ಅನುಪಮಾ ಗೌಡ ಕನಸಿನ ಮನೆ ‘ನಮ್ಮನೆ’ ಅದ್ಧೂರಿ ಗೃಹಪ್ರವೇಶ… ಸಂಭ್ರಮಿಸಿದ ತಾರೆಯರು

First Published | Oct 11, 2024, 5:27 AM IST

ನಟಿ, ನಿರೂಪಕಿ ಅನುಪಮಾ ಗೌಡ ತಮ್ಮ ಕನಸಿನ ಮನೆ ನಿರ್ಮಾಣ ಮಾಡಿದ್ದು, ಅದ್ಧೂರಿಯಾಗಿ ಗೃಹಪ್ರವೇಶ ನಡೆದಿದ್ದು, ಕಿರುತೆರೆ-ಹಿರಿತೆರೆ ತಾರೆಯರು ಭಾಗಿಯಾಗಿದ್ದಾರೆ. 
 

ಕನ್ನಡ ಕಿರುತೆರೆ ನಟಿ ಮತ್ತು ನಿರೂಪಕಿಯಾಗಿ ತುಂಬಾನೆ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ (Anupama Gowda) ಬಗ್ಗೆ ಹೊಸ ಪರಿಚಯ ಬೇಕಾಗಿಯೇ ಇಲ್ಲ. ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರದ ಮೂಲಕ ತಮ್ಮ ಅದ್ಭುತ ಅಭಿನಯದ ಮೂಲಕ ಗುರುತಿಸಿಕೊಂಡ ನಟಿ ಅನುಪಮಾ. 
 

ನಂತರ ಅನುಪಮಾ ಜನಪ್ರಿಯತೆ ಪಡೆದದ್ದು, ನಿರೂಪಕಿಯಾಗಿ. ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸಿರೋ ಅನುಪಮಾ, ಕೊನೆಯದಾಗಿ ಕಲರ್ಸ್ ಕನ್ನಡದ ರಾಜಾ ರಾಣಿ ರೀಲೋಡೆಡ್ (Raja Rani releoaded) ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ಕಾರ್ಯಕ್ರಮ ಮುಕ್ತಾಯವಾಗಿ ಬಿಗ್ ಬಾಸ್ ಆರಂಭವಾಗಿದೆ. 
 

Tap to resize

ರಾಜಾ ರಾಣಿ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ನಿರೂಪಕಿ ಅನುಪಮಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಹಾಗಂತ ಅವರು ಮದುವೆಯಾಗುತ್ತಿದ್ದಾರೆ ಎಂದುಕೊಳ್ಳಬೇಡಿ. ಇದು ಅನುಪಮಾ ಗೌಡ ಬಹುದಿನಗಳ ಕನಸಾಗಿತ್ತು, ಆ ಕನಸನ್ನು ತಮ್ಮ ಪರಿಶ್ರಮದಿಂದ ಈಗ ನನಸಾಗಿಸಿಕೊಂಡಿದ್ದಾರೆ. 
 

ಹೌದು ಅನುಪಮಾ ಗೌಡ ತಮ್ಮ ಕನಸಿನ ಅರಮನೆಯನ್ನು ನಿರ್ಮಾಣ ಮಾಡಿದ್ದು,  ಅದ್ಧೂರಿಯಾಗಿ ಗೃಹಪ್ರವೇಶ ಸಮಾರಂಭ, ಮಹಾಪೂಜೆ ನಡೆದಿದೆ. ಅಲ್ಲಿ ನಡೆದ ಪೂಜೆ, ಹಾಲುಕ್ಕಿಸುವ ಕಾರ್ಯಕ್ರಮ ಹಾಗೂ ಅನುಪಮಾ ಮನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
 

ಅನುಪಮಾ ಗೌಡ ತಮ್ಮ ಕನಸಿನ ಅರಮನೆಗೆ ‘ನಮ್ಮನೆ ಎಂದು ಹೆಸರಿಟ್ಟಿದ್ದು, ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ತಾರೆಯರು ಕೂಡ ಭಾಗಿಯಾಗಿದ್ದು, ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುವ ಮೂಲಕ ಅನುಪಮಾಗೆ ಶುಭ ಕೋರಿದ್ದಾರೆ. 
 

ಅನುಪಮಾ ಮನೆಯ ಗೃಹಪ್ರವೇಶಕ್ಕೆ ನಮೃತಾ ಗೌಡ (Namratha Gowda) , ನೇಹಾ ಗೌಡ, ಕಿಶನ್ ಬಿಳಗಲಿ, ದಿವ್ಯಾ ಉರುಡುಗ, ಕೃಷಿ ತಾಪಂಡ, ಅನುಪ್ರಭಾಕರ್, ಕಾರ್ತಿಕ್ ಸೇರಿ ಹಲವಾರು ಸೆಲೆಬ್ರಿಟಿಗಳು ಹಾಜಾರಾಗಿ ನಟಿಯ ಅತಿ ದೊಡ್ಡ ಕನಸು ನನಸಾಗಿಸಿದ್ದಕ್ಕೆ ಶುಭ ಕೋರಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. 
 

ಅನುಪಮಾ ಗೌಡ ಜೀವನದ ಅತ್ಯಂತ ದೊಡ್ಡ ಗಳಿಗೆಯ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದು, ಇದರಲ್ಲಿ ಅನುಪಮಾ ಮನೆ ಹೇಗಿದೆ ಅನ್ನೋದು ಕಾಣಿಸ್ತಿದೆ. ಹೊರಗಿನಿಂದ ದೊಡ್ಡದಾಗಿರೋ ಮನೆ ಇದಾಗಿದ್ದು, ಎರಡು ಅಥವಾ ಮೂರು ಮಳಿಗೆಯನ್ನು ಹೊಂದಿರಬಹುದು, ಮನೆ ಪೂರ್ತಿಯಾಗಿ ಬಿಳಿ ಬಣ್ಣವನ್ನ ಬಳಿದಿದ್ದು, ತುಂಬಾನೆ ಸುಂದರವಾಗಿರೋ ಮನೆ ಇದಾಗಿದೆ. 
 

Latest Videos

click me!