Brahmagantu Serial: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಬ್ರಹ್ಮಗಂಟುವಿನಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ದೀಪಾಳನ್ನು ಅರಸಿ ಊರಿಗೆ ಹೋಗಿರುವ ಚಿರುಗೆ, ನರಸಿಂಹ ಟಾಸ್ಕ್ ಕೊಟ್ಟಿದ್ದು, ಈ ದೃಶ್ಯ ನೋಡಿ ವೀಕ್ಷಕರು ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.
ಬ್ರಹ್ಮಗಂಟು ಧಾರಾವಾಹಿ ಇದೀಗ ಬದಲಾವಣೆಯ ಹಾದಿಯಲ್ಲಿದೆ. ಇಲ್ಲಿವರೆಗೆ ದಿಶಾ, ದೀಪಾ ಕಥೆ ನಡೆಯುತ್ತಿತ್ತು, ಇನ್ನು ಮುಂದೆ ಹೊಸ ಕತೆ ತೆರೆದುಕೊಳ್ಳುವ ಹಾಗೇ ಕಾಣಿಸುತ್ತಿದೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಇದೀಗ ಏನು ನಡೆಯುತ್ತಿದೆ. ವೀಕ್ಷಕರು ಯಾಕೆ ವಿಷ್ಣುವರ್ಧನ್ ಅವರ ಸಿನಿಮಾ ನೆನಪಿಸಿಕೊಂಡರು ಎಲ್ಲಾ ಮಾಹಿತಿ ಇಲ್ಲಿದೆ.
26
ಏನಾಗ್ತಿದೆ ಧಾರಾವಾಹಿಯಲ್ಲಿ?
ಸೌಂದರ್ಯ ದಿಶಾ ಬಳಿ ಚಿರುವಿಗೆ ಪ್ರಪೋಸ್ ಮಾಡಲು ಹೇಳುತ್ತಾಳೆ. ಅದರಂತೆ ಚಿರು ನಿಜವಾಗಿಯೂ ಗುಣಕ್ಕೆ ಬೆಲೆ ಕೊಡುತ್ತಾನೆಯೇ ಅಥವಾ ಸೌಂದರ್ಯಕ್ಕೆ ಬೆಲೆ ಕೊಡುತ್ತಾನೋ ಅನ್ನೋದನ್ನು ತಿಳಿಯಲು, ದೀಪಾ ದಿಶಾ ಆಗಿ ಚಿರುವಿಗೆ ಪ್ರಪೋಸ್ ಮಾಡಿಯೇ ಬಿಟ್ಟಳು. ಆದರೆ ದಿಶಾಳಲ್ಲೂ ದೀಪಾಳನ್ನೇ ಕಂಡ ಚಿರು ತಾನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಳ್ಳುತ್ತಾನೆ.
36
ದೀಪಾಗೆ ಆಘಾತ
ಚಿರು ತನ್ನನ್ನು ಪ್ರೀತಿಸ್ತಾ ಇಲ್ಲ, ದಿಶಾಳನ್ನು ಪ್ರೀತಿಸುತ್ತಿದ್ದಾನೆ. ಆತನಿಗೆ ಗುಣಕ್ಕಿಂತ ಹೆಚ್ಚು ಸೌಂದರ್ಯವೇ ಮುಖ್ಯ ಎಂದು ನಂಬಿಕೊಂಡ ದೀಪಾ ಹೃದಯ ಒಡೆದು ಚೂರಾಗುತ್ತದೆ. ಗಂಡನ ಜೊತೆ ಇರಲಾರದೆ ಚಿರುಗೂ ಹೇಳದೇ ಮನೆ ಬಿಟ್ಟು ತನ್ನ ತವರು ಮನೆ ಸೇರಿದ್ದಾಳೆ.
ಹೆಂಡತಿಯನ್ನು ಒಂದು ನಿಮಿಷವೂ ಕಾಣದೇ ಇರಲಾರದ ಚಿರು, ಆಕೆಯನ್ನು ಹುಡುಕಿಕೊಂಡು ಮಾವನ ಮನೆಗೆ ಹೊರಟೇ ಬಿಡುತ್ತಾನೆ. ಆದರೆ ಆತನನ್ನು ತಡೆಯುವ ದೀಪಾ ಅಣ್ಣ ನರಸಿಂಹ ಚಿರುಗೆ ಸವಾಲು ಹಾಕುತ್ತಾನೆ. ನನ್ನ ತಂಗಿ ಹಳ್ಳಿ ಹುಡುಗಿ ಅಲ್ವಾ? ಅವಳಲ್ಲಿರೋ ಒಳ್ಳೆ ಗುಣ ನಿಮ್ಮಂತ ಶ್ರೀಮಂತರಿಗೆ ಇಲ್ಲ ಎನ್ನುತ್ತಾ ತಾನು ತಂಗಿಯನ್ನು ಭೇಟಿಯಾಗಲು ಬಿಡೋದೆ ಇಲ್ಲ ಎನ್ನುತ್ತಾನೆ ನರಸಿಂಹ.
56
ಸಹೋದರನ ಸವಾಲು
ಕೊನೆಗೆ ಚಿರು ಹಾಗಿದ್ರೆ ನಿಮ್ ಪ್ರಕಾರ ನಾನು ತಪ್ಪು ಮಾಡಿದ್ದೀನಿ ಅಲ್ವಾ? ಅದನ್ನ ತಿದ್ದಿಕೊಳ್ಳೋದಕ್ಕೆ ನಾನು ಏನು ಮಾಡಬೇಕು ಹೇಳು ಎನ್ನುತ್ತಾನೆ. ಅದಕ್ಕೆ ನರಸಿಂಹ ನೀವು ಈ ಊರಿನಲ್ಲಿದ್ದು, ಯಾರ ಸಹಾಯಾನೂ ಇಲ್ಲದೇ, ದುಡಿದು ಸಂಪಾದನೆ ಮಾಡಿ ತೋರಿಸಿ ಎನ್ನುತ್ತಾನೆ. ಅದಕ್ಕೆ ಚಿರು ಒಪ್ಪಿಗೆ ಸೂಚಿಸುತ್ತಾನೆ.
66
ವಿಷ್ಣುವರ್ಧನ್ ಸಿನಿಮಾ ನೆನಪಿಸಿದ ಜನ
ಈ ದೃಶ್ಯವನ್ನು ನೋಡಿ ವೀಕ್ಷಕರು ವಿಷ್ಣುವರ್ಧನ್ ಅವರ ‘ ನೀನೆಲ್ಲೋ ನಾನಲ್ಲೆ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಕ್ಷಿತಾ ಮತ್ತು ಅನಿರುದ್ಧ ಮುಖ್ಯಪಾತ್ರದಲ್ಲಿ ನಟಿಸಿದ್ದರು. ನಾಯಕಿಗಾಗಿ ವಿದೇಶ ಬಿಟ್ಟು ಹಳ್ಳಿಗೆ ಬರುವ ನಾಯಕ, ಕೊನೆಗೆ ನಾಯಕಿಯ ಅಣ್ಣ ಅಂದ್ರೆ ವಿಷ್ಣುವರ್ಧನ್ ಹಾಕಿದ ಸವಾಲಿನಂತೆ ಊರಿನಲ್ಲಿದ್ದುಕೊಂಡು, ಯಾರ ಸಹಾಯವೂ ಇಲ್ಲದೇ ಬೆಳೆ ಬೆಳೆದು ತೋರಿಸುತ್ತಾನೆ. ಇದೀಗ ಬ್ರಹ್ಮಗಂಟು ಸೀರಿಯಲ್ ನಲ್ಲೂ ಸಹ ಅದೇ ನಡೆಯುತ್ತೆ. ಮುಂದೆ ಏನೆಲ್ಲಾ ಆಗುತ್ತೆ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.