ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದುಕೊಂಡೇ ಫಿನಾಲೆ ವಾರ ಮುಟ್ಟಿದ ವರ್ತೂರ್ ಸಂತೋಷ್ 5ನೇ ಸ್ಥಾನ ಪಡೆದುಕೊಂಡು ಹೊರ ಬಂದಿದ್ದಾರೆ. ಹಲವು ದಿನಗಳ ನಂತರ ಜನರ ಜೊತೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಾನು ಏನೂ ಡಿಮ್ಯಾಂಡ್ ಮಾಡಿಲ್ಲ, ಕೊಟ್ಟಿದ್ದು ತೆಗೆದುಕೊಂಡಿರುವೆ. ಕೊಟ್ಟಿದ್ದು ತಿಂದುಕೊಂಡು ಬಂದಿದ್ದೀನಿ. ಯಾವ ನಾಟಕ ಮಾಡದೆ ನಾನು ನಾನಾಗಿದ್ದು ಬಂದಿದ್ದೀನಿ.
ಈ ಸಲ ನಾನು ರೇಸ್ ಮೂಲಕ ಜನರಿಗೆ ಉತ್ತರ ಕೊಡಬೇಕು. ಮಲಗಿರುವ ಸೊಳ್ಳೆಗಳು ಗುಯ್ಯಾ ಅಂತ ಸೌಂಡ್ ಮಾಡುತ್ತದೆ ಹಾಗೆ ಎಲ್ಲರಿಗೂ ನಾನು ರೇಸ್ ಮೂಲಕವೇ ಉತ್ತರ ಕೊಡಬೇಕು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ವರ್ತೂರ್ ಜನರ ಜೊತೆ ಮಾತನಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಎಲ್ಲರೂ ಕೈ ಜೋಡಿಸಬೇಕು. ಒಬ್ಬರೊಬ್ಬರು ಒಂದೊಂದಕ್ಕೆ ಒಪ್ಪಿಕೊಳ್ಳಿ. ಒಂದು ರೂಪಾಯಿ ದುಡ್ಡು ನನ್ನ ಕೈಗೆ ಕೊಡಬೇಡಿ. ಹಣ ಇಲ್ಲದೆ ಬದುಕಬಹುದು ಎಂದು ಬಿಗ್ ಬಾಸ್ ಕಲಿಸಿದ್ದಾರೆ.
ಒಂದು ರೂಪಾಯಿ ತೆಗೆದುಕೊಳ್ಳದೆ ಬಿಗ್ ಬಾಸ್ ರೇಸ್ ಮಾಡಿ ತೋರಿಸುತ್ತೀನಿ ಎಂದು ವರ್ತೂರ್ ಸಂತೋಷ್ ತೊಡೆ ತಟ್ಟಿ ಹೇಳುತ್ತಾರೆ. ಎಲ್ಲರಿಗೂ ಸ್ವಾಗತ. ನನ್ನನ್ನು ಭೇಟಿ ಮಾಡಲು ಬರುವಾಗ ಫೋನ್ ಮಾಡಿಕೊಂಡು ಬನ್ನಿ.
ಬಿಗ್ ಬಾಸ್ ಒಂದೊಳ್ಳೆ ವೇದಿಕೆ ಕೊಟ್ಟಿದೆ ಹೆಸರು ಮಾಡಿ ಜನರನ್ನು ಸಂಪಾದನೆ ಮಾಡಿದ್ದೀನಿ. ಒಳಗೆ ಅಣ್ಣ ಅಕ್ಕ ಅಂತ ಹೇಳಿ ಆಮೇಲೆ ಹೊರ ಬಂದು ಕೆಟ್ಟದಾಗಿ ಮಾತನಾಡಬಾರದು. ಅಲ್ಲಿ ಏನು ಮಾತನಾಡಿದೆ ಅದೇ ಇಲ್ಲಿ ಮಾತನಾಡಿದರೆ ಮಾತ್ರ ನನ್ನ ವ್ಯಕ್ತಿತ್ವ ಉಳಿಯುವುದು.
ನಾನು ಕಳ್ಳತನ ಮಾಡಿದ್ದಿನಾ? ಮೋಸ ಮಾಡಿದ್ದೀನಾ? ಯಾರಿಂದಾದರೂ ಒಂದು ರೂಪಾಯಿ ಪಡೆದು ಜೀವನ ಮಾಡಿದ್ದೀನಿ ಅಂತ ಹೇಳಲಿ ಆಗ ಉತ್ತರ ಕೊಡುವೆ. ಮತ್ತೊಬ್ಬರ ಹಣ ಒಡವೆ ಹೊಡೆದು ನಾನು ತಿಂದು ಬದುಕಿಲ್ಲ.