ತಾಯಿ ಕಳೆದುಕೊಂಡ ನೋವಿನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ ನಟಿ ಜ್ಯೋತಿ ರೈ; ಮಗನ ಕಾಯಿಲೆ ಬಗ್ಗೆ ಕೇಳಿ ಶಾಕ್!

Published : Apr 04, 2024, 03:34 PM IST

ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಜ್ಯೋತಿ ರೈ ತಮ್ಮ ಲೈಫಿನಲ್ಲಿ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ. 

PREV
18
ತಾಯಿ ಕಳೆದುಕೊಂಡ ನೋವಿನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ ನಟಿ ಜ್ಯೋತಿ ರೈ; ಮಗನ ಕಾಯಿಲೆ ಬಗ್ಗೆ ಕೇಳಿ ಶಾಕ್!

ಕಿನ್ನರಿ ಸೇರಿದಂತೆ ದೊಡ್ಡ ದೊಡ್ಡ ಧಾರಾವಾಹಿಗಳಲ್ಲಿ ಮಿಂಚಿರುವ ಜ್ಯೋರಿ ರೈ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ನಗುತ್ತಿರುವ ನಟಿ ತಮ್ಮ ಜೀವನದ ಕಹಿ ಘಟನೆ ನೆನಪಿಸಿಕೊಂಡಿದ್ದಾರೆ.

28

ನಾನು 8ನೇ ವಯಸ್ಸಿನಲ್ಲಿದ್ದಾಗ ತಂದೆಯನ್ನು ಕಳೆದುಕೊಂಡೆ.ನನ್ನ ತಮ್ಮ ತುಂಬಾ ಚಿಕ್ಕವನು ನನ್ನ ತಾಯಿ ಕ್ಯಾನ್ಸರ್ ಪೇಷಂಟ್ ಹೀಗಾಗಿ ಚಿಕ್ಕ ವಯಸ್ಸಿಗೆ ಸಾಕಷ್ಟು ಜವಾಬ್ದಾರಿಗಳು ನನ್ನ ಕೈಯಲ್ಲಿತ್ತು.

38

ಮದ್ವೆ ಆದ್ಮೇಲೆ ನನ್ನ ಜೊತೆನೇ ತಾಯಿ ಇದ್ದರು. ಇದ್ದಕ್ಕಿದ್ದಂತೆ ಕ್ಯಾನ್ಸರ್ ಹೆಚ್ಚಾಗಿತ್ತು ಖರ್ಚು ಮಾಡುವುದಕ್ಕೆ ಹಣ ಇರಲಿಲ್ಲ ಈಗಲೂ ನಾನು ಪಾರ್ಟಿ ಮಾಡ್ಕೊಂಡು ಹಣ ಖರ್ಚು ಮಾಡಿರಲಿಲ್ಲ ಎಂದು ಖಾಸಗಿ ಸಂದರ್ಶನಲ್ಲಿ ಮಾತನಾಡಿದ್ದಾರೆ. 

48

ತಾಯಿಗೆ ತುಂಬಾ ಅಟ್ಯಾಚ್ ಆಗಿದೆ 2011ರಲ್ಲಿ ಅಗಲಿದರು. ಇಂದಿಗೂ ತಾಯಿ ಇಲ್ಲದೆ ಬದುಕುವುದು ಕಷ್ಟವಾಗುತ್ತಿತ್ತು. ತಾಯಿ ಇಲ್ಲ ಅಂದ್ರೂ ಅವರ ನಂಬರ್‌ಗೆ ಕರೆ ಮಾಡುತ್ತಿದ್ದೆ...ಏನೋ ಮಿರಾಕಲ್ ಆಗುತ್ತೆ ಅನ್ನೋ ಭರವಸೆ ನನ್ನಲ್ಲಿತ್ತು. 

58

 ಆ ಡಿಪ್ರೆಶನ್‌ನಲ್ಲಿ ಮಗುಗೆ ಪ್ಲ್ಯಾನ್ ಮಾಡಿಕೊಂಡೆ. ತಾಯಿಗೆ ಮಗು ಆಸೆ ಇತ್ತು ಇವತ್ತಿಗೂ ನೋವಿಗೆ ಅವರಿದ್ದಾಗ ಮಗು ಮಾಡಿಕೊಳ್ಳಬೇಕಿತ್ತು ಎಂದು. 

68

ನನ್ನ ಮಗ ಕೂಡ Autistic ಅವನಿಗೆ 30% ಆಟಿಸಂ ಇದೆ. ನನ್ನ ಮಗು ಹೇಗಿದ್ದರೂ ನನಗೆ ಖುಷಿನೇ ಆದರೆ ಜನರಿಂದ ಸಪೋರ್ಟ್‌ ಸಿಗುವುದಿಲ್ಲ ಎಲ್ಲರಿಗೂ ಹೆಚ್ಚಾಗಿ ನೋಡಿಕೊಳ್ಳಿ ಎಂದು ಹೇಳಲು ಆಗಲ್ಲ.

78

 ಆರಂಭದಲ್ಲಿ ನನ್ನ ಮಗ ಮಾತನಾಡುತ್ತಿರಲಿಲ್ಲ ಸುಮ್ಮನಿರುತ್ತಿದ್ದ ಆಗ ನಿನ್ನ ಮಗನಿಗೆ ಮಾತು ಬರುವುದಿಲ್ಲ ಹಾಗೆ ಹೀಗೆ ಎನ್ನುತ್ತಿದ್ದರು. 

88

ಈಗ ನನ್ನ ಮಗನಿಗೆ 10 ವರ್ಷ ಯಾರೂ ಮಾತನಾಡದಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ ನೆನಪಿನ ಶಕ್ತಿ ಹೆಚ್ಚಿದೆ ಒಂದು ಸಲ ಹೇಳಿದ ಮಾತನ್ನು ಮರೆಯುವುದಿಲ್ಲ ಅಷ್ಟು ಚೆನ್ನಾಗಿದ್ದಾರೆ. 

Read more Photos on
click me!

Recommended Stories