ಸ್ವರ್ಗದಲ್ಲಿರುವ ಕ್ಯಾಪ್ಟನ್ ಹಂಸಾ ಉಸ್ತುವಾರಿಯಾಗಿ ಟಾಸ್ಕ್ ವಿಚಾರದಲ್ಲಿ ನರಕವಾಸಿಗಳಿಗೆ ಮೋಸ ಮಾಡಿದ್ರಾ!?

First Published Oct 10, 2024, 12:27 AM IST

ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮೂರು ಟಾಸ್ಕ್‌ಗಳಲ್ಲಿ ನರಕ ಮತ್ತು ಸ್ವರ್ಗ ವಾಸಿಗಳ ನಡುವೆ ತೀವ್ರ ಪೈಪೋಟಿ ನಡೆಯಿತು. 'ಅಳಿವು ಉಳಿವು' ಟಾಸ್ಕ್‌ನಲ್ಲಿ ನರಕವಾಸಿಗಳು, 'ಗೊಬ್ಬರದ ಅಬ್ಬರ' ಟಾಸ್ಕ್‌ನಲ್ಲಿ ಸ್ವರ್ಗ ವಾಸಿಗಳು ಗೆಲುವು ಸಾಧಿಸಿದರು. ಮೂರನೇ ಟಾಸ್ಕ್‌ನಲ್ಲಿ ಸ್ವರ್ಗ ನಿವಾಸಿಗಳು ಮತ್ತೆ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮನೆಯಲ್ಲಿ ಮೂರು ಟಾಸ್ಕ್‌ ಗಳನ್ನು ಆಡಲಾಯ್ತು. ಮೊದಲ ಟಾಸ್ಕ್‌ ಅಳಿವು ಉಳಿವು ನಲ್ಲಿ  ನರಕವಾಸಿಗಳು ಗೆಲುವು ಕಂಡರು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರದ ತುಂಡುಗಳನ್ನು ತೆಗೆದುಕೊಂಡು ಮೀಸಲಿಟ್ಟ ವೇದಿಕೆಯಲ್ಲಿ ಇಡಬೇಕಿತ್ತು. ಮೂರು ರೌಂಡನ್ನು ಗೆದ್ದು ನರಕವಾಸಿಗಳು ಗೆಲುವು ಕಂಡರು. ಗೆದ್ದ ತಂಡದಲ್ಲಿ ಒಬ್ಬರನ್ನು ಸೇವ್‌ ಮಾಡುವ ಅವಕಾಶ ನಾಯಕನಾದ ಶಿಶಿರ್‌ ಶಾಸ್ತ್ರಿಗೆ ಸಿಕ್ಕಿತು. ಶಿಶಿರ್‌ ಅವರು ಸೇರಿ ಯಾರಾದರೂ ಒಬ್ಬರನ್ನು ಉಳಿಸಿಕೊಳ್ಳುವ ಅವಕಾಶ ಇತ್ತು ಆದರೆ  ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಶಿಶಿರ್‌ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು. ಮೋಕ್ಷಿತಾ ಜೊತೆಗೆ ತಾನು ಕೂಡ ಸೇಫ್‌ ಅಂದುಕೊಂಡರು. ಆದರೆ ಅಲ್ಲ ಒಬ್ಬರು ಮಾತ್ರ ಸೇವ್‌ ಆದರು. ಇನ್ನು ಮೋಕ್ಷಿತಾ ಅವರನ್ನು ಸೇವ್‌ ಮಾಡಿದ್ದಕ್ಕೆ ಚೈತ್ರಾ ಕುಂದಾಪುರ ಬೇಸರ ವ್ಯಕ್ತಪಡಿಸಿದರು.

ಎರಡನೇ ಟಾಸ್ಕ್‌ ಗೊಬ್ಬರದ ಅಬ್ಬರ ಎಂಬ ಟಾಸ್ಕ್ ನೀಡಿದರು. ಕೈಕಾಲುಗಳನ್ನು ಕಟ್ಟಿ ಇರುವ ಇಬ್ಬರು ಜೋಡಿ ಸ್ಪರ್ಧಿಗಳು ಗೊಬ್ಬರದ ತೊಟ್ಟಿಯಲ್ಲಿರುವ ಚೆಂಡುಗಳನ್ನು ತೆವಳಿಕೊಂಡೇ ತಂದು ಜೋಡಿಸಿ ತಂದು ಇಡಬೇಕಿತ್ತು.   ಇದರಲ್ಲಿ ಸ್ವರ್ಗ ವಾಸಿಗಳು ಗೆಲುವು ಕಂಡರು. ಆದರೆ ಈ ಟಾಸ್ಕ್‌ನಲ್ಲಿ ಕ್ಯಾಪ್ಟನ್‌ ಹಂಸಾ ಸರಿಯಾಗಿ ಉಸ್ತುವಾರಿ ನೋಡಿಲ್ಲವೆಂದು ಗಲಾಟೆ ನಡೆಯಿತು.  ಭವ್ಯ ಮತ್ತು ಧನ್‌ರಾಜ್ ಎರಡನೇ ಜೋಡಿಯಾಗಿ ಹೋದರು. ಧನ್‌ರಾಜ್ ಆಚಾರ್ ಅವರು ಒಂದು ಬಾರಿ ಎದ್ದು ನಿಂತು ಜಂಪ್‌ ಮಾಡಿಕೊಂಡು ಬಾಲ್‌ ಬಳಿ ನಿಂತರು. ಬಳಿಕ ಕೋರ್ಟ್ ನಿಂದ ಹೊರಬಂದು ಜಂಪ್  ಮಾಡಿಕೊಂಡೇ ಬಾಲ್‌ಗಳನ್ನು ಇಟ್ಟರು.  ಇದು ಗಲಾಟೆಗೆ ಕಾರಣವಾಯ್ತು.
 

Latest Videos


ರೀ ಮ್ಯಾಚ್‌ ಆಡಿಸುವ ಬಗ್ಗೆ ಹಂಸಾ ನಿರ್ಧರಿಸಲು ಮುಂದಾದಾಗ ನರಕ ವಾಸಿಗಳು ಮತ್ತು ಬಿಗ್‌ಬಾಸ್ ಕೂಡ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಹಂಸಾ ಅವರು ಸ್ವರ್ಗ ನಿವಾಸಿಗಳು ಗೆಲುವು ಕಂಡಿದ್ದಾರೆಂದು ಘೋಷಿಸಿದರು. ಇದರಲ್ಲಿ ಹಂಸ ಅವರು ಮೋಸ ಮಾಡಿದ್ದಾರೆಂದು ನರಕವಾಸಿಗಳು ಗಲಾಟೆ ನಡೆಸಿ ಇನ್ನು ಟಾಸ್ಕ್‌ , ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದರು. ಹೊಸ ರೂಲ್ ಮಾಡುವಂತಿಲ್ಲ ಎನ್ನುವುದನ್ನು ಬಿಗ್ಬಾಸ್‌ ಹೇಳಿದೆ ಅದು ಹೇಗೆ ನೀವು ಹೊಸ ರೂಲ್ ಮಾಡಿದಿರಿ ಎಂದು ಹಂಸಾಗೆ ಪ್ರಶ್ನೆ ಕೇಳಿದರು ಮತ್ತು ಖಂಡಿಸಿದರು. ಕೊನೆಗೆ ಉಸ್ತುವಾರಿಯ ನಿರ್ಧಾರದಂತೆ ಸ್ವರ್ಗ ನಿವಾಸಿಗಳು ಟಾಸ್ಕ್‌ ಗೆದ್ದಿದ್ದಾರೆಂದು ಬಿಗ್ಬಾಸ್‌ ಘೋಷಿಸಿದರು. ಇನ್ನು ತಂಡದ ನಾಯಕ ತ್ರಿವಿಕ್ರಮ್‌ ವಿಶೇಷ ಅಧಿಕಾರ ಪಡೆದುಕೊಂಡು ಉಗ್ರಂ ಮಂಜು ಅವರನ್ನು ಸೇವ್ ಮಾಡಿದರು.

ಮೂರನೇ ಟಾಸ್ಕ್‌ ನಲ್ಲಿ ಟೀಂ ನಾಯಕತ್ವ ಮಹಿಳಾ ಸ್ಪರ್ಧಿಗಳಾದ ಮೋಕ್ಷಿತಾ ಮತ್ತು ಗೌತಮಿ ಜಾಧವ್ ಅವರ ತೆಕ್ಕೆಗೆ ಹೋಯ್ತು. ಒಂದು ತಂಡದಿಂದ 5 ಮಂದಿ ಓರ್ವ ಎಕ್ಟ್ರಾ ಪ್ಲೇಯರ್  ಆಡಬೇಕಿತ್ತು. ನೆನಪಿನ ಶಕ್ತಿ ಚಾಕಚಕ್ಯತೆ , ದೈಹಿಕ ಶಕ್ತಿ, ಸಮನ್ವಯತೆ ಬಳಸಿ ಆಡಬೇಕಿತ್ತು. ಅದಕ್ಕೆ ಕಮಾನು ಬಿಲ್ಡಿಂಗ್ ಎಂದು ಹೆಸರಿಡಲಾಗಿತ್ತು. ಸ್ವರ್ಗದ ತಂಡದಿಂದ 5 ಜನ ಮತ್ತು ನರಕದಿಂದ 5 ಜನರನ್ನು ಮತ್ತು  ಎಕ್ಟ್ರಾ ಪ್ಲೇಯರ್ ಗಳನ್ನು ಆಯ್ಕೆ ಮಾಡಲಾಯ್ತು. ಅದರಂತೆ ಆಡಿದ ತಂಡದಲ್ಲಿ ಸ್ವರ್ಗ ನಿವಾಸಿಗಳು ಗೆದ್ದು ನರಕವಾಸಿಗಳ ವಿರುದ್ಧ 2-1 ಲೀಡ್‌ ನಲ್ಲಿದ್ದಾರೆ.
 

ಇಂದಿನ ಎಪಿಸೋಡ್‌ ನಲ್ಲಿ ಸ್ವರ್ಗದಿಂದ ಉಗ್ರಂ ಮಂಜು ಮತ್ತು ನರಕದಿಂದ ಮೋಕ್ಷಿತಾ ಅವರು ಸೇವ್ ಆಗಿದ್ದಾರೆ ಮೂರನೇ ಟಾಸ್ಕ್‌ ನಲ್ಲಿ ಸ್ವರ್ಗ ನಿವಾಸಿಗಳು ಗೆದ್ದಿದ್ದು ಮುಂದಿನ ಸಂಚಿಕೆಯಲ್ಲಿ ಮನೆಯಲ್ಲಿರುವ ಇಬ್ಬರು ಸದಸ್ಯರನ್ನು ನೇರವಾಗಿ ನಾಮಿನೇಟ್‌ ಮಾಡುವ ಅಧಿಕಾರ ಗೌತಮಿ ಅವರಿಗೆ ಬಂದಿದೆ. ಮನೆಯ ಮೂಲ ನಿಯಮ ಮುರಿದು ಇಡೀ ಮನೆ ನಾಮಿನೇಟ್‌ ಆಗಲು ಕಾರಣರಾದವರನ್ನು ಗೌತಮಿ ನಾಮಿನೆಟ್‌ ಮಾಡಿದಂತೆ ಕಾಣುತ್ತಿದೆ. ಆದರೆ ಇದು ಯಾವ ವಾರಕ್ಕೆ ನಾಮಿನೇಷನ್ ಎಂದು ತಿಳಿಯಲು ಮುಂದಿನ ಎಪಿಸೋಡ್ ವರೆಗೂ ಕಾಯಲೇಬೇಕು.

click me!