ಗೀತಾ ಭಾರತಿ ಭಟ್ (Geetha Bharathi Bhat)
ಬ್ರಹ್ಮ ಗಂಟು ಸೀರಿಯಲ್ ನ ಗುಂಡಮ್ಮ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಒಂದೂವರೆ ವರ್ಷದಿಂದ ಜಿಮ್ಮಿಂಗ್ ಮಾಡುತ್ತಿದ್ದು, ತೂಕ ಕಳೆದುಕೊಂಡಿದ್ದಾರೆ. "ಯಾರನ್ನಾದರೂ ಮೆಚ್ಚಿಸಲು ಅಥವಾ ಫಿಲ್ಮಿ ಅವಕಾಶಗಳನ್ನು ಪಡೆಯಲು ನಾನು ತೂಕ ಇಳಿಸಿಕೊಳ್ಳಲು ಬಯಸಲಿಲ್ಲ. ನಾನು ಇದ್ದ ರೀತಿಯನ್ನು ನಾನು ಇಷ್ಟಪಡುತ್ತಿದ್ದೆ. ಬಿಗ್ ಬಾಸ್ ನಂತರ, ನಾನು ನನ್ನದೇ ಆದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದೆ. ಜೊತೆಗೆ ನನಗೆ ಪಿಸಿಒಎಸ್ ಸಮಸ್ಯೆ ಇತ್ತು, ಅದು ಈಗ ಗುಣಮುಖವಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರುವುದರ ಮಹತ್ವವನ್ನು ನಾನು ಅರಿತುಕೊಂಡೆ ಅಂತಾರೆ. ಇದೀಗ ಅವರು ಸುಮಾರು 28 ಕಿಲೋ ತೂಕ ಕಳೆದುಕೊಂಡಿದ್ದಾರೆ.