ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

First Published | Jan 30, 2024, 3:13 PM IST

 ತುಕಾಲಿ ಸಂತೋಷ್‌ ರೆಡಿನೇ ಆಗಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದ ನೆಟ್ಟಿಗರಿಗೆ ಸ್ಪಷ್ಟನೆ ಕೊಟ್ಟ ಹಾಸ್ಯ ನಟ. ವರ್ತೂರ್, ವಿನಯ್ ಹಾಗೂ ಕಾರ್ತಿಕ್ ಸಹಾಯ ಮರೆಯುವುದಿಲ್ಲ..... 
 

ಹಾಸ್ಯ ಕಲಾವಿದನಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ತುಕಾಲಿ ಸಂತೋಷ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. 6ನೇ ಸ್ಥಾನ ಪಡೆದು ಎಲಿಮಿನೇಟ್ ಆದರು. 

ಸದಾ ಒಂದೇ ಚಡ್ಡಿ, ಟೀ-ಶರ್ಟ್‌ ಮತ್ತು ಒಂದೇ ಪ್ಯಾಂಟ್‌ನಲ್ಲಿರುವ ತುಕಾಲಿ ಸಂತೋಷ್‌ ರೆಡಿಯಾಗುವುದಿಲ್ಲ ಎಂದು ನೆಟ್ಟಿಗರು ಹಾಸ್ಯ ಮಾಡುತ್ತಿದ್ದರು. ಅಲ್ಲದೆ ಒಮ್ಮೆ ರೆಡಿಯಾದರೂ ಕಿಚ್ಚ ಸುದೀಪ್ ಮೆಚ್ಚುತ್ತಿದ್ದರು. 

Tap to resize

'ನನ್ನ ಹೆಂಡತಿ ಬಟ್ಟೆ ಕಳುಹಿಸಬೇಕು ಅಂದ್ರೆ 220 ಕಿಮೀ. ನಿಂದ ಬರಬೇಕು. ಪ್ರತಿವಾರ ಎಲ್ಲಾ ಸ್ಪರ್ಧಿಗಳ ಬಗ್ಗೆ ಬರುತ್ತಿತ್ತು ಆಗ ನಾನು ಸೋಫಾ ಮೇಲೆ ಕುಳಿತುಕೊಂಡು ನೋಡುತ್ತಿದ್ದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ತುಕಾಲಿ ಮಾತನಾಡಿದ್ದಾರೆ. 

ಆಗ ಎಲ್ಲರು ಖುಷಿ ಖುಷಿಯಾಗಿ ವೀಕೆಂಡ್ ಬಟ್ಟೆ ಎಂದು ಕುಣಿಯುತ್ತಿದ್ದರು ಆದರೆ ನನ್ನ ಬಟ್ಟೆ ಬರುತ್ತಿರಲಿಲ್ಲ. ಎಂದೂ ಬೇಸರ ಮಾಡಿಕೊಂಡು ಕ್ಯಾಮೆರಾ ಮುಂದೆ ನಾನು ಬಟ್ಟೆ ಬೇಕು ಎಂದು ಹೇಳುತ್ತಿರಲಿಲ್ಲ'

ದೂರದಿಂದ ಬಂದು ಬಟ್ಟೆ ಕೊಡಬೇಕು ಕಷ್ಟ ಕೊಡುವುದು ಬೇಡ ಎಂದು ಸುಮ್ಮನೆ ಇರುತ್ತಿದ್ದೆ. ಒಮ್ಮೆ ಬಟ್ಟೆ ಸ್ವಲ್ಪ ಟೈಟ್ ಆಗಿತ್ತು ಅದಿಕ್ಕೆ ಲೂಸ್‌ ಕಳುಹಿಸಿ ಎಂದು ಸುದೀಪ್ ಅಣ್ಣನ ಮುಂದೆ ಹೇಳಿದ್ದೆ.

ನನ್ನ ಹೆಂಡತಿ ತುಂಬಾ ಮುಗ್ಧೆ ಪ್ರಪಂಚನೇ ಸರಿಯಾಗಿ ಗೊತ್ತಿಲ್ಲ. ಆಕೆಗೆ ಹೋಗಿ ನಾನು ಹೊಸ ಹೊಸ ಬಟ್ಟೆ ಕಳುಹಿಸಿಕೊಡು ಅಂದ್ರೆ ಚೆನ್ನಾಗಿರುವುದಿಲ್ಲ. ಆಕೆಯನ್ನು ನಾನು ಅರ್ಥ ಮಾಡಿಕೊಳ್ಳಬೇಕು.

ಬರ್ತಾನೂ ನಾನು ಚಡ್ಡಿ ಟೀ-ಶರ್ಟ್‌ ಹಾಕಿಕೊಂಡಿದ್ದೆ, ಯಾಕೆ ಜನರು ನನ್ನನ್ನು ಪ್ರೀತಿಸುತ್ತಿಲ್ವಾ? ನನ್ನ ಹುಟ್ಟುಹಬ್ಬ ದಿನ ಕಾರ್ತಿಕ್ ಹೊಸ ಬಟ್ಟೆ ಕೊಟ್ಟು ನೀನು ಹಾಕಿಕೊಳ್ಳಬೇಕು ಎಂದು ಹಠ ಮಾಡಿದೆ

ವರ್ತೂರ್‌ಗೂ ಎರಡು ಮೂರು ಬಟ್ಟೆ ಬರುತ್ತಿತ್ತು ಆದರಲ್ಲೂ ನನಗೆ ಕೊಡುತ್ತಿದ್ದರು. ನನಗೆ ಸರಿಯಾಗಿ ಚಪ್ಪಲಿ ಇರಲಿಲ್ಲ ಅಂತ ಹಾಕಿಕೊಳ್ಳಿ ಎಂದ್ರಿ. ಅಂದಿನಿಂದ ಈವರೆಗೂ ಅದೇ ಚಪ್ಪಲಿ ಹಾಕಿಕೊಂಡಿದ್ದೆ.

Latest Videos

click me!