'ಬ್ರಹ್ಮಗಂಟು' ಧಾರಾವಾಹಿ ಎರಡು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ನಟಿ ದಿಯಾ ಪಾಲಕ್ಕಲ್, ದಿವಂಗತ ನಿರ್ಮಾಪಕ ದಿಲೀಪ್ ರಾಜ್ರನ್ನು ನೆನೆದು ಭಾವುಕರಾಗಿದ್ದಾರೆ. ಅಲ್ಲದೆ, ತಮ್ಮ ದೀಪಾ ಪಾತ್ರಕ್ಕಾಗಿ ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳುವ ಸವಾಲು ಮತ್ತು ನೋವಿನ ಬಗ್ಗೆ ಹಂಚಿಕೊಂಡಿದ್ದಾರೆ.
ಸೌಂದರ್ಯ ಮೇಲೋ, ಗುಣ ಮೇಲೋ ಎಂದು ತೋರಿಸುವ ಬ್ರಹ್ಮಗಂಟು ಸೀರಿಯಲ್ ಇದೀಗ ಅಂತಿಮ ಘಟ್ಟ ತಲುಪಿದೆ. ಗುಣನೇ ಮೇಲು ಎಂದು ತೋರಿಸುವ ಈ ಸೀರಿಯಲ್ನಲ್ಲಿ ಇದಾಗಲೇ ಹಲವಾರು ರೀತಿಯ ತಿರುವು ಬಂದಿದೆ. ಸೌಂದರ್ಯ ಮುಖ್ಯವಲ್ಲ ಎಂದು ಹೇಳಲು ದೀಪಾ ದಿಶಾ ಆಗಿ ಬಂದು ಸೌಂದರ್ಯನೇ ಮುಖ್ಯ ಎಂದು ಹೇಳ್ತಿರೋ ಸೌಂದರ್ಯಳ ಬಂಡವಾಳ ಬಯಲು ಮಾಡುತ್ತಿದ್ದಾಳೆ. ಇಂತಿಪ್ಪ ಸೀರಿಯಲ್ಗೆ ಇದೀಗ ಎರಡು ವರ್ಷಗಳ ಸಂಭ್ರಮ. 2024ರ ಜೂನ್ 17ರಿಂದ ಆರಂಭಗೊಂಡಿದ್ದ ಈ ಸೀರಿಯಲ್ ಕುರಿತು ದಿಶಾ-ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಅವರು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಸೀರಿಯಲ್ ನಿರ್ಮಾಪಕರಾಗಿರುವ, ಈಚೆಗೆ ಎಲ್ಲರನ್ನೂ ಅಗಲಿದ ನಟ ದಿಲೀಪ್ ರಾಜ್ ಅವರನ್ನ ನೆನೆದು ಕಣ್ಣೀರಿಟ್ಟಿದ್ದಾರೆ.
28
ದಿಯಾ ಪಾಲಕ್ಕಲ್ ಪೋಸ್ಟ್
“ಈ ಎರಡು ವರ್ಷಗಳ ಪ್ರಯಾಣ ಎಂತಹ ಅದ್ಭುತ. ದಾರಿಯುದ್ದಕ್ಕೂ ನಾವು ಸೃಷ್ಟಿಸಿದ ಪ್ರತಿ ಕ್ಷಣ, ಪ್ರತಿ ಪಾಠ ಮತ್ತು ಪ್ರತಿ ನೆನಪುಗಳ ಸುರಳಿಗೆ ಕೃತಜ್ಞರಾಗಿರುತ್ತೇವೆ. ನನ್ನ ಮೇಲೆ ನಂಬಿಕೆ ಇರಿಸಿ, ಈ ಅದ್ಭುತ ಅವಕಾಶವನ್ನ ನೀಡಿದ್ದಕ್ಕಾಗಿ ಜೀ ಕನ್ನಡ ಮತ್ತು ವಿದ್ಯಾ ಮೇಡಂಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ನಟಿ ದಿಯಾ ಪಾಲಕ್ಕಲ್ ಅವರು ತಮ್ಮ ಮೊದಲ ಸಾಲುಗಳಲ್ಲಿ ಹೇಳಿದ್ದಾರೆ.
38
ದಿಲೀಪ್ ರಾಜ್ ಅವರಿಗೆ ವಿಶೇಷ ಗೌರವ
“ನನ್ನ ಪ್ರಯಾಣದಲ್ಲಿ ನೀವು ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದೀರಿ. ಮಾರ್ಗದರ್ಶಕರಿಗಿಂತ ಹೆಚ್ಚಾಗಿ, ನೀವು ಯಾವಾಗಲೂ ನನ್ನನ್ನು ನಂಬಿದ, ನನ್ನನ್ನು ಪ್ರೋತ್ಸಾಹಿಸಿದ ಮತ್ತು ಪ್ರತಿ ಹೆಜ್ಜೆಯಲ್ಲೂ ಬೆಳೆಯಲು ನನಗೆ ಸಹಾಯ ಮಾಡಿದ ಮಾರ್ಗದರ್ಶಕ ಶಕ್ತಿಯಾಗಿದ್ದೀರಿ. "ದೀಪಾ(ಧಾರಾವಾಹಿಯ ಪಾತ್ರ) ಅವರೊಂದಿಗೆ ನಾನು ಸಾಧಿಸುವ ಪ್ರತಿಯೊಂದು ಮೈಲಿಗಲ್ಲು ನಿಮ್ಮ ಮಾರ್ಗದರ್ಶನ, ನಿಮ್ಮ ಪ್ರೋತ್ಸಾಹ ಮತ್ತು ನೀವು ನನ್ನಲ್ಲಿ ತುಂಬಿದ ವಿಶ್ವಾಸವನ್ನು ಯಾವಾಗಲೂ ನೆನಪಿಸುತ್ತದೆ. ಈ ಸುಂದರ ಪಾತ್ರದೊಂದಿಗೆ ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನ ಜೀವನ ಮತ್ತು ವೃತ್ತಿಜೀವನದ ಮಹತ್ವದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ನಾವು ಹಂಚಿಕೊಂಡ ನೆನಪುಗಳು, ಪಾಠಗಳು ಮತ್ತು ಕ್ಷಣಗಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತವೆ ಎಂದು ಹೇಳಿದ್ದಾರೆ.
“ನನ್ನ ಇಡೀ ‘ಬ್ರಹ್ಮಗಂಟು’ ಕುಟುಂಬಕ್ಕೆ, ಈ ಎರಡು ವರ್ಷಗಳನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ಮತ್ತು ನಮ್ಮ ಅದ್ಭುತ ಪ್ರೇಕ್ಷಕರಿಗೆ, ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಪ್ರತಿಯೊಂದು ಸಂದೇಶ, ಪ್ರತಿಯೊಂದು ಅಭಿನಂದನೆ ಮತ್ತು ಪ್ರತಿಯೊಂದು ಮೆಚ್ಚುಗೆ ನಮ್ಮ ಶಕ್ತಿ. ‘ಬ್ರಹ್ಮಗಂಟು’ ತಂಡದ ಜೊತೆಗೆ ಕಳೆದ 2ವರ್ಷದ ಸುಂದರ ನೆನೆಪುಗಳನ್ನಇನ್ನೂ ಅನೇಕ ಮೈಲಿಗಲ್ಲುಗಳವರೆಗೂ ಕೊಂಡೊಯ್ಯಲು ಉತ್ಸುಕಳಾಗಿದ್ದೇನೆ" ಎಂದು ದಿಯಾ ಪಾಲಕ್ಕಲ್ ಭಾವುಕ ಬರವಣಿಗೆ ಮೂಲಕ ‘ ಬ್ರಹ್ಮಗಂಟು ಧಾರಾವಾಹಿ ಎಷ್ಟು ಸ್ಪೆಷಲ್ ಎಂಬುವುದನ್ನ ತಿಳಿಸಿದ್ದಾರೆ.
58
ಬಾಲನಟಿಯಾಗಿ ಫೇಮಸ್
ಅಷ್ಟಕ್ಕೂ, ಸೀರಿಯಲ್, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್ ಮಾಡುವುದು ಇದೆ. ಆದರೆ ಈ ಸೀರಿಯಲ್ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ನನಗೆ ದೀಪಾ ಕ್ಯಾರೆಕ್ಟರ್ ಬಗ್ಗೆ ಆರಂಭದಲ್ಲಿ ಹೇಳಿದಾಗ ಸ್ವಲ್ಪ ಮುಜುಗರ ಆಯ್ತು. ಆದರೆ ಇದು ತುಂಬಾ ಚಾಲೆಂಜಿಂಗ್ ಎನ್ನಿಸಿತು. ನನ್ನದಲ್ಲದ ರೂಪದಿಂದ ನಟನೆ ಮಾಡುವುದು ಚಾಲೆಂಜಿಂಗ್ ಎನ್ನಿಸಿತು. ಬಾಲನಟಿಯಾಗಿ ನಟಿಸಿದ ಮೇಲೆ ಸಂಪೂರ್ಣ ನಾಯಕಿಯಾಗಿ ಇದೇ ಮೊದಲ ಸೀರಿಯಲ್. ಆದ್ದರಿಂದ ಚಾಲೆಂಜ್ ತೆಗೆದುಕೊಳ್ಳೋಣ ಎಂದು ತೆಗೆದುಕೊಂಡೆ ಎಂದಿದ್ದಾರೆ.
68
ಗಂಟೆಗಟ್ಟಲೆ ಮೇಕಪ್
ನನಗೆ ಕನಿಷ್ಠ ಒಂದು ಗಂಟೆಯಾದ್ರೂ ಕಪ್ಪು ಬಣ್ಣ ಬಳಿಯಲು ಬೇಕು. ಎಲ್ಲರಿಗಿಂತಲೂ ಮೊದಲೇ ನಾನು ಮೇಕಪ್ಗೆ ಕುಳಿತರೂ ನನ್ನ ಮೇಕಪ್ ಎಲ್ಲರಿಗಿಂತಲೂ ಕೊನೆಯದಾಗಿ ಆಗುತ್ತದೆ. ಮುಖಕ್ಕೆ ಮೈ, ಹೊಟ್ಟೆ, ಕುತ್ತಿಗೆ, ಬೆನ್ನು ಎಲ್ಲವೂ ಮ್ಯಾಚ್ ಮಾಡುವುದು ಕಷ್ಟವೇ ಎಂದಿದ್ದಾರೆ. ಹಲ್ಲಿಗೆ ಕ್ಲಿಪ್ ಹಾಕುವ ಮುನ್ನ ಡೆಂಟಿಸ್ಟ್ ಸಲಹೆ ಪಡೆದು ನನಗಾಗಿಯೇ ವಿಶೇಷ ರೀತಿಯಲ್ಲಿ ಕ್ಲಿಪ್ ರೆಡಿ ಮಾಡಿದರು. ಇದು ನನ್ನ ಹಲ್ಲಿಗೆ ಡ್ಯಾಮೇಜ್ ಮಾಡುವುದಿಲ್ಲ. ಆದರೆ ಕೆಲವೊಂದು ಈ ಕ್ಲಿಪ್ ತೆಗೆಯಲು ಪುರುಸೊತ್ತು ಇಲ್ಲದಷ್ಟು ಶೂಟಿಂಗ್ ಇರುತ್ತೆ. ಆ ಸಮಯದಲ್ಲಿ ತುಂಬಾ ತಲೆನೋವು ಬರುತ್ತೆ ಎಂದು ದಿಯಾ ಹೇಳಿದ್ದಾರೆ. ಆದರೆ ದೀಪಾ ಪಾತ್ರಕ್ಕೆ ಜನರು ತೋರುವ ಪ್ರೀತಿಯ ಮುಂದೆ ಈ ನೋವು ಏನೂ ಅನ್ನಿಸುವುದೇ ಇಲ್ಲ. ಜನ ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಅದೇ ಖುಷಿ ಎಂದಿದ್ದಾರೆ.
78
ತಮಿಳಿನಲ್ಲಿ ಫೇಮಸ್
ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.
88
ಮೊದಲ ಬಾರಿ ನಾಯಕಿ
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.