ರಾತ್ರಿ 12.30ಕ್ಕೆ ಹೊರ ಹಾಕಿದ್ದರು, ಬಳಸದ ಪದಗಳಿಲ್ಲ ಅಷ್ಟು ಕೆಟ್ಟದಾಗಿ ಬೈದಿದ್ದಾರೆ: 'ಅಂತರಪಟ' ನಟಿ ಕಣ್ಣೀರು!

Published : Apr 05, 2024, 10:46 AM IST

ತೆರೆ ಮೇಲೆ ಸಾಕಷ್ಟು ಕಷ್ಟಗಳನ್ನು ನೋಡುತ್ತಿರುವ ಆರಾಧನಾ ರಿಯಲ್ ಜೀವನದಲ್ಲೂ ಎಷ್ಟು ಕಷ್ಟ ನೋಡಿದ್ದಾರೆ ಗೊತ್ತಾ?  

PREV
110
ರಾತ್ರಿ 12.30ಕ್ಕೆ ಹೊರ ಹಾಕಿದ್ದರು, ಬಳಸದ ಪದಗಳಿಲ್ಲ ಅಷ್ಟು ಕೆಟ್ಟದಾಗಿ ಬೈದಿದ್ದಾರೆ: 'ಅಂತರಪಟ' ನಟಿ ಕಣ್ಣೀರು!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪ ಧಾರಾವಾಹಿಯಲ್ಲಿ ಮಿಂಚುತ್ತಿರುವ ಆರಾಧನಾ ಉರ್ಫ್‌ ತನ್ವಿ ನಿಜ ಜೀವನದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ತನ್ವಿ ಹಂಚಿಕೊಂಡ ಸ್ಟೋರಿ...

210

ತನ್ವಿ ತಂದೆ ಮಂಡ್ಯದಲ್ಲಿ ಕಾಂಟ್ರ್ಯಾಕ್ಟ್‌ ಕೆಲಸ ಮಾಡುತ್ತಾರೆ, ತಾಯಿ ಹೂವ ಕಟ್ಟಿ ಮಾರುತ್ತಾರೆ. ಮೂವರು ಹೆಣ್ಣುಮಕ್ಕಳಲ್ಲಿ ತನ್ವಿ ಕೊನೆಯವರು. ಇಬ್ಬರು ಅಕ್ಕಂದಿರು ಮದುವೆಯಾಗಿ ಬೆಂಗಳೂರಿನಲ್ಲಿದ್ದಾರೆ. 

310

ತನ್ವಿ ಮೊದಲು ಕಿರಿ ಅಕ್ಕನ ಮನೆಯಲ್ಲಿದ್ದರು ಈಗ ದೊಡ್ಡಕ್ಕನ ಮನೆಯಲ್ಲಿದ್ದಾರೆ. ಶೂಟಿಂಗ್‌ ಬ್ರೇಕ್‌ ಸಿಕ್ಕಾಗ ಮಂಡ್ಯದಲ್ಲಿರುತ್ತಾರಂತೆ. ಗಿಣಿರಾಮಾ ಸೀರಿಯಲ್‌ನ ವಿಶೇಷ ಎಪಿಡೋಸ್‌ ಶೂಟಿಂಗ್‌ ಸಮಯದಲ್ಲಿ ಪ್ರಮುಖ ಪಾತ್ರಧಾರಿಗಳಿಗೆ ತನ್ವಿ ಡ್ಯಾನ್ಸ್‌ ಹೇಳಿಕೊಡುತ್ತಿದ್ದರು. 

410

ಆಗ ಸೀರಿಲ್‌ EP ಕುಳಿತುಕೊಂಡು ನೋಡುತ್ತಿದ್ದರಂತೆ. ಅಲ್ಲಿ ಅವರ ಕಣ್ಣಿಗೆ ತನ್ವಿ ಕಾಣಿಸಿಕೊಂಡು ಫೋಟೋ ಪಡೆದು ಆಡಿಷನ್‌ ಮಾಡಿ ಧಾರಾವಾಹಿಗೆ ಆಯ್ಕೆ ಮಾಡಿದ್ದಾರೆ. 

510

ಡ್ಯಾನ್ಸ್‌ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ನನ್ನ ತಂದೆಗೆ ಚೂರು ಇಷ್ಟವಿಲ್ಲ.ಹಾಗಂತ ಡ್ಯಾನ್ಸ್ ಬಿಡುವುದಕ್ಕೆ ನನಗೆ ಇಷ್ಟವೇ ಇರಲಿಲ್ಲ ಅವರಿಗೆ ಬೇಸರ ಮಾಡುವ ಉದ್ದೇಶ ನನಗೆ ಇರಲಿಲ್ಲ ಆದರೂ ನೈಟ್‌ ಡ್ಯಾನ್ಸ್‌ ಶೂಟ್ ಮುಗಿಸಿಕೊಂಡು ಕೆಲವ ಮಾಡುತ್ತಿದ್ದೆ ಎಂದು ಖಾಸಗಿ ಸಂದರ್ಶನದಲ್ಲಿ ತನ್ವಿ ಮಾತನಾಡಿದ್ದಾರೆ.

610

ಒಂದು ವರ್ಷದ ಕೆಳಗೆ ನಾನು ಎರಡನೇ ಅಕ್ಕ ಮನೆಯಲ್ಲಿದ್ದೆ, ನನ್ನ ಭಾವ ಮಂದೆ ಚೆನ್ನಾಗಿ ನಗುತ್ತಾ ಮಾತನಾಡುತ್ತಿದ್ದರು ಆದರೆ ಹಿಂದೆ ಒಂದು ರೀತಿ ರಿಯಾಕ್ಟ್ ಮಾಡುತ್ತಿದ್ದರು. ನಾನು ಅವರ ಮನೆಯಲ್ಲಿದ್ದೆ ಅಕ್ಕ ಮತ್ತು ಅವರ ಮಕ್ಕಳಿಗೆ ಕ್ಲೋಸ್ ಆಗಿದ್ದೆ ಅಂತ ಅವರಿಗೆ ಇಷ್ಟನೇ ಇರಲಿಲ್ಲ.

710

ಅಕ್ಕನ ಮಕ್ಕಳು ಅಂದ್ರೆ ನನಗೆ ತುಂಬಾನೇ ಇಷ್ಟ ಆದರೆ ಭಾವ ಇಷ್ಟ ಪಡದ ಕಾರಣ ನನ್ನ ಮುಂದೆ ಅಲ್ಲದೆ ಇದ್ದರೂ ಹಿಂದೆ ಅಕ್ಕನಿಗೆ ಹೇಳುತ್ತಿದ್ದರು ಅವಳು ಇರುವುದು ಬೇಡ ಎಂದು. ಒಂದು ವರ್ಷನೂ ಆಗಿಲ್ಲ 10 ತಿಂಗಳ ಹಿಂದೆ ನನ್ನ ಭಾವ ಫುಲ್ ಕುಡಿದು ಮನೆಗೆ ಬಂದಿದ್ದಾರೆ.

810

ಆಗ ಅಕ್ಕ ಮತ್ತು ನಾನು ಒಂದು ಮದುವೆಗೆ ಹೋಗಿ ಬಂದ್ವಿ. ಆಗ ನೀನು ಮನೆಯಲ್ಲಿ ಇರಬೇಡ ಹಾಗೆ ಹೀಗೆ...ಅವರು ಬಳಸಿರುವ ಪದಗಳನ್ನು ಹೇಳುವುದಕ್ಕೆ ಆಗಲ್ಲ ಅಷ್ಟು ಕೆಟ್ಟದಾಗಿ ಬೈದಿದ್ದಾರೆ. 

910

ಈ ಘಟನೆ ನಡೆದಾಗ ಸುಮಾರು ರಾತ್ರಿ 12.30 ಆಗಿತ್ತು. ಅಕ್ಕನ ಮನೆಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಗೇಟ್ ಬಳಿ ಬಂದೆ ಸೀದಾ ದೊಡ್ಡಕ್ಕ ಮನೆಗೆ ಹೋಗಿರುವೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ತನ್ವಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

1010

ಆರಾಧನಾ ಪಾತ್ರಕ್ಕೆ ಅದೆಷ್ಟೋ ಮಿಡಲ್ ಕ್ಲಾಸ್ ಹೆಣ್ಣು ಮಕ್ಕಳು ಕನೆಕ್ಟ್ ಮಾಡಿಕೊಳ್ಳುತ್ತಾರೆ. ತೆರೆ ಮೇಲೆ ಆಕೆ ಕಷ್ಟ ಪಡುತ್ತಿದ್ದರೆ ನೋಡುತ್ತಿರುವವರು ಕಣ್ಣೀರಿಡುತ್ತಾರೆ.  ಅದೆಷ್ಟೋ ಮಂದಿ ಆರಾಧನಾ ಖುಷಿಯಾಗಿ ಬೇಕು ನಮ್ಮನೆ ಮಗಳು ಎನ್ನುವ ರೀತಿ ಮಾತನಾಡುತ್ತಾರೆ. 

Read more Photos on
click me!

Recommended Stories