ಉಪೇಂದ್ರರ ಹೊಸ ಚಿತ್ರದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ನಟಿಗೆ ಅವಕಾಶ

First Published | Jun 16, 2023, 5:26 PM IST

ಕನ್ನಡದ ಹಿರಿ ತೆರೆ ಮತ್ತು ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿದ್ದುಕೊಂಡು ಸದ್ಯ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ನಲ್ಲಿ ರಾಣಿ ಮಂಗಳಾದೇವಿಯಾಗಿ ನಟಿಸುತ್ತಿರುವ ವೀಣಾ ಪೊನ್ನಪ್ಪ ಅವರಿಗೆ ಇದೀಗ ನಟ, ನಿರ್ದೇಶಕ ಉಪೇಂದ್ರರ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ.

ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿ ರಾಣಿ ಮಂಗಳಾದೇವಿ ಪಾತ್ರದಲ್ಲಿಅಭಿನಯಿಸುತ್ತಿರುವ ನಟಿ ವೀಣಾ ಪೊನ್ನಪ್ಪ ಇದೀಗ ಉಪೇಂದ್ರರವರ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. 

ರೇಣುಕಾ ಯಲ್ಲಮ್ಮ ಸೀರಿಯಲ್ ನಲ್ಲಿ ರೇಣುಕೆಯ ತಂದೆ ಮಹಾರಾಜರ ಮೊದಲ ಪತ್ನಿಯಾಗಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವ ವೀಣಾ (Veena Ponnappa) ಅವರಿಗೆ ಈ ಪಾತ್ರದ ಮೂಲಕ ಬಹಳಷ್ಟು ಮನ್ನಣೆ ದೊರೆತಿದೆ. 

Tap to resize

ವೀಣಾ ಅವರು ಅಭಿನಯಿಸುತ್ತಿರುವ ಮೂರನೇ ಪೌರಾಣಿಕ ಧಾರಾವಾಹಿ (mythological serial) ಇದಾಗಿದ್ದು. ಇದಕ್ಕೂ ಮುನ್ನ ‘ಹರಹರ ಮಹಾದೇವ’, ‘ಶ್ರೀ ವಿಷ್ಣು ದಶಾವತಾರ’ ನಂತರ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಈ ಮೊದಲು ಕನ್ನಡದ ಪುಟ್ಮಲ್ಲಿ ಸೀರಿಯಲ್ ನಲ್ಲಿ ನಟಿಸಿದ ನಂತರ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾದರು, ಆ ಬಳಿಕ ವೀಣಾ ಕನ್ನಡ ಸಿನಿಮಾದಲ್ಲೂ ಸಖತ್ ಬ್ಯುಸಿಯಾಗಿದ್ದರು. ರೇಣುಕಾ ಯಲ್ಲಮ್ಮ ಸೀರಿಯಲ್ ಮೂಲಕ ವೀಣಾ ಐದು ವರ್ಷದ ಬಳಿಕ ಕನ್ನಡ ಕಿರುತೆರೆಗೆ (smallscreen) ಕಾಲಿಟ್ಟಿದ್ದರು. 

ವೀಣಾ ಈಗಾಗಲೇ ಶಿವರಾಜ್‌ಕುಮಾರ್‌ ಅಭಿನಯದ ‘ವೇದ’ ಸಿನಿಮಾದಲ್ಲಿ ಪೊಲೀಸ್‌ ಪಾತ್ರ ನಿರ್ವಹಿಸಿ, ಅಪಾರ ಜನಮನ್ನಣೆ ಗಳಿಸಿದ್ದರು. ಇದೀಗ ನಟ ನಿರ್ದೇಶಕ ಉಪೇಂದ್ರ ಮುಂದಿನ ಚಿತ್ರ UI ನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. 

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ವೀಣಾ, ತಾವು UI ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ, ನನ್ನ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರಿತು ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. 

ನಟನೆಗೆ ಅಕಸ್ಮಿಕವಾಗಿ ಬಂದ ವೀಣಾ ಪೊನ್ನಪ್ಪ ಅವರಿಗೆ ಬಾಲ್ಯದಲ್ಲಿ ಸೇನೆಗೆ ಸೇರಿಕೊಳ್ಳುವ ಕನಸು ಇತ್ತಂತೆ. ಆದರೆ ಆಗಿದ್ದೇ ಬೇರೆ. ಇವರು ನಟಿಯಾಗುವ ಮುನ್ನ ಕಾರ್ ರೇಸರ್ (car racer) ಆಗಿದ್ದರು, ನಂತರ ಕಾರ್, ಬೈಕ್ ಶೋಗಳ ನಿರೂಪಕಿಯಾಗಿ ನಂತರ ನಟನೆಗೆ ಕಾಲಿಟ್ಟರು. 

ವೀಣಾ ಅವರು ಸಿಐಡಿ ಕರ್ನಾಟಕ, ಕಿನ್ನರಿ, ಗೃಹಲಕ್ಷ್ಮೀ, ಅಂಬಾರಿ ಸೇರಿ ಎಂಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಮಹಾಕಾಳಿ, ಅಂಬಿ ನಿಂಗ್‌ ವಯಸ್ಸಾಯ್ತೋ, ದಂಡುಪಾಳ್ಯ , ಯಾರಿಗೆ ಯಾರುಂಟು, ಡಾಕ್ಟರ್‌ 56, ಭಜರಂಗಿ, ವೇದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

Latest Videos

click me!