ಮತ್ತು ಭಯವನ್ನು ದೂರ ಮಾಡಿದೆ ಎನ್ನುತ್ತಾರೆ.

ಕೊರೋನಾ ಸಮಯದಲ್ಲಿ ವರುಣ್ ಆರಾಧ್ಯ ತಂದೆಯನ್ನು ಕಳೆದುಕೊಂಡ ಮೇಲೆ ವರುಣ್ ತಂದೆಯ ಪ್ರೀತಿಯ ಆಟೋ ಓಡಿಸಲು ಶುರು ಮಾಡಿದ್ದರು.

ಆಟೋ ಓಡಿಸಿಕೊಂಡು, ಕೆಲವೊಮ್ಮೆ ಆಟೋ ಬಾಡಿಗೆಗೆ ಬಿಟ್ಟು ಮತ್ತು ಆನ್‌ಲೈನ್‌ನಲ್ಲಿ ಪ್ರಾಡೆಕ್ಟ್ ಪ್ರಮೋಷ್ ಮಾಡಿಕೊಂಡು ಮನೆ ನಡೆಸುತ್ತಿದ್ದರು.

ವರ್ಷ ಕಾವೇರಿ ಜೊತೆ ಬ್ರೇಕಪ್ ಆದ್ಮೇಲೆ ವರುಣ್ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದರೆ ಸೀರಿಯಲ್‌ನಲ್ಲಿ ನೋಡಿ ಜನರು ಶಾಕ್ ಆಗಿದ್ದಾರೆ.  

Latest Videos

click me!