ಸೋಶಿಯಲ್ ಮೀಡಿಯಾ ವೈರಲ್ ಸ್ಟಾರ್ಸ್
ಕನ್ನಡ ಕಿರುತೆರೆಯಲ್ಲಿ ನಂಬರ್ ಟಿಆರ್‌ಪಿ ಸ್ಥಾನಕ್ಕೆ ಪೈಪೋಟಿ ನೀಡುತ್ತಲೇ ಬಂದಿರುವ ಜೀ ಕನ್ನಡ ವಾಹಿನಿಯಿಂದ ಬಿಗ್ ಬಾಸ್ ವೀಕ್ಷಕರನ್ನು ಸೆಳೆಯಲು ಕಿರುತೆರೆಯಲ್ಲೇ ದೊಡ್ಡ ಕಾರ್ಯಕ್ರಮವನ್ನು ವೀಕ್ಷಕರ ಮುಂದಿಡಲು ದೊಡ್ಡ ತಯಾರಿಯನ್ನೇ ಮಾಡಿಕೊಂಡಿದೆ. ಅದರ ನಡುವೆಯೇ, ಕಾಮಿಡಿ ಕಿಲಾಡಿಗಳು ವೇದಿಕೆಗೆ ಸಾಮಾಜಿಕ ಜಾಲತಾಣದ ವೈರಲ್ ಸ್ಟಾರ್‌ಗಳನ್ನು ಕರೆಸಿ ಅವರಿಂದ ಪ್ರತ್ಯೇಕವಾಗಿ ಸ್ಕಿಟ್ ಮಾಡಿಸಲಾಗಿದೆ. ಇದರಲ್ಲಿ ಬಹುತೇಕರು ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 11ರ ಮನೆಗೆ ಹೋಗುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ, ಅಲ್ಲಿಗೆ ಹೋಗದ ವೈರಲ್ ಸ್ಟಾರ್‌ಗಳು ಜೀ ಕನ್ನಡ ವೇದಿಕೆಗೆ ಆಗಮಿಸಿದ್ದಾರೆ.
ಮಂಜಣ್ಣ
ಬೋಳು ತಲೆ ಹಾಗೂ ಸಿಟ್ಟಿನಿಂದ ಕೆಲಸ ಮಾಡುತ್ತಾ 'ಬನ್ರೋ ಮನೆಯಲ್ಲಿ ಕೂತ್ಕೊಂಡು ಏನ್ರೋ ಮಾಡ್ತಿದ್ದೀರಾ? ಕೆಲಸ ಮಾಡಲು ಬನ್ರೋ..' ಎಂದು ಡೈಲಾಗ್ ಹೊಡೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮಂಜಣ್ಣ ಇದೀಗ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ..
ಮಂಡ್ಯ ರವಿ:
ಮಂಡ್ಯ ರವಿ: ಮಂಡ್ಯದಲ್ಲಿ ಬಾಡೂಟ, ಗದ್ದೆ ಕೆಲಸ, ನಾನ್‌ವೆಜ್ ಅಂಗಡಿಗಳಲ್ಲಿ ಕಾಮಿಡಿ ಮಾಡುವುದು ಹಾಗೂ ಡೈಲಾಗ್‌ಗಳನ್ನು ಹೇಳುವ ಮಂಡ್ಯ ರವಿ ಅವರೂ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಯರ್ ಕುಡುಪಲಿ ನಾಗರಾಜ್
ಲಾಯರ್ ಕುಡುಪಲಿ ನಾಗರಾಜ್: ಸಾಮಾಜಿಕ ಜಾಲತಾಣದಲ್ಲಿ ನಾನು ಲಾಯರ್ ಎಂದು ಕೆಲವು ವಿಧಿಗಳನ್ನು ಹಾಗೂ ಸೆಕ್ಷನ್‌ಗಳನ್ನು ಉಲ್ಲೇಖ ಮಾಡುತ್ತಾ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಿಶ್ರಣದೊಂದಿಗೆ ಮಾತನಾಡುತ್ತಾ ವೈರಲ್ ಆಗಿರುವ ಲಾಯರ್ ಕುಡುಪಲಿ ನಾಗರಾಜ್ ಅವರೂ ಕೂಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಉತ್ತರ ಕರ್ನಾಟಕದ ಹರೀಶ್ ಅವರ ಸ್ಕಿಟ್‌ನಲ್ಲಿ ಪಾತ್ರ ಮಾಡಿದ್ದಾರೆ.
ಕಾಫಿನಾಡು ಚಂದು
ಕಾಫಿನಾಡು ಚಂದು: ನಾನು ಪುನೀತ್ ರಾಜ್ ಕುಮಾರ್ ಅಭಿಮಾನಿ ಕಣಣ್ಣೋ ಎಂದು ಹೇಳುತ್ತಾ ವಿವಿಧ ಹೆಸರುಗಳನ್ನು ಹೇಳಿ ಅವರಿಗೆ ಬರ್ತಡೇ ವಿಶ್ ಮಾಡುತ್ತಿದ್ದ ಆಟೋ ಡ್ರೈವರ್ ಕಾಫಿನಾಡು ಚಂದು ಕೂಡ ಇದೀಗ ಜೀ ಕನ್ನಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಡೋಲೋ 650 ಮಾತ್ರೆ ಶಶಿರೇಖಾ
ಡೋಲೋ 650 ಮಾತ್ರೆ ಶಶಿರೇಖಾ: ಕೋವಿಡ್ ಅವಧಿಯಲ್ಲಿ ರೈತ ಕಾರ್ಮಿಕ ಮಹಿಳೆಯಾಗಿ ಕಾಣಿಸಿಕೊಂಡಿದ್ದ ಶಶಿರೇಖಾ ಅವರು ಕೋವಿಡ್ ಬಂದರೆ ನೀವೇನು ಮಾಡುತ್ತೀರಾ ಎಂದು ಖಾಸಗಿ ಚಾನೆಲ್ ಒಂದು ಪ್ರಶ್ನೆ ಮಾಡಿದ್ದಕ್ಕೆ 'ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ' ಎಂದು ಹೇಳಿದ್ದರು. ಇದಾದ ನಂತರ ಕನ್ನಡದ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಳು. ಆದರೆ, ಈ ಸಿನಿಮಾ ಬಿಡುಗಡೆ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇಲ್ಲ. ಇದೀಗ ಜೀ ಕನ್ನಡ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಿಪಿ ಕೀರ್ತಿ
ಕಿಪಿ ಕೀರ್ತಿ: ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ವಾಯ್ಸ್‌ನಿಂದ ಕೆಲವು ಡೈಲಾಗ್‌ಗಳನ್ನು ಹೊಡೆಯುತ್ತಾ ವೈರಲ್ ಆಕಿದ್ದ ಕಿಪಿ ಕೀರ್ತಿ ಅವರು ಇದೀಗ ಜೀ ಕನ್ನಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕುಳ್ಳ ದೇಹ ಹಾಗೂ ವಿಭಿನ್ನ ಮುಖಚರ್ಯೆ ಹೊಂದಿದ್ದರೂ ಇದ್ಯಾವುದಕ್ಕೂ ಧೃತಿಗೆಡದೇ ಜೀವನೋತ್ಸಾಹದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಜೀ ಕನ್ನಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅವರಿಗೊಂದಿಷ್ಟು ಯಶಸ್ಸು ಸಿಗಲಿ ಎನ್ನುವುದು ಅವರ ಅಭಿಮಾನಿಗಳ ಆಶಯ ಆಗಿದೆ.
ಕಿರುತೆರೆ ಲೋಕದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಯಿತೆಂದರೆ ಸಾಕು ಎಲ್ಲ ವಾಹಿನಿಗಳ ಧಾರಾವಾಹಿ ಪ್ರಿಯರು, ನ್ಯೂಸ್ ನೋಡುವವರು ಹಾಗೂ ಸಿನಿಮಾ ಇತರೆ ಸೇರಿದಂತೆ ಕಾರ್ಯಕ್ರಮಗಳನ್ನು ನೋಡುವವರು ಬಿಗ್ ಬಾಸ್ ರಿಯಾಲಿಟಿ ಶೋ ನೋಡಲು ಆರಂಭಿಸುತ್ತಾರೆ. ಇನ್ನು ವೀಕೆಂಡ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯಿತಿ ವೇಳೆ ಯಾರು ಬೈಗುಳ ತಗೊಳ್ತಾರೆ, ಯಾರು ಚಪ್ಪಾಳೆ ತೆಗೆದುಕೊಳ್ಳುತ್ತಾರೆ ಹಾಗೂ ಯಾರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಕುತೂಹಲ ನೋಡಲು ಬಿಗ್ ಬಾಸ್ ವೀಕೆಂಡ್ ನೋಡುಗರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಹೀಗಾಗಿ, ಇತರೆ ಟಿವಿ ಚಾನೆಲ್‌ಗಳಲ್ಲಿ ವೀಕ್ಷಕರ ಸಂಖ್ಯೆ ತೀರಾ ಇಳಿಮುಖ ಆಗಲಿದೆ.