ಇದು ಸೀರಿಯಲ್‌ ಅಲ್ಲ ದೊಂಬರಾಟ; ಜೊತೆ ಜೊತೆಯಲ್ಲಿ ಧಾರಾವಾಹಿ ಎಂಟ್ರಿ ಕೊಟ್ಟ ಚೈತ್ರಾ ರಾವ್

Published : Nov 09, 2022, 12:52 PM IST

ದಿನಕ್ಕೊಂದು ತಿರುವು ಪಡೆಯುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಕಥೆ ಚೆನ್ನಾಗಿಲ್ಲ ಎಂದು ಸಿಟ್ಟು ಮಾಡಿಕೊಂಡ ನೆಟ್ಟಿಗರು....

PREV
16
ಇದು ಸೀರಿಯಲ್‌ ಅಲ್ಲ ದೊಂಬರಾಟ; ಜೊತೆ ಜೊತೆಯಲ್ಲಿ ಧಾರಾವಾಹಿ ಎಂಟ್ರಿ ಕೊಟ್ಟ ಚೈತ್ರಾ ರಾವ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಂಡು ವೀಕ್ಷಕರ ತಲೆ ಕೆಡಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

26

ಅನು ಸಿರಿಮನೆ ಮತ್ತು ಸಂಜು ನಡುವೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮತ್ತೊಬ್ಬ ನಾಯಕಿ ಎಂಟ್ರಿ ಆಗಿದೆ. ಅವರೇ ಚೈತ್ರಾ ರಾವ್. 

36

ಆರಾಧನ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ಳಲಿದ್ದು ಕಥೆಗೆ ಮತ್ತೊಂದು ಟ್ವಿಸ್ಟ್‌ ನೀಡಲಿದ್ದಾರೆ. ಏಕೆಂದರೆ ಸಂಜು ಹೆಸರು ಸಂಜು ಅಲ್ಲ ವಿಶ್ವಾಸ್ ದೇಸಾಯಿ ಎಂದು ಮನೆ ಅವರಿಗೆ ತಿಳಿಸುತ್ತಾರೆ. 

46

ಅಪಘಾತದ ನಂತರ ಸಂಜು ಜೀವನ ಹಾಳಾಗಿತ್ತು ಹೊಸ ಅಧ್ಯಾಯ ಶುರು ಮಾಡಬೇಕು ಎಂದು ಅನು ಸಿರಿಮನೆ ಜವಾಬ್ದಾರಿ ತೆಗೆದುಕೊಂಡು ಸಂಸಾರ ಸರಿ ಮಾಡಲು ಮುಂದಾಗುತ್ತಾರೆ ಆಗ ಅನು ಕರೆದುಕೊಂಡು ಬರುವುದೇ ಚೈತ್ರಾರನ್ನು.

56

800ಕ್ಕೂ ಹೆಚ್ಚ ಸಂಚಿಕೆ ಪೂರೈಸಿರುವ ಜೊತೆ ಜೊತೆಯಲಿ ಧಾರಾವಾಹಿ ಆರಂಭದಿಂದಲ್ಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು ಆದರೆ ಇದ್ದಕ್ಕಿದ್ದಂತೆ ಆಗುತ್ತಿರುವ ಬದಲಾವಣೆಯನ್ನು ವೀಕ್ಷಕರು ಒಪ್ಪಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. 

66

ಚೈತ್ರಾ ರಾವ್ ಗೆಸ್ಟ್‌ ರೂಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಎಂದು ಕೇಳಿ ಬರುತ್ತಿದೆ ಆದರೆ ಕಥೆ ಮತ್ತು ವೀಕ್ಷಕರು ಡಿಮ್ಯಾಂಡ್ ಮಾಡಿದ್ದರೆ ದೊಡ್ಡ ತಿರುವು ನೀಡುವ ಸಾಧ್ಯತೆಗಳಿದೆ ಎನ್ನಬಹುದು. 

Read more Photos on
click me!

Recommended Stories