ಬಿಗ್ ಬಾಸ್ ಮನೆಯಲ್ಲಿ ಹಾರ್ಮೋನ್ ಇಂಜೆಕ್ಷನ್; ಮಂಗಳಮುಖಿಯರ ಪರಿಸ್ಥಿತಿ ಬಿಚ್ಚಿಟ್ಟ ನೀತು

First Published | Nov 29, 2023, 12:26 PM IST

ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಹಾರ್ಮೋನ್ಸ್‌ ಕಾರಣ ಎಂದ ನೀತು. ಅದೆಷ್ಟೋ ಮಂದಿಗೆ ಇದು ಗೊತ್ತೇ ಇಲ್ಲ ನೋಡಿ...

ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಮಂಗಳಮುಖಿ ನೀತು ವನಜಾಕ್ಷಿ ಆಗಾಗ ಆರಂಭದಲ್ಲಿ ಗೇಮ್ ಸ್ಟಾರ್ಟ್ ಮಾಡಲು ಸಮಯ ತೆಗೆದುಕೊಂಡರು ಎಂದು ಇನ್ನಿತ್ತರ ಸ್ಪರ್ಧಿಗಳು ಹೇಳುತ್ತಿರುವುದನ್ನು ಕೇಳಿದ್ದೀವಿ. 

ಯಾಕೆ ನೀತು ಆರಂಭದಲ್ಲಿ ಸ್ಲೋ ಆದರು ಎಂದು ಪ್ರಶ್ನೆ ಮಾಡಿದಾಗ. ತಾವು ತೆಗೆದುಕೊಳ್ಳುತ್ತಿದ್ದ ಹಾರ್ಮೋನ್ ಇಂಜೆಕ್ಷನ್‌ಗಳ ಬಗ್ಗೆ ವಿವರಿಸಿದ್ದಾರೆ. ಮಂಗಳಮುಖಿಯರ ಪರಿಸ್ಥಿತಿ ಅರ್ಥ ಮಾಡಿಸಿದ್ದಾರೆ. ಜನರಿಗೆ ಈಗ ಅನುಪಂಕ ಮೂಡುತ್ತಿದೆ.  

Tap to resize

 'ನನ್ನ ದೇಹದಲ್ಲಿ ಆಗುವ ಬದಲಾವಣೆಗಳಿಂದ ಆಗಾಗ ಹಾರ್ಮೋನ್ಸ್‌ ತೆಗೆದುಕೊಳ್ಳಬೇಕು.  ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮುನ್ನ ನಾನು ಹಾರ್ಮೋನ್ ತೆಗೆದುಕೊಂಡೆ. ಹಾಮೋನ್‌ ಇಂಜೆಕ್ಷನ್ ತೆಗೆದುಕೊಂಡಿಲ್ಲ ಅಂದ್ರೆ ಎಲ್ಲರಂತೆ ಕಾಮ್ ಮತ್ತು ನಾರ್ಮಲ್ ಅಗಿ ಇರುತ್ತೀವಿ. 

ಮೊದಲು ಎರಡು ವಾರ ಆ ಇಂಜೆಕ್ಷನ್‌ನಲ್ಲಿ ಬದಲಾವಣೆಗಳು ಇತ್ತು ಅದನ್ನು ಸರಿಯಾಗಿ ಯಾವುದರ ಬಗ್ಗೆ ಯೋಚನೆ ಮಾಡಲು ಆಗುತ್ತಿರಲಿಲ್ಲ. ಎಲ್ಲಾ ಮಂಗಳ ಮುಖಿಯರು ಎಸ್‌ಆರ್‌ಎಸ್‌ ಅನ್ನೋ ಪ್ರೊಸೀಜರ್ ಫಾಲೋ ಮಾಡುತ್ತಾರೆ. 

 ಸರ್ಜರಿ ಮಾಡಿಸಿಕೊಂಡಿದ್ದರೂ ಈ ಇಂಜೆಕ್ಷನ್ ತೆಗೆದುಕೊಳ್ಳಬೇಕು ಇಲ್ಲವಾದರೆ ಮತ್ತೆ ದೇಹದಲ್ಲಿ ಮತ್ತೆ ಬದಲಾವಣೆಗಳು ಆಗುತ್ತದೆ. ಗಂಡಿಂದ ಹೆಣ್ಣು ಆಗಬೇಕು ಅಂದ್ಮೇಲೆ ನಾವು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡು ಬದಲಾವಣೆ ಆಗಬೇಕು. 

ವೈದ್ಯರ ಸಲಹೆ ಮೇಲೆ ತೆಗೆದುಕೊಳ್ಳುವ ಕಾರಣ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೆಣ್ಣು ಮಕ್ಕಳಿಗೆ ಹೇಗೆ ತಿಂಗಳಿಗೆ ಒಮ್ಮೆ ಇರುತ್ತದೆ ಹಾಗೆ ನಮಗೂ ಆಗುತ್ತದೆ ನಾವು ಅದನ್ನು ಮ್ಯಾನೇಜ್ ಮಾಡುತ್ತೀವಿ. 

ಕೆಲವೊಮ್ಮೆ ಕೋರ್ಸ್ ರೀತಿ ಇರುತ್ತದೆ ಒಂದು ತಿಂಗಳು ತೆಗೆದುಕೊಂಡು ಆಮೇಲೆ ಸ್ಟಾಪ್ ಮಾಡುವುದು ಮತ್ತೆ ಬೇಡ ಅಂದ್ಮೇಲೆ ಸ್ಟಾಪ್ ಮಾಡುವುದು. ಬಿಗ್ ಬಾಸ್ ಪ್ರವೇಶ ಮಾಡುವ ಮುನ್ನವೇ ನಾನು ಇಂಜೆಕ್ಷನ್ ತೆಗೆದುಕೊಂಡಿದ್ದೆ ಹೀಗಾಗಿ ಕೊಂಚ ಗೊಂದಲದಲ್ಲಿ ಇದ್ದೆ.

ನಮ್ಮ ದೇಹ ಎಲ್ಲರಂತೆ ಇರುವುದಿಲ್ಲ ನನ್ನ ದೇಹನೇ ಬೇರೆ. ಆಗಾಗ ಹಾರ್ಮೋನ್‌ಗಾಗಿ ವಾರಕೊಮ್ಮೆ ಕನ್ಫೆಷನ್ ರೂಮ್‌ನಲ್ಲಿ ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದೆ. 

ಆ ದಿನಗಳಲ್ಲಿ ನಾನು ಕೊಂಚ ಬೇಸರದಲ್ಲಿ ಇರುತ್ತಿದ್ದೆ ಮೈಂಡ್‌ ಸರಿಯಾಗಿ ಇರುತ್ತಿರಲಿಲ್ಲ ಜಾಸ್ತಿ ಪ್ರೀತಿ ಬೇಕು ಅನಿಸುತ್ತಿತ್ತು. ಆ ಗೊಂದಲಗಳಿಗೆ ಇದೇ ಕಾರಣ. 

Latest Videos

click me!