Brahmagantu Serial Update: ರೂಪ ಎದುರು ಬಯಲಾಯ್ತು ದೀಪಾ ಗುಟ್ಟು… ತೆರೆದುಕೊಳ್ಳಲಿದೆ ದೊಡ್ಡ ಟ್ವಿಸ್ಟ್

Published : Dec 02, 2025, 03:26 PM IST

Brahmagantu: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತಂಗಿ ಮೇಲೆ ಯಾವಾಗಲೂ ಸೇಡು ತೀರಿಸಿಕೊಳ್ಳುವ ನೋಡುತ್ತಿರುವ ಅಕ್ಕ ರೂಪಾಗೆ ಈಗ ದೀಪಾ ಮತ್ತು ದಿಶಾ ಎಲ್ಲವೂ ಒಂದೇ ಅನ್ನೋದು ಗೊತ್ತಾಗಿದೆ. ಮುಂದೇನು ಮಾಡ್ತಾಳೆ ರೂಪ.

PREV
15
ಬ್ರಹ್ಮಗಂಟು ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಧಾರಾವಾಹಿ ಬ್ರಹ್ಮಗಂಟು. ಇದೀಗ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ತೆರೆದುಕೊಳ್ಳಲಿದೆ. ರೂಪಾ ಮುಂದೆ ದೀಪಾಳ ದೊಡ್ಡ ಸತ್ಯ ಬಹಿರಂಗವಾಗಿದೆ. ಇನ್ನೇನು ಮಾಡ್ತಾಳೆ ದೀಪಾ ಅನ್ನೋದನ್ನು ಕಾದು ನೋಡಬೇಕು.

25
ಸೀರಿಯಲ್ ನಲ್ಲಿ ಏನಾಗ್ತಿದೆ?

ಸೌಂದರ್ಯಳ ಅಹಂಕಾರವನ್ನು ಇಳಿಸಲು ದೀಪಾ, ಅರ್ಚನಾಳ ಸಹಾಯದಿಂದ ಇಂಗ್ಲಿಷ್, ಮಾತು , ಕೆಲಸ ಎಲ್ಲವನ್ನೂ ಕಲಿತು ದಿಶಾ ಆಗಿ ಬದಲಾಗಿದ್ದಳು. ಬ್ಯುಸಿನೆಸ್ ವುಮೆನ್ ಆಗಿ ಕಾಣಿಸಿಕೊಂಡಿರುವ ದಿಶಾ, ಮಾಡೆಲ್ ಆಗಿಯೂ ಮಿಂಚುತ್ತಿದ್ದಾಳೆ. ಆಫೀಸ್ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಾ, ಸೌಂದರ್ಯ ಎದುರು ಗೆಲ್ಲುತ್ತಿದ್ದಾಳೆ.

35
ಆಫೀಸ್ ಸೇರಿಕೊಂಡ ಅಕ್ಕ ರೂಪ

ಇದೀಗ ತನ್ನ ಗಂಡನ ಆಫೀಸ್ ಗೆ ಅಕ್ಕ ರೂಪ ಕೂಡ ಸೇರಿಕೊಂಡಿದ್ದಾಳೆ. ಅಕ್ಕನಿಗೆ ನೆರವಾಗಲು ದೀಪಾ ತುಂಬಾ ವಿಧದಲ್ಲಿ ಪ್ರಯತ್ನಿಸಿ, ಆಕೆಯ ಅಹಂಕಾರದ ಮುಂದೆ ಸೋತಿದ್ದಳು. ದೀಪಾಳನ್ನು ಹಾಗೂ ದಿಶಾಳನ್ನು ಏಗಾದ್ರು ಮಾಡಿ ಸೋಲಿಸಿ, ಚಿರಾಗ್ ಗೆ ತಾನು ಜೋಡಿಯಾಗಬೇಕೆಂಬ ಕನಸು ಕಾಣುತ್ತಿದ್ದಾಳೆ .

45
ರಹಸ್ಯ ಅನಾವರಣ

ಇದೀಗ ರೂಪಾ ಮುಂದೆ ದಿಶಾಳ ಸತ್ಯ ಅನಾವರಣ ಆಗಿದೆ. ಹೇಗಾದ್ರು ಮಾಡಿ ದಿಶಾಳನ್ನು ಆಫೀಸ್ ನಿಂದ ಓಡಿಸಬೇಕು ಎಂದು ಯೋಚನೆ ಮಾಡುತ್ತಿದ್ದ ರೂಪಾಗೆ ಇದೀಗ ದಿಶಾಳ ಬ್ಯಾಗಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ದಿಶಾ ಮತ್ತು ದೀಪಾ ಇಬ್ಬರೂ ಒಬ್ಬರೇ ಅನ್ನೋದು ತಿಳಿದಿದೆ. ಇನ್ನು ಮುಂದೆ ರೂಪ ಏನು ಮಾಡಲಿದ್ದಾಳೆ ಅನ್ನೋದನ್ನು ಕಾದು ನೋಡಬೇಕು.

55
ವೀಕ್ಷಕರು ಶಾಕ್

ಈ ಪ್ರೊಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಹೋಗಿ ಹೋಗಿ ಈ ರೂಪಾ ಮುಂದೆ ಎಲ್ಲಾ ಅನಾವರಣ ಆಗ್ಬೇಕಿತ್ತಾ? ಸೀರಿಯಲ್ ಇಲ್ಲಿವರೆಗೂ ಚೆನ್ನಾಗಿಯೇ ಓಡುತ್ತಿದ್ದು ಎಂದಿದ್ದಾರೆ. ಇನ್ನೂ ಕೆಲವರು ಇಲ್ಲ ಈ ರೂಪಾ ಏನೇ ಮಾಡಿದ್ರು, ದೀಪಾಳನ್ನು ಸೋಲಿಸೋಕೆ ಆಗೋದಿಲ್ಲ. ದೀಪಾ ಕೈಯಿಂದ ಎರಡು ಏಟು ಬಿದ್ದರೇನೆ ಎಲ್ಲಾ ಸರಿಯಾಗುತ್ತೆ ಎಂದು ಹೇಳುತ್ತಿದ್ದಾರೆ. ಮುಂದೇನಾಗುತ್ತೆ ಕಾದು ನೋಡಬೇಕು.

Read more Photos on
click me!

Recommended Stories