ಕಿರುತೆರೆ ಲೋಕದಲ್ಲಿ ನಾಗಿಣಿ ಎಂದು ಗುರುತಿಸಿಕೊಂಡಿರುವ ನಮತ್ರಾ ಈಗ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ಫಿನಾಲೆ ವಾರದ ಟಾಸ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಕೆಲವೊಮ್ಮೆ ಸಿಂಪಲ್ ಕೆಲವೊಮ್ಮೆ ಹಾಟ್ ಕೆಲವೊಮ್ಮೆ ಮನೆ ಹುಡುಗಿ ರೀತಿ ಕಾಣಿಸಿಕೊಳ್ಳುವ ನಮತ್ರಾಳ ಕೂದಲ ಮೇಲೆ ವೀಕ್ಷಕರ ಗಮನ ಸೆಳೆದಿದೆ.
'ನನ್ನ ಹೇರ್‌ಸ್ಟೈಲ್ ಮತ್ತು ವಸ್ತ್ರ ವಿನ್ಯಾಸದ ವಿಶೇಷತೆಗೆ ಪ್ರಧಾನ ಕಾರಣವೇ ನಮ್ಮಮ್ಮ. ಯಾಕೆಂದರೆ ಧಾರಾವಾಹಿಯಲ್ಲಿ ನಾಗಿಣಿಯ ಉದ್ದ ಕೂದಲು ಏನು ನೋಡುತ್ತೀರೋ ಅವೆಲ್ಲವೂ ನನ್ನ ನಿಜವಾದ ಕೂದಲು' ಎಂದು ಈ ಹಿಂದೆ ಸಂದರ್ಶನಲ್ಲಿ ನಮ್ರತಾ ಹೇಳಿದ್ದರು.
'ಬಹಳ ಮಂದಿ ಪ್ರೇಕ್ಷಕರು ಈಗಲೂ ಅದನ್ನು ವಿಗ್ ಅಥವಾ ಎಕ್ಸ್ಟೆನ್ಷನ್ ಎಂದೇ ಅಂದುಕೊಂಡಿದ್ದಾರೆ. ಆದರೆ ಅದು ನಿಜವಾದ ಕೂದಲು ಎನ್ನುವ ಕಾರಣದಿಂದಲೇ ನನಗೆ ಇನ್ನೊಂದಷ್ಟು ಜನಪ್ರಿಯತೆ ಸಿಕ್ಕಿದೆ ಎಂದರೆ ತಪ್ಪಲ್ಲ.'
'ನಮ್ಮಮ್ಮನಿಗೆ ಉದ್ದ ಕೂದಲು ಅಂದರೆ ತುಂಬ ಇಷ್ಟ. ಮೊದಲಿನಿಂದಲೂ ಅವರೇ ನನ್ನ ತಲೆಗೂದಲನ್ನು ಮೇನ್ಟೇನ್ ಮಾಡಿದ್ದರು. ಆದರೆ ಈಗ ಶೂಟಿಂಗಲ್ಲಿ ಕಲರಿಂಗ್, ಇಸ್ತ್ರಿ ಹಾಕೋದು ಎಲ್ಲ ಮಾಡುವುದರಿಂದ ಸ್ವಲ್ಪ ಕಡಿಮೆಯಾಗಿದೆ '
'ಅದೇ ರೀತಿ ಬಟ್ಟೆಗಳ ಮೇಲಿನ ಕ್ರೇಜ್ ಕೂಡ ನನಗೆ ಅಮ್ಮನಿಂದಲೇ ಬಂತು. ಪ್ರೆಸೆನ್ಸ್ ಚೆನ್ನಾಗಿರಬೇಕು ಅಂದರೆ ನಾವು ಎಲ್ಲೇ ಹೋದರೂ ನಮ್ ಡ್ರೆಸ್ಸಿಂಗ್ ಸ್ಟಾಂಡೌಟ್ ಆಗಿ ಯುನಿಕ್ ಆಗಿರಬೇಕು ಎನ್ನುವುದು ನಮ್ಮಿಬ್ಬರ ಪಾಲಿಸಿ.'
'ಆದರೆ ಇಂದಿಗೂ ನನ್ನ ಡ್ರೆಸಸ್ ಎಲ್ಲವನ್ನೂ ಅಮ್ಮನೇ ಸೆಲೆಕ್ಟ್ ಮಾಡುತ್ತಾರೆ. ಅವರೇ ಡಿಸೈನ್ ಮಾಡುತ್ತಾರೆ. ಈಗ ನಾಗಿಣಿಗೂ ಅಷ್ಟೇ.ತುಂಬ ಮಂದಿ ನನ್ನಲ್ಲಿ ನಿಮ್ಮ ಡ್ರೆಸ್ ಡಿಸೈನರ್ ಯಾರು ಎಂದು ಕೇಳುತ್ತಿರುತ್ತಾರೆ'
'ಆ ಕ್ರೆಡಿಟ್ ಸಂಪೂರ್ಣವಾಗಿ ನಮ್ಮಮ್ಮನಿಗೆ ಸಲ್ಲುತ್ತದೆ. ಈ ದೃಶ್ಯಕ್ಕೆ ಹೀಗೇ ಇರಬೇಕು ಎನ್ನುವ ಕಲ್ಪನೆಯೊಂದಿಗೆ ಅವರೇ ಹೊಲಿಸಿ ರೆಡಿ ಮಾಡುತ್ತಾರೆ.' ಎಂದಿದ್ದಾರೆ ನಮ್ರತಾ.