777 ಚಾರ್ಲಿ ಚಿತ್ರದ ಮೂಲಕ ಕನ್ನಡಿಗರ ಕ್ರಶ್ ಆದ ಸಂಗೀತಾ ಶೃಂಗೇರಿ ಈ ಸಲ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹಲವಾರು ವಿಚಾರಗಳಿಂದ ಸಂಗೀತಾ ಸದಾ ಸುದ್ದಿಯಲ್ಲಿರುತ್ತಾರೆ. ಫ್ರೆಂಡ್ಸ್‌ಶಿಪ್, ಕಾಂಪಿಟೇಷನ್, ವಿಲನ್, ಬಳೆ ಹೀಗೆ ಸಾಕಷ್ಟು...
ಸಖತ್ ನೇರವಾಗಿ ಮಾತನಾಡುವ ಸಂಗೀತಾ ಡ್ರೆಸ್ಸಿಂಗ್ ವಿಚಾರ ನೆಟ್ಟಿಗರಿಗೆ ಕೊಂಚ ಬೇಸರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಟಿವಿಯಲ್ಲಿ ತಮ್ಮನ್ನು ತಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ಳುತ್ತೀವಿ ಅನ್ನೋದು ಮುಖ್ಯವಾಗುತ್ತದೆ. ಸಂಗೀತಾ ಪುಟ್ಟ ಹುಡುಗಿ ರೀತಿ ರೆಡಿಯಾಗುತ್ತಾರೆ.
ಕಳೆದ ವೀಕೆಂಡ್‌ನಲ್ಲಿ ಸಂಗೀತಾ ಕೆಂಪು ಬಣ್ಣದ ಔಟ್‌ಫಿಟ್ ಧರಿಸಿದ್ದರು. ಟಾಪ್‌ನಲ್ಲಿ ಕೆಂಪು ಬಣ್ಣದ ಹೂ ಮ್ಯಾಚ್ ಮಾಡಲು ಅದೇ ಹೂವಿನ ರೀತಿಯಲ್ಲಿರುವ ಹೇರ್ ಕ್ಲಿಪ್ ಧರಿಸಿದ್ದರು.
ಅಯ್ಯಯ್ಯೋ...ಸ್ಕೂಲ್ ಡೇ ಕಾರ್ಯಕ್ರಮಗಳಿಗೆ ನಾವು ಎಷ್ಟು ಚೆಂದ ರೆಡಿಯಾಗಬೇಕು ಅಂತ ಆಸೆ ಪಡುತ್ತೀವಿ ಆದರೆ ಮೇಕಪ್ ಅಥವಾ ಟೀಚರ್ ನಮ್ಮನ್ನು ಇದೇ ರೀತಿ ರೆಡಿ ಮಾಡುವುದು ಎಂದು ಕಾಲೆಳೆದಿದ್ದಾರೆ.