ಅಮೃತಧಾರೆ ಧಾರಾವಾಹಿ (Amruthadhare serial) ಭರ್ಜರಿಯಾಗಿಯೇ ಮೂಡಿ ಬರ್ತಿದೆ. ದಿನಕ್ಕೊಂದು ಟ್ವಿಸ್ಟ್ ನೊಂದಿಗೆ ಸೀರಿಯಲ್ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿಕೊಂಡೇ ಹೋಗುತ್ತಿದೆ. ಸದ್ಯ ಸುಧಾ ಮತ್ತು ಆಕೆಯ ತಾಯಿ ಭಾಗ್ಯ ಕಥೆ ನಡೆಯುತ್ತಿದ್ದು, ಮುಂದೇನಾಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.
ಕಥೆಯ ಬಗ್ಗೆ ಹೇಳೋದಾದರೆ ಒಂದು ಕಡೆ ಗೌತಮ್ ತನ್ನ ತಾಯಿ ಮತ್ತು ತಂಗಿ ಸಾವನ್ನಪ್ಪಿದ್ದಾರೆ ಎಂದು ನಂಬಿಕೊಂಡು ಅವರಿಗೆ ಪಿಂಡವನ್ನು ಬಿಟ್ಟಾಗಿದೆ. ಮತ್ತೊಂದು ಕಡೆ ಸುಧಾ ಮತ್ತು ತಾಯಿ ಭಾಗ್ಯ ಗೌತಮ್ ದಿವಾನ್ ಮನೆಗೆ ಬಂದಾಗಿದೆ. ಇನ್ನೊಂದು ಕಡೆ ಸುಧಾನೇ ಗೌತಮ್ ತಂಗಿ ಅನ್ನೋದು ವಿಲನ್ ಗಳಿಗೆ ಗೊತ್ತಾಗಿ ಆಕೆಯನ್ನು ಈ ಮನೆಯಿಂದ ಹೊರಹಾಕಿ, ತಾಯಿ ಮಗಳನ್ನು ಮುಗಿಸಬೇಕು ಎನ್ನುವ ಹುನ್ನಾರದಲ್ಲಿದ್ದಾರೆ.
ತುಂಬಾ ಸಮಯದಲ್ಲಿ ಸೀರಿಯಲ್ ಕಥೆ ಗೌತಮ್ ಮತ್ತು ಭೂಮಿ ಮನೆಯಲ್ಲೇ ಸುತ್ತುತ್ತಾ ಇದೆ. ಆದರೆ ಸೀರಿಯಲ್ ನಲ್ಲಿ ಕೆಲವರು ಕಳೆದ ಎರಡು -ಮೂರು ತಿಂಗಳಿಂದ ಮಿಸ್ ಆಗಿದ್ದಾರೆ. ಹೌದು, ಭೂಮಿಕಾ ತವರು ಮನೆಯವರು ಯಾರು ಸಹ ಕಳೆದ ಕೆಲವು ತಿಂಗಳಿಂದ ಕಾಣಿಸಿಕೊಂಡಿಲ್ಲ. ಅಪ್ಪಿ ಮತ್ತು ಪಾರ್ಥನ ಮದುವೆಯಾದ ಬಳಿಕ ಕಥೆ ಪೂರ್ತಿಯಾಗಿ ಗೌತಮ್ ಮನೆಯಲ್ಲಿಯೇ ನಡೆಯುತ್ತಿದೆ.
ಭೂಮಿಕಾ ತವರು ಮನೆಯ ಕಥೆ ಕೂಡ ಅದ್ಭುತವಾಗಿಯೇ ಮೂಡಿ ಬರುತ್ತಿತ್ತು. ಭೂಮಿಕಾ ತಂದೆ ತಾಯಿ, ತಮ್ಮ, ನಾದಿನಿ ಎಲ್ಲರ ಪಾತ್ರವೂ ಅದ್ಭುತವಾಗಿತ್ತು. ಸಿಹಿಕಹಿ ಚಂದ್ರು (Shi Kahi Chandru), ಚಿತ್ರಾ ಶೆಣೈ, ಸಾರಾ ಅಣ್ಣಯ್ಯ, ಶಶಿ ಹೆಗ್ಡೆ ಎಲ್ಲರನ್ನೂ ಜನ ಇಷ್ಟಪಟ್ಟಿದ್ದರು. ಹಾಗಿದ್ರೆ ಎಲ್ಲರೂ ಈವಾಗ ಯಾಕೆ ಮಿಸ್ಸಿಂಗ್? ಈವಾಗ ಅವರೆಲ್ಲಾ ಏನ್ ಮಾಡ್ತಿದ್ದಾರೆ.
ಸದ್ಯ ಸೀರಿಯಲ್ ನಲ್ಲಿ ಗೌತಮ್ ದಿವಾನ್ ಮನೆಯ ಕಥೆಯೇ ಹೈಲೈಟ್ ಆಗಿರೋದರಿಂದ ಕಥೆಗೆ ಭೂಮಿಕಾ ಮನೆಯ ಅವಶ್ಯಕತೆ ಇಲ್ಲದ ಕಾರಣ, ಸದ್ಯಕ್ಕೆ ತವರು ಮನೆ ಕಥೆಯನ್ನು ಕೈ ಬಿಟ್ಟಿರುವ ಸಾಧ್ಯತೆ ಇದೆ. ಇನ್ನು ಆ ನಟರೆಲ್ಲರೂ ಸದ್ಯ ಒಂದಲ್ಲ ಒಂದು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.
ಭೂಮಿಕಾ ತಂದೆ ಸದಾಶಿವ ಪಾತ್ರದಲ್ಲಿ ನಟಿಸುವ ಸಿಹಿ ಕಹಿ ಚಂದ್ರು ಅವರು ಬೊಂಬಾಟ್ ಭೋಜನ ಸೀಸನ್ 5 ನಡೆಸಿಕೊಡುತ್ತಿದ್ದಾರೆ, ಜೊತೆಗೆ ಮಕ್ಕಳ ಜೊತೆ ದೇಶ ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತಾಯಿ ಮಂದಾಕಿನಿ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರಾ ಶೆಣೈ (Chithra Shenoy)ಅವರು ಪೊರಟ್ಟು ನಾಡಕಂ ಎನ್ನುವ ಮಲಯಾಲಂ ಸಿನಿಮಾದಲ್ಲಿ ನಟಿಸುತ್ತಿದ್ದು, ಜೊತೆಗೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಿರುವ ನೂರು ಜನ್ಮಕೂ ಸೀರಿಯಲ್ ನಿರ್ಮಾಣ ಕೂಡ ಮಾಡ್ತಿದ್ದಾರೆ.
ಭೂಮಿಕಾ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದ ಶಶಿ ಹೆಗ್ಡೆ (Shashi Hegde) ಯಾವ ಸೀರಿಯಲ್ ನಲ್ಲೂ ನಟಿಸುತ್ತಿಲ್ಲ, ಆದರೆ ಝೀ ಎಂಟರ್ಟೇನರ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಹಿಮಾ ಪಾತ್ರದ ಮೂಲಕ ಮನ ಗೆದ್ದ ಸಾರಾ ಅಣ್ಣಯ್ಯ (Saara Annaiah)ದೇಶ, ವಿದೇಶ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ.