ನಟ ಯದುಶ್ರೇಷ್ಠ ಮದುವೆಯಲ್ಲಿ ಮಿಥುನರಾಶಿ ಧಾರಾವಾಹಿ ಕಲಾವಿದರ ಮಿಲನ; ಮಿಸ್‌ ಆದ ಇಬ್ಬರು ಆರ್ಟಿಸ್ಟ್‌ ಯಾರು?

Published : Jul 15, 2025, 02:00 PM ISTUpdated : Jul 15, 2025, 02:20 PM IST

ಮಿಥುನರಾಶಿ ಧಾರಾವಾಹಿ ನಟ ಯದುಶ್ರೇಷ್ಠ ಅವರ ಮದುವೆಯಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಿದ್ದರು. ಅವರು ಯಾರು? ಯಾರು? 

PREV
113

ಮಿಥುನರಾಶಿ ಧಾರಾವಾಹಿ ನಟ ಯದುಶ್ರೇಷ್ಠ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಕನ್ನಡ ಕಿರುತೆರೆ ಬಳಗ ಹಾಜರಿ ಹಾಕಿತ್ತು.

213

ನಟ ಯದುಶ್ರೇಷ್ಠ ಅವರು ಮದುವೆಯಾಗಿರೋ ಹುಡುಗಿ ಯಾರು? ಎಲ್ಲಿಯವರು? ಲವ್‌ ಮ್ಯಾರೇಜ್?‌ ಅಥವಾ ಅರೇಂಜ್‌ ಮ್ಯಾರೇಜ್‌ ಎನ್ನುವ ಬಗ್ಗೆ ಮಾಹಿತಿ ಇಲ್ಲ.

313

ಯದುಶ್ರೇಷ್ಠ ಅವರು ಅಷ್ಟಾಗಿ ಖಾಸಗಿ ವಿಷಯಗಳನ್ನು ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ಅಂದಹಾಗೆ ಯದುಶ್ರೇಷ್ಠ ಅವರು ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಆಕ್ಟಿವ್‌ ಆಗಿಲ್ಲ.

413

ಮಿಥುನರಾಶಿ ಧಾರಾವಾಹಿ ಕಲಾವಿದರು ಸದ್ಯ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೂ ಕೂಡ ಇವರು ಯದುಶ್ರೇಷ್ಠ ಮದುವೆಗೆ ಬಂದಿದ್ದು ಖುಷಿಯ ವಿಷಯ. 

513

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮಿಥುನರಾಶಿ ಧಾರಾವಾಹಿ ಪ್ರಸಾರ ಆಗಿತ್ತು. ಮಿಥುನ್‌, ರಾಶಿ ಕಥೆ ಇಲ್ಲಿತ್ತು. ಆಟೋ ಓಡಿಸುತ್ತಿದ್ದ ಹುಡುಗಿ ತನ್ನ ಮನೆ ನೋಡಿಕೊಳ್ಳುತ್ತಾಳೆ, ಆ ಬಳಿಕ ಅನಿರೀಕ್ಷಿತವಾಗಿ ಮದುವೆ ಆಗುತ್ತಾಳೆ, ಆಮೇಲೆ ಎದುರಿಸುವ ಕತೆ ಇಲ್ಲಿದೆ. 

613

ಮಿಥುನರಾಶಿ ಧಾರಾವಾಹಿಯಲ್ಲಿ ಹೀರೋ ತಂಗಿ ಪಾತ್ರದಲ್ಲಿ ದೀಪಾ ಕಟ್ಟೆ ನಟಿಸಿದ್ದರು. ಅಂದಹಾಗೆ ಈಗ ಅವರು ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

713

ಮಿಥುನರಾಶಿ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ದೀಪಾ ಕಟ್ಟೆ ಅವರು ನಟಿಸುತ್ತಿದ್ದರು. ಆಗ ಅವರ ತಂದೆ ಪಾತ್ರದಲ್ಲಿ ನಟಿಸುತ್ತಿದ್ದ ನಟನ ಜೊತೆ ದೀಪಾ ಕಟ್ಟೆ ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ… 

813

ಮಿಥುನರಾಶಿ ಧಾರಾವಾಹಿ ನಾಯಕಿ ವೈಷ್ಣವಿ ಜೊತೆ ದೀಪಾ ಕಟ್ಟೆ ಫೋಟೋ ತೆಗೆಸಿಕೊಂಡಿದ್ದಾರೆ. ʼಮಿಥುನರಾಶಿʼ ಬಳಿಕ ಅವರು ಬೇರೆ ಭಾಷೆಯಲ್ಲಿ ಬ್ಯುಸಿಯಾದರು. ಈಗ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರಂತೆ. 

913

ಮಿಥುನರಾಶಿ ಧಾರಾವಾಹಿಯ ಬಹುತೇಕ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಧಾರಾವಾಹಿ ಹೀರೋ ಸ್ವಾಮಿನಾಥನ್‌, ನಟಿ ಹರಿಣಿ ಶ್ರೀಕಾಂತ್‌ ಅವರು ಬಂದಿರಲಿಲ್ಲ.  ನಟಿ ಹರಿಣಿ ಶ್ರೀಕಾಂತ್‌ ಅವರು “ನಾನು ಮಿಸ್‌ ಮಾಡ್ಕೊಂಡೆ” ಎಂದು ಬೇಸರ ಹೊರಹಾಕಿದ್ದಾರೆ.

1013

ದೀಪಾ ಕಟ್ಟೆ ಅವರು ರಕ್ಷಿತ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಬ್ಬರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ಈ ಜೋಡಿ ಮಧ್ಯೆ ಲವ್‌ ಆಗಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. 

1113

ತಂದೆ-ತಾಯಿಗೆ ದೀಪಾ ಕಟ್ಟೆ ಏಕೈಕ ಮಗಳು. ಮಧ್ಯಮ ವರ್ಗದಲ್ಲಿ ಹುಟ್ಟಿದ ದೀಪಾ ಕಟ್ಟೆ ಅವರು ಕಷ್ಟಪಟ್ಟು ಓದಿ ಇಂದು ನಟನೆ ಜೊತೆಗೆ ಕಂಪೆನಿಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. 

1213

ದೀಪಾ ಕಟ್ಟೆ ಅವರು ಶಿಕ್ಷಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಹೀಗಾಗಿ ಅವರು ನಟನೆ ಜೊತೆಗೆ ಬೇರೆ ಆದಾಯದ ಮೂಲವನ್ನು ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. 

1313

ಮಿಥುನರಾಶಿ ಧಾರಾವಾಹಿ ಅಂತ್ಯವಾಗಿ ಕೆಲ ವರ್ಷಗಳು ಕಳೆದರೂ ಕೂಡ, ಅವರ ನಡುವಿನ ಬಾಂಧವ್ಯ ಸುಂದರವಾಗಿದೆ. ಇದು ಖುಷಿಯ ವಿಷಯ. 

Read more Photos on
click me!

Recommended Stories