ನಮ್ಮ ಈ ಫೋಟೋಶೂಟ್ ‘ಹೀರಾಮಂಡಿ’ ಲುಕ್ ನಂತೆ ಕಾಣಲ್ವ? ಕೇಳ್ತಿದ್ದಾರೆ ಬೃಂದಾವನದ ಪುಷ್ಪಾ

Published : May 23, 2024, 04:13 PM IST

ಬೃಂದಾವನ ಸೀರಿಯಲ್ ನಟಿ ಅಮೂಲ್ಯ ಭಾರಧ್ವಜ್ ತಮ್ಮ ಹಳೆಯ ಫೋಟೋ ಶೂಟ್ ಶೇರ್ ಮಾಡಿದ್ದು, ಹೀರಾಮಂಡಿ ಲುಕ್ ನಂತೆ ಕಾಣಿಸುತ್ತಿದೆ ಎಂದಿದ್ದಾರೆ.   

PREV
17
ನಮ್ಮ ಈ ಫೋಟೋಶೂಟ್ ‘ಹೀರಾಮಂಡಿ’ ಲುಕ್ ನಂತೆ ಕಾಣಲ್ವ? ಕೇಳ್ತಿದ್ದಾರೆ ಬೃಂದಾವನದ ಪುಷ್ಪಾ

ಸದ್ಯ ದೇಶದೆಲ್ಲೆಡೆ ಭಾರಿ ಸದ್ದು ಮಾಡುತ್ತಿರುವ ವೆಬ್ ಸೀರಿಸ್ ಅಂದ್ರೆ ಅದು ಹೀರಾಮಂಡಿ (Heeramandi). ವೇಶ್ಯಾವಾಟಿಕೆಯ ಕುರಿತಾದ ಈ ಸೀರೀಸ್ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ನೆಟ್ ಫ್ಲಿಕ್ಸ್ ಎಂಟ್ರಿಯಾಗಿದೆ. 8 ಎಪಿಸೋಡ್ ಗಳ ಈ ಸೀರಿಸ್ ನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. 

27

ಇಲ್ಲಿವರೆಗೆ ತಮ್ಮ ರಾಯಲ್ ಸ್ಟೋರಿಯುಳ್ಳ ಸಿನಿಮಾಗಳ ಮೂಲಕವೇ ದೇಶಾದ್ಯಂತ ಜನಪ್ರಿಯತೆ ಪಡೆದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಇದೇ ಮೊದಲ ಬಾರಿಗೆ ಹೀರಾಮಂಡಿ ಮೂಲಕ ನೆಟ್ ಫ್ಲಿಕ್ಸ್ ನಲ್ಲಿ (Netflix) ಸೀರೀಸ್ ಬಿಡುಗಡೆ ಮಾಡಿದ್ದಾರೆ. ಹೀರಾಮಂಡಿ ಲುಕ್ ಸಹ ಎಲ್ಲೆಡೆ ವೈರಲ್ ಆಗುತ್ತಿದೆ. ಜನರು ತಾವು ಹೀರಾಮಂಡಿಯ ನಾಯಕಿಯರಂತೆ ಪೋಸ್ ನೀಡಿ ಫೋಟೋ ಶೂಟ್ ಕೂಡ ಮಾಡಿಸುತ್ತಿದ್ದಾರೆ. 
 

37

ಇದೀಗ ಬೃಂದಾವನ ಸೀರಿಯಲ್ ನಲ್ಲಿ ನಾಯಕಿ ಪುಷ್ಫಾ ಆಗಿ ನಟಿಸುತ್ತಿರುವ ಅಮೂಲ್ಯಾ ಭಾರಧ್ವಜ್ (Amulya Bharadwaj) ತಾವು ಈ ಹಿಂದೆ ಮಾಡಿಸಿದಂತಹ ಫೋಟೋ ಶೂಟ್ ಒಂದರ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಇದು ಹೀರಾಮಂಡಿ ಲುಕ್ ನಂತೆ ಕಾಣಿಸುತ್ತದೆ ಎಂದಿದ್ದಾರೆ. 
 

47

ಅಮೂಲ್ಯ ಭಾರಧ್ವಜ್ ಲಕ್ಷಣ ಮತ್ತು ಮೈನಾ ಖ್ಯಾತಿಯ ವಿಜಯಲಕ್ಷ್ಮೀ (Vijayalakshmi) ಮತ್ತು ಲಕ್ಷಣದಲ್ಲಿ ವಿಲನ್ ಆಗಿ ನಟಿಸಿದ ಪ್ರಿಯಾ ಜೊತೆಗೆ ಬಹಳ ಹಿಂದೆ ಈ ಫೋಟೋ ಶೂಟ್ ಮಾಡಿಸಿದ್ದರು, ಇದರಲ್ಲಿ ಮೂರು ಜನ ಸಹ ವಿಂಟೇಜ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಮೂವರು ಜೊತೆ ಜೊತೆಯಾಗಿ ನಿಂತು ಸಹ ಪೋಸ್ ನೀಡಿದ್ದು, ಇದು ಹೀರಾಮಂಡಿ ಲುಕ್ ನಂತಿದೆ. 
 

57

ರಂಜು ಗೌಡ ಮೇಕ್ ಓವರ್ ಮಾಡಿದ, ಬೀಡ್ ಟ್ರೆಶರ್ ಜ್ಯುವೆಲ್ಲರಿಯವರ ಆಭರಣ ಧರಿಸಿರುವ ಮತ್ತು ಅರುಣ್ ಕುಮಾರ್ ಕ್ಲಿಕ್ ಮಾಡಿರುವ ಫೋಟೋಗಳನ್ನು ಅಮೂಲ್ಯ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿ ನಮ್ಮ ಈ ಹಳೆಯ ಫೋಟೋ ಶೂಟ್ (Photoshoot), ಸ್ವಲ್ಪ ಹೀರಾಮಂಡಿ ಲುಕ್ ತರ ಕಾಣಿಸ್ತಿಲ್ವಾ ಎಂದು ಕ್ಯಾಪ್ಶನ್ ಬರೆದಿದ್ದಾರೆ (This old photoshoot of ours quite resembles the look of 'Heeramandi' Dont you think ? ). 
 

67

ಇದಕ್ಕೆ ಲಕ್ಷಣ ಖ್ಯಾತಿಯ ವಿಜಯಲಕ್ಷ್ಮಿ ಹೌದು, ಖಂಡಿತಾ, ಜೊತೆ ಕೆಲವು ಅತ್ಯುತ್ತಮ ಜೀವಗಳೊಂದಿಗೆ ಒಳ್ಳೆಯ ಫೋಟೋ ಶೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಇದಕ್ಕೆ ಬೇರಾವುದೇ ಕೆಟ್ಟ ಕಾಮೆಂಟ್ ಬಾರದಿರಲಿ ಎಂಬ ಮುಂದಾಲೋಚನೆಯಿಂದ ಕಾಮೆಂಟ್ ಸೆಕ್ಷನ್ ರಿಸ್ಟ್ರಿಕ್ಟ್ ಮಾಡಿದ್ದಾರೆ ನಟಿ ಅಮೂಲ್ಯ. 
 

77

ಸೀರಿಯಲ್ ಗಳ ಬಗ್ಗೆ ಹೇಳೋದಾದರೆ ಅಮೂಲ್ಯ ಬೃಂದಾವನ ಸೀರಿಯಲ್ ನಲ್ಲಿ ನಟಿಸುತ್ತಿದ್ದರೆ, ವಿಜಯಲಕ್ಷ್ಮೀ ಮೈನಾ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇನ್ನು ಪ್ರಿಯಾ ಶತಮರ್ಶನ್ ಯಾವುದೇ ಸೀರಿಯಲ್ ನಲ್ಲಿ (Serial) ನಟಿಸುತ್ತಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 
 

Read more Photos on
click me!

Recommended Stories