ಹಿಂದು ಹೆಸರು ಇಟ್ಟಿಲ್ಲ ಅಂದಿದ್ದಕ್ಕೆ ಯಾವ ಕಾಂಡೋಮ್‌ ಬಳಸ್ತೇನೆ ಅಂತಾನೂ ಕೇಳ್ತೀರಾ?; ನಿರೂಪಕಿ ಗರಂ

First Published Mar 18, 2024, 3:59 PM IST

ಸಾರ್ವಜನಿಕ ವೇದಿಕೆಯಲ್ಲಿ ಮಕ್ಕಳ ಹೆಸರಿನ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗ. ಉತ್ತರ ಕೊಟ್ಟು ಕೊಟ್ಟು ಗರಂ ಆದ ನಿರೂಪಕಿ.
 

ಮಾಜಿ ಸುದ್ದಿ ನಿರೂಪಕಿ ಮತ್ತು ನಟಿ ಫಾತಿಮಾ ಬಾಬು ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಫೇಸ್‌ಬುಕ್‌ನಲ್ಲಿ ವೈಯುಕ್ತಿಕ ಪ್ರಶ್ನೆ ಕೇಳಿದ ಅಭಿಮಾನಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. 

ಅಭಿಮಾನಿಯೊಬ್ಬ ಫಾತಿಮಾ ಬಾಬು ಅವರ ಫೇಸ್‌ಬುಕ್ ಫೋಟೋದ ಕಾಮೆಂಟ್‌ನಲ್ಲಿ 'ನಿಮ್ಮ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಏಕೆ ಇಡಲಿಲ್ಲ' ಎಂದು ಪ್ರಶ್ನಿಸಿದರು. ಅದಕ್ಕೆ ಫಾತಿಮಾ, 'ಇದರಿಂದ ನನ್ನ ಮಕ್ಕಳಿಗೇನು (Children) ತೊಂದರೆ ಇಲ್ಲ, ನಿಮಗೇಕೆ ತೊಂದರೆ ಆಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ.

ಕಾಮೆಂಟ್ ಮುಂದುವರೆಸಿದ ಅಭಿಮಾನಿ 'ನನಗೆ ಕೇಳಬೇಕೆಂದು ಅನಿಸಿದ್ದರಿಂದ ನಾನು ಪ್ರಶ್ನೆಯನ್ನು ಕೇಳಿದೆ' ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಫಾತಿಮಾ ಬಾಬು, ನನ್ನ ಮದುವೆಯನ್ನು ಹಿಂದೂ ವ್ಯಕ್ತಿಯೊಂದಿಗೆ ಮಸೀದಿಯಲ್ಲಿ ಮಾಡಿಕೊಂಡಿದ್ದೇನೆ. 

ಮತ್ತು ನನ್ನ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ಇಡಲಾಗಿದೆ. ಇದು ನಿಮಗೆ ಏಕೆ ದೊಡ್ಡ ವಿಷಯವಾಗಿದೆ' ಎಂದಿದ್ದಾರೆ. ಇದಕ್ಕೆ ಅಭಿಮಾನಿ 'ಇದು ಸಾರ್ವಜನಿಕ ವೇದಿಕೆ, ನಾನು ಅನುಚಿತವಾಗಿ ಏನನ್ನೂ ಕೇಳಿಲ್ಲ' ಎಂದು ಹೇಳಿದರು. 

ಅದಕ್ಕೆ ಫಾತಿಮಾ 'ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.

ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ಫಾತಿಮಾ ಬಾಬು ನಟಿಸಿದ್ದಾರೆ.  ಫಾತಿಮಾ ಬಾಬು ಮೂಲತಃ ಪುದುಚೇರಿಯವರು. ಮುಸ್ಲೀಂ ಮಲಯಾಳಂ ಕುಟುಂಬದಲ್ಲಿ ಹುಟ್ಟಿದ್ದವರು. 

ಫಾತಿಮಾ ಬಾಬು ದೂರದರ್ಶನದ ತಮಿಳು ಆವೃತ್ತಿಯಾದ ಡಿಡಿ ಪೊಧಿಗೈಗೆ ಸುದ್ದಿ ವಾಚಕರಾಗಿದ್ದರು.ಕಲ್ಕಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.

click me!