‘ಓವರ್ ಆಕ್ಟಿಂಗ್’ ಅಂದಿದ್ದಕ್ಕೆ ಗರಂ ಆದ ಹಿಟ್ಲರ್ ಕಲ್ಯಾಣ ನಟಿ ಹೇಳಿದ್ದೇನು ಗೊತ್ತಾ?

Published : Aug 14, 2023, 05:53 PM IST

ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಸದ್ಯ ಅಂತರಾ ಪಾತ್ರದ ಮೂಲಕ ಸದ್ದು ಮಾಡ್ತಾ ಇರೋ ರಜಿನಿ ಅವರದ್ದು ಓವರ್ ಆಕ್ಟಿಂಗ್ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದು, ನಟಿ ಗರಂ ಆಗಿದ್ದಾರೆ.   

PREV
17
‘ಓವರ್ ಆಕ್ಟಿಂಗ್’ ಅಂದಿದ್ದಕ್ಕೆ ಗರಂ ಆದ ಹಿಟ್ಲರ್ ಕಲ್ಯಾಣ ನಟಿ ಹೇಳಿದ್ದೇನು ಗೊತ್ತಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ (Hitler Kalyana) ಸೀರಿಯಲ್ ಸದ್ಯ ತನ್ನ ವಿಭಿನ್ನ ಕಥಾ ಹಂದರದಿಂದಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸೀರಿಯಲ್ ನ ಪ್ರತಿಯೊಬ್ಬ ನಟರೂ ಸಹ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಇದಕ್ಕೆ ರಜಿನಿಯೂ ಹೊರತಲ್ಲ. 

27

ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಅಂತರಾ ಪಾತ್ರದ ಮೂಲಕ ಎಂಟ್ರಿ ಕೊಟ್ಟ ರಜಿನಿ (Rajini), ಮೊದಲಿಗೆ ಒಳ್ಳೆಯವಳಂತೆ ನಟಿಸಿದ್ದ ಅಂತರಾ ಪಾತ್ರಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆಕೆಯೇ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. 

37

ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ರಂಜಿನಿ, ಇದೀಗ ವಿಲನ್ ಆಗಿ ನಟಿಸುತ್ತಿದ್ದು, ಉತ್ತಮವಾಗಿ ನಟಿಸುತ್ತಿದ್ದಾರೆ. ಹೆಚ್ಚಿನ ಜನರು ರಜಿನಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಯಾರೋ ಒಬ್ಬರು ಓವರ್ ಆಕ್ಟಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. 
 

47

ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಂಜಿನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. 
 

57

ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ (Social media) ಒಂದು ಫೋಟೋಕ್ಕೆ ಒಬ್ಬರು ಓವರ್ ಆಕ್ಟೀಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನಟಿ ಗರಂ ಆಗಿದ್ದು, ಅದಕ್ಕೆ ತಿರುಗೇಟು ನೀಡಿದ್ದಾರೆ. 
 

67

ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಮಾಡುತ್ತಿರುವೆ. ನೀವು ನಿರ್ದೇಶಕರಾದರೆ ನೀವು ಹೇಳಿದಂತೆ ಮಾಡುವೆ ಎಂದು ನಟಿ ಕಾಮೆಂಟ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ರಂಜಿನಿ ಪ್ರತಿಕ್ರಿಯೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ. 
 

77

ರಂಜಿನಿ ಅಮೃತವರ್ಷಿಣಿ, ಆತ್ಮಬಂಧನ ಸೀರಿಯಲ್ ಗಳಲ್ಲಿ ನಟಿಸಿದ್ದರು. ಜೊತೆಗೆ ಸಿನಿಮಾದಲ್ಲೂ ನಟಿಸಿದ್ದರು. ಇದಾದ ಬಳಿಕ ಅವರು ಬ್ರೇಕ್ ತೆಗೆದುಕೊಂಡಿದ್ದರು. ಹಲವು ವರ್ಷಗಳ ಬಳಿಕ ರಜಿನಿ ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. ಸದ್ಯ ಹಿಟ್ಲರ್ ಕಲ್ಯಾಣದಲ್ಲಿ ಮಿಂಚುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories