ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟಿ ಆಶಿತಾ ಚಂದ್ರಪ್ಪ ತಾಯಿಯಾಗುತ್ತಿದ್ದಾರೆ.
ಮೊದಲ ಫೋಟೋದಲ್ಲಿ ತಂದೆ ಮುತ್ತು ಕೊಡುತ್ತಿದ್ದಾರೆ 'ಎಲ್ಲದಕ್ಕೂ ವಂದನೆಗಳು ತಂದೆ' ಅಶಿತಾ (Ashita Chandrappa) ಬರೆದುಕೊಂಡಿದ್ದಾರೆ.
ಮತ್ತೊಂದು ಫೋಟೋದಲ್ಲಿ ಆಶಿತಾ ಚಂದ್ರಪ್ಪ ತಮ್ಮ ಬೇಬಿ ಬಂಪ್ ತೋರಿಸುತ್ತಿದ್ದಾರೆ. ಸಹೋದರಿ ಅನುರಿತಾ ಮೇಕಪ್ಮ ಮಾಡಿದ್ದಾರೆ.
ಲೈಟ್ ಗ್ರೀನ್ ಸೀರೆಗೆ ಬ್ಲೂ ಬಾರ್ಡರ್ ಇರುವ ಸೀರೆಯಲ್ಲಿ ಆಶಿತಾ ಮಿಂಚಿದ್ದಾರೆ. ಈ ಸೀರೆ ಬ್ಲೌಸ್‌ನ ಡಾಲಿ ಬೈ ವಿದ್ಯಾ ಡಿಸೈನ್ ಮಾಡಿದ್ದಾರೆ. ನವಾಜ್ ಮೆಹೆಂದಿ ಹಾಕಿದ್ದಾರೆ.
ಕೆಲವು ದಿನಗಳಿಂದ ಆಶಿತಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಈಗ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಫುಲ್ ಖುಷ್ ಅಗಿದ್ದಾರೆ.
ಬಿಗ್ ಬಾಸ್ ಸೀಸನ್ 5ರಲ್ಲಿ ಆಶಿತಾ ಮಿಂಚಿದ್ದರು. ಆಗ ಆಶಿತಾ ಫ್ಯಾಷನ್ ಆಂಡ್ ಸ್ಟೈಲಿಂಗ್‌ಗೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದರು.
ಆಶಿತಾ ಚಂದ್ರಪ್ಪ ಕೊನೆಯದಾಗ ನಟಿಸಿದ್ದರು ಕಲರ್ಸ್ ಕನ್ನಡ ಜನಪ್ರಿಯ ಸೀರಿಯಲ್ ರಾಧಾ ರಮಣದಲ್ಲಿ, ಅವನಿ ಉರ್ಫ್ ರಾಣಿ ಪಾತ್ರದಲ್ಲಿ ಮಿಂಚಿದ್ದರು.
Vaishnavi Chandrashekar