ಪ್ರತಿ ಎಪಿಸೋಡಲ್ಲೂ ಹೊಸ ತಿರುವು ನೀಡುತ್ತಾ ಸಾಗುತ್ತಿದ್ದ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ (Bhagyalakshmi serial) ಇದೀಗ ಮಹಾ ತಿರುವು ಸಿಕ್ಕಿದೆ. ಮುಂಬೈಗೆ ಹೊರಟಿದ್ದ ತಾಂಡವ್ ಇನ್ನು ಮುಂದೆ ನನ್ನ ಆಟ ಶುರು ಎಂದು ಹೇಳುತ್ತಾ ತಿರುಗಿ ಮನೆಗೆ ಬಂದಿದ್ದು, ಸಂಪೂರ್ಣವಾಗಿ ಬದಲಾಗಿದ್ದಾರೆ.
ಸೊಸೆಯನ್ನ ಓದಿಸಬೇಕೆಂದು ಪಣ ತೊಟ್ಟಿರುವ ಕುಸುಮಾ ಹಠ ತಾಂಡವ್‌ಗೆ ಸಹಿಸಲು ಅಸಾಧ್ಯವಾಗಿದ್ದು, ಈ ಕುರಿತಂತೆ ಮನೆಯಲ್ಲಿ ಭಾರಿ ಗಲಾಟೆ ಸಹ ಮಾಡಿದ್ದ, ಇದರ ನಡುವೆ ಶ್ರೇಷ್ಠಾ ಸಹ ತಾಂಡವ್ ನನ್ನು ದೂರ ಮಾಡಿದ್ದಾಳೆ.
ಎಲ್ಲಾ ಟೆನ್ಶನ್‌ಗಳಿಂದ ಕಂಗೆಟ್ಟ ತಾಂಡವ್ ತನಗೆ ಮುಂಬೈಗೆ ಟ್ರಾನ್ಸ್‌ಫರ್ ಮಾಡಿ ಎಂದು ಕೇಳಿಕೊಂಡು ಟ್ರಾನ್ಸ್ಫರ್ ಕೂಡ ತೆಗೆದುಕೊಂಡಿದ್ದಾನೆ. ಈಗಲಾದರೂ ಅಮ್ಮ ತನ್ನ ಮಾತನ್ನ ಕೇಳಿ ಭಾಗ್ಯಳನ್ನು ಓದಿಸುವ ಯೋಚನೆ ಬಿಡುವರು ಎಂದು ಅಂದುಕೊಂಡಿರುತ್ತಾನೆ. ಆದರೆ ಕುಸುಮಾ ಆಗಲೂ ಸೋಲನ್ನು ಒಪ್ಪೋದಿಲ್ಲ.
ತಾನು ಸೋತಿದ್ದಾನೆ ಎಂದು ಗೊತ್ತಾದ ತಾಂಡವ್ ಇನ್ನು ಮುಂದೆ ತನ್ನ ಆಟ ಶುರು ಎಂದು ಹೇಳುತ್ತಾ, ಮತ್ತೆ ಮನೆಗೆ ಬಂದು ಎಲ್ಲರಲ್ಲೂ ಕ್ಷಮೆ ಕೇಳುತ್ತಾನೆ. ದೇವಸ್ಥಾನಕ್ಕೆ ಹೋಗಿ ಎಲ್ಲರ ಹೆಸರಲ್ಲಿ ಪೂಜೆ ಮಾಡಿಸಿ, ತನ್ನ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಬಯಸುತ್ತಾನೆ.
ದೇವಸ್ಥಾನದಲ್ಲಿ ಚಾಟಿ ಏಟು ತಿನ್ನುವ ಮೂಲಕ ಎಲ್ಲರೆದುರು ತನ್ನ ತಪ್ಪನ್ನು ಒಪ್ಪಿಕೊಂಡು, ಪ್ರಾಯಶ್ಚಿತ ಕೂಡ ಮಾಡುತ್ತಿದ್ದಾನೆ. ಆದರೆ ನಿಜವಾಗಿಯೂ ತಾಂಡವ್ ಬದಲಾಗ್ತಾನಾ? ತಾಂಡವ್ ಬದಲಾದ್ರೆ ಭಾಗ್ಯಲಕ್ಷ್ಮಿ ಕಥೆ ಮುಂದುವರೆಯೋದಾದ್ರೂ ಹೇಗೆ? ಇದಕ್ಕೆ ಪ್ರೇಕ್ಷಕರು ಏನಂತಾರೆ?
ಪ್ರೇಕ್ಷಕರು ಸಹ ತಾಂಡವ್ ಬದಲಾದ್ರೆ ಈ ಸೀರಿಯಲ್ (serial) ಕಳೆಯೇ ಇರಲ್ಲ ಎಂದಿದ್ದಾರೆ.ಎಲ್ಲರೂ ಮೋಸ ಹೋಗ್ತಾ ಇದ್ದಾರೆ. ಎಷ್ಟು ಚೆನ್ನಾಗಿ ನಾಟಕ ಮಾಡ್ತೀಯಾ ತಾಂಡವ್. ಪಾಪ ಭಾಗ್ಯಕ್ಕ ತಾಂಡವ್ ಬದಲಾಗಿದ್ದಾನೆ ಅಂತ ಅನ್ಕೊಂಡಿದ್ದಾಳೆ. ಕುಸುಮ ಅಮ್ಮ ತಾಂಡವ್‌ನ ಪರ ಆದ್ರೆ ಭಾಗ್ಯ ಕತೆ ಅಷ್ಟೇ. ಅಷ್ಟು ಸುಲಭವಾಗಿ ಕುಸುಮಮ್ಮ ಭಾಗ್ಯನನ್ನು ಕೂಡ ಬಿಟ್ಟು ಕೊಡಲ್ಲ ಏನಾಗುತ್ತೆ ಅಂತ ಮುಂದೆ ನೋಡಬೇಕು ತಾಂಡವನ ಆಟ ಇನ್ನಾದರೂ ಭಾಗ್ಯಕ್ಕ ಸ್ವಲ್ಪ ಜೋರಾಗಬೇಕು. ಅವಾಗ ಸೀರಿಯಲ್ ಸೂಪರ್ ಆಗಿರುತ್ತೆ ಎಂದಿದ್ದಾರೆ ಪ್ರೇಕ್ಷಕರು.
ಇನ್ನೂ ಕೆಲವರಂತೂ ತಾಂಡವ್ ಬದಲಾಗುತ್ತಾನೋ ಇಲ್ವೋ ಗೊತ್ತಿಲ್ಲ, ಆದ್ರೆ ಭಾಗ್ಯಗೆ ಇದೆ ರೋಧನೆ ಕೊಡ್ತಿದ್ರೆ ಮಾತ್ರ ನಮ್ಮ ಟಿವಿ ಚಾನೆಲ್ ಬದಲಾಗುತ್ತೆ ಎಂದು ಹೇಳಿದ್ದಾರೆ. ತಾಂಡವ್ ಇನ್ನೇನು ನಾಟಕ ಮಾಡುತ್ತಾನೆ ಅನ್ನೋದನ್ನು ಕಾದು ನೋಡಬೇಕು.