ಒಂದು ಕಾಲದಲ್ಲಿ BB ಮನೆ ರೂಲ್ ಮಾಡಿದ ಲಾಸ್ಯ ನಾಗ್ ಈಗೇನು ಮಾಡ್ತಿದ್ದಾರೆ ಗೊತ್ತಾ?

First Published | Oct 28, 2019, 10:36 AM IST

ಬಿಗ್ ಬಾಸ್ ಸೀಸನ್ 5 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಲಾಸ್ಯ ನಾಗ್ ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಕಾಲ್ ಶೀಲ್ ಫ್ರಿ ಇಲ್ಲದಷ್ಟು ಬ್ಯುಸಿ ಇರುವ ಲಾಸ್ಯ ಈಗೇನು ಮಾಡುತ್ತಿದ್ದಾರೆ ಗೊತ್ತಾ? ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕಲರ್ಸ್ ಕನ್ನಡ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -5 ರಲ್ಲಿ ಲಾಸ್ಯ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.
ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
Tap to resize

ಲಾಸ್ಯ ನೃತ್ಯಗಾರ್ತಿ ಹಾಗೂ ನಟಿ
'ಅಸತೋಮ ಸದ್ಗಮಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
'ಪದ್ಮಾವತಿ' ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು.
'ಅಂಬಿ ನಿಂಗ್ ವಯಸ್ಸಾಯ್ತೋ' ಹಾಗೂ 'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ನಟಿಸಿದ್ದಾರೆ.
ಚಿಕ್ಕ ವಯಸ್ಸಿಂದ ಭರತನಾಟ್ಯ ಕಲಿತಿರುವ ಲಾಸ್ಯ ಈಗ ಬೆಲ್ಲಿ ಡ್ಯಾನ್ಸರ್ ಕೂಡ.
'ಮಿಡ್ ನೈಟ್ ಚಿಲ್ಡ್ರನ್' ಕಾದಂಬರಿಯ ಹಿಂದಿಯ ವೆಬ್‌ ಸೀರಿಸ್ ನಲ್ಲಿ ಲಾಸ್ಯ ನಾಗ್ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳಲ್ಲೂ ಲಾಸ್ಯ ನಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಾಸ್ಯ ಆ್ಯಕ್ಟಿವ್ ಇದ್ದಾರೆ. ತಮ್ಮ ಮುಂದಿನ ಚಿತ್ರ ಹಾಗೂ ಫೋಟೋ ಶೂಟ್ ನ್ನು ಶೇರ್ ಮಾಡಿಕೊಳ್ಳುತ್ತಾರೆ.

Latest Videos

click me!